Sudeep – Shivarajkumr
ಸ್ಯಾಂಡಲ್ ವುಡ್ ನಲ್ಲಿ ಒಂದೇ ವಿಷಯದ ಬಗ್ಗೆ ಇಬ್ಬರು ಸ್ಟಾರ್ ನಟರು ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ಅಲ್ಲದೇ ಈಗಾಗಲೇ ಸಿನಿಮಾಗಳು ಕೂಡ ಅನೌನ್ಸ್ ಆಗಿವೆ. ಅಂದ್ಹಾಗೆ ಚಂದನವನದಲ್ಲಿ ಈ ಹಿಂದೆಯೂ ಇಂತಹ ಸನ್ನಿವೇಶಗಳು ಎದುರಾಗಿವೆ. ಈ ಹಿಂದೆ ರಾಕ್ಲೈನ್ ವೆಂಕಟಶ್ ಮದಕರಿ ನಾಯಕ ಸಿನಿಮಾ ಘೋಷಣೆ ಮಾಡಿದರು. ಮತ್ತೊಂದೆಡೆ ಸುದೀಪ್ ಸಹ ಮದಕರಿ ನಾಯಕನ ಕುರಿತು ಸಿನಿಮಾ ಮಾಡಬೇಕೆಂಬ ತಯಾರಿ ನಡೆಸಿದ್ದರು. ದರ್ಶನ್ ಮತ್ತು ಸುದೀಪ್ ಇಬ್ಬರಲ್ಲಿ ಮದಕರಿ ನಾಯಕನ ಬಗ್ಗೆ ಯಾರು ಸಿನಿಮಾ ಮಾಡಲಿದ್ದಾರೆ ಎಂಬ ಚರ್ಚೆ ನಡೆಯಿತು. ಅಂತಿಮವಾಗಿ ಸುದೀಪ್ ಈ ಪ್ರಾಜೆಕ್ಟ್ನಿಂದ ಹಿಂದೆ ಸರಿದರು.
ಇದೀಗ ಇಬ್ಬರು ಸ್ಟಾರ್ ನಟರು ಪ್ರತ್ಯೇಕ ಸಿನಿಮಾಗಳನ್ನ ಮಾಡುತ್ತಿದ್ದಾರೆ. ಆದ್ರೆ ವಿಪರ್ಯಾಸ ಎಂದ್ರೆ ಈ ಇಬ್ಬರೂ ಸಹ ಒಂದೇ ವಿಷಯದ ಬಗ್ಗೆ ಸಿನಿಮಾ ಮಾಡುತ್ತಿರೋದು. ಹೌದು.. ಅಂದ್ಹಾಗೆ ಯಾರು ಆ ಸ್ಟಾರ್ ನಟರು ಯಾವ ಸಿನಿಮಾ ಮಾಡ್ತಿದ್ದಾರೆ. ಯಾವ ವಿಚಾರದ ಬಗ್ಗೆ..?
ಕಿಚ್ಚ ಸುದೀಪ್ ಹಾಗೂ ಮತ್ತೊಂದೆಡೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಒಂದೇ ಕಥೆಯ ಆಧಾರದ ಮೇಲೆ ಪ್ರತ್ಯೇಕ ಪ್ರಾಜೆಕ್ಟ್ ಗಳಲ್ಲಿ ಕೆಲಸ ಮಾಡ್ತಿದ್ದಾರೆ.
ಅಂದ್ಹಾಗೆ ಮಹಾಭಾರತದಲ್ಲಿ ಬರುವ ಅಶ್ವತ್ಥಾಮನ ಪಾತ್ರದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಮಹಾಭಾರತದಲ್ಲಿ ಬರುವ ಪ್ರಮುಖ ಪಾತ್ರಗಳಲ್ಲಿ ಈ ಪಾತ್ರವೂ ಒಂದು. ಇದೇ ಪಾತ್ರವನ್ನ ಆಧರಿಸಿ ಸ್ಯಾಂಡಲ್ ವುಡ್ ನಲ್ಲಿ ಎರಡೆರೆಡು ಸಿನಿಮಾಗಳು ಘೋಷಣೆಯಾಗಿದೆ. ಹಾಗಂತ ಇದೇನು ಪೌರಾಣಿಕ ಸಿನಿಮಾವಲ್ಲ. ಆದ್ರೆ ಇದು ಅಶ್ವತ್ಥಾಮನ ಪಾತ್ರದ ಮೇಲೆಯೇ ಆಧಾರಿತವಾಗಿರಲಿದೆ.
ಸದ್ಯ ಭಜರಂಗಿ 2 ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಖ್ಯಾತಿಯ ಯುವ ನಿರ್ದೇಶಕ ಸಚಿನ್ ರವಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಇತ್ತ ‘ಫ್ಯಾಂಟಮ್’ ಸಿನಿಮಾದ ಬ್ಯುಸಿಯಾಗಿರುವ ಸುದೀಪ್ ಇದೀಗ ಮತ್ತೆ ತಮ್ಮ ಮುಂದಿನ ಚಿತ್ರಕ್ಕಾಗಿ ನಿರ್ದೇಶಕ ಅನೂಪ್ ಭಂಡಾರಿ ಅವರೊಂದಿಗೆ ಕೆಲಸ ಮಾಡಲಿದ್ದಾರೆ. ಈ ಸಿನಿಮಾಗೆ ಅಶ್ವತ್ಥಾಮ ಎಂದು ಹೆಸರಿಡಲಾಗಿಷದೆ. ವಿಶೇಷ ಎಂದ್ರೆ ಈ ಚಿತ್ರ ಕಿಚ್ಚ ಕ್ರಿಯೇಷನ್ಸ್ ಅಡಿ ಮೂಡಿಬರಲಿದ್ದು, ಖುದ್ದು ಸುದೀಪ್ ಅವರೇ ಬಂಡವಾಳ ಹೂಡಲಿದ್ದಾರೆ.
Sudeep – Shivarajkumr
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel