sudeep
ಮತ್ತೆ ವರ್ಕೌಟ್ ಶುರುಮಾಡಿದ ‘ಪೈಲ್ವಾನ್’ : ಟ್ವೀಟ್ ಮೂಲಕ ಸುದೀಪ್ ಮಾಹಿತಿ..!
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಅಭಿನಯದ ಬಹುನಿರೀಕ್ಷೆಯ ಫ್ಯಂಟಮ್ ಸಿನಿಮಾದ ಶೂಟಿಂಗ್ ಇನ್ನೇನು ಕಡೆಯ ಹಂತಕ್ಕೆ ತಲುಪಿದೆ. ಈಗಾಗಲೇ ಹೈದ್ರಾಬಾದ್ ನಲ್ಲಿ ಶೂಟಿಂಗ್ ಮುಗಿಸಿರುವ ಚಿತ್ರತಂಡ ಇದೀಗ ಕೇರಳ ಕಡೆಗೆ ಪಯಣ ಬೆಳಸಿದೆ. ಇದರ ನಡುವೆ ಸುದೀಪ್ ಅವರು ಮತ್ತೆ ವರ್ಕೌಟ್ ಪ್ರಾರಂಭ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್, ‘ಒಳ್ಳೆಯ ಆಹಾರ, ಯೋಗ್ಯವಾದ ಜೀವನ ಶೈಲಿ, ಸ್ವಲ್ಪ ಶಿಸ್ತು. ದೀರ್ಘ ಅಂತರದ ಬಳಿಕ ಮತ್ತೆ ವರ್ಕೌಟ್ ಪ್ರಾರಂಭ ಮಾಡಿರುವ. ಸುಮಾರು ಒಂದು ತಿಂಗಳಿಂದ ಫ್ಯಾಂಟಮ್ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ಮಾಡಿದ್ದು, ಎಲ್ಲರನ್ನು ಸುಸ್ತಾಗಿಸಿದೆ. ಕೊನೆಯ ಹಂತದ ಚಿತ್ರೀಕರಣವನ್ನು ಎದುರು ನೋಡುತ್ತಿದ್ದೀವಿ. ಡಿಸೆಂಬರ್ 4ರಿಂದ ಚಿತ್ರೀಕರಣ ಪ್ರಾರಂಭ’ ಎಂದು ಬರೆದುಕೊಂಡಿದ್ದಾರೆ.
ಕ್ರಿಸ್ ಮಸ್ ಕೇಕ್ ತಯಾರಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್..!
ಸುಮಾರು 3 ತಿಂಗಳಿಂದ ಸಿನಿಮಾತಂಡ ಹೈದರಾಬಾದ್ ನಲ್ಲಿ ಬೀಡುಬಿಟ್ಟಿತ್ತು. ಲಾಕ್ ಡೌನ್ ಕೊಂಚ ಸಡಿಲಿಕೆ ಆಗುತ್ತಿದ್ದಂತೆ ಬಹುನಿರೀಕ್ಷೆಯ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಿದ್ದ ಫ್ಯಾಂಟಮ್ ತಂಡ ಹೈದರಾಬಾದ್ ಚಿತ್ರೀಕರಣ ಮುಗಿಸಿ ಕೊನೆಯ ಹಂತದ ಚಿತ್ರೀಕರಣಕ್ಕೆ ಬಂದಿದ್ದಾರೆ. ಕೆಲ ಸಮಯದಿಂದ ವರ್ಕೌಟ್ ನಿಂದ ವಿರಾಮ ಪಡೆದುಕೊಂಡಿದ್ದ ಕಿಚ್ಚ ಇದೀಗ ಮತ್ತೆ ಜಿಮ್ ನತ್ತ ಮುಖ ಮಾಡಿದ್ದಾರೆ. ಡಿಸಂಬರ್ 4ರಿಂದ ಕೇರಳದಲ್ಲಿ ಫ್ಯಾಂಟಮ್ ಸಿನಿಮಾದ ಚಿತ್ರೀಕರಣ ನಡೆಯಲಿದೆ. ಇದಾದ ಬಳಿಕ ಕೊನೆಯ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ. ಬೆಂಗಳೂರಿನಲ್ಲಿ ಹೈ ವೋಲ್ಟೇಜ್ ಹಾಡಿನ ಚಿತ್ರೀಕರಣ ನಡೆಯಲಿದೆ ಎಂದು ಹೇಳಲಾಗ್ತಾಯಿದೆ.
sudeep
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








