ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಮೇಲಾದ ಹಲ್ಲೆಯನ್ನು ನವರಸ ನಾಯಕ ಜಗ್ಗೇಶ್ ಸೇರಿ ಸ್ಯಾಂಡಲ್ ವುಡ್ ತಾರೆಯರು ತೀವ್ರವಾಗಿ ಖಂಡಿಸಿದ್ದಾರೆ. ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಕೆಲವರು ಹುಚ್ಚ ವೆಂಕಟ್ ಮೇಲೆ ಹಲ್ಲೆ ನಡೆಸಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಹಲ್ಲೆಯ ವಿಡಿಯೋ ಕಿಚ್ಚ ಸುದೀಪ್ ಗಮನಕ್ಕೂ ಬಂದಿದ್ದು, ಹುಚ್ಚ ವೆಂಕಟ್ ಪರಿಸ್ಥಿತಿ ಕಂಡು ಮರುಗಿದ್ದಾರೆ. ಅಲ್ಲದೆ ಹುಚ್ಚ ವೆಂಕಟ್ ಗೆ ಸಾಂತ್ವನ ಹೇಳಿ, ಚಿಕಿತ್ಸೆ ಕೊಡಿಸಲು ಸುದೀಪ್ ಮುಂದಾಗಿದ್ದಾರೆ.
ಕಿಚ್ಚ ಸುದೀಪ್ ಅಭಿಮಾನಿಗಳು ಹಲ್ಲೆಗೊಳಗಾದ ವೆಂಕಟ್ ನೆರವಿಗೆ ನಿಂತಿದ್ದು, ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿಯಿಂದ ಸಹಾಯ ಮಾಡುತ್ತಿದ್ದಾರೆ. 
ಆತ್ಮೀಯರೆ..
ಕಳೆದ ಕೆಲ ದಿನಗಳಿಂದ ಮಾನಸಿಕವಾಗಿ ಜರ್ಜಿರಿತರಾಗಿ ಒಡ್ಡಾಡುತ್ತಿದ್ದ ಶ್ರೀ ಹುಚ್ಚ ವೆಂಕಟ್ ಅವರ ಮೇಲೆ ದೈಹಿಕವಾಗಿ ಹಲ್ಲೆಯಾಗುತ್ತಿದ್ದು, ಸಾರ್ವಜನಿಕರು ಸ್ವಲ್ಪ ಸಂಯಮ ಮತ್ತು ಕರುಣೆ ತೋರಿ.
ಶ್ರೀ ಹುಚ್ಚ ವೆಂಕಟ್ ರವರಿಗೆ ಚಿಕಿತ್ಸೆ ಕೊಡಿಸಲು ನಮ್ಮ ಕಿಚ್ಚ ಸುದೀಪ್ ಸರ್ ನಿರ್ಧರಿಸಿ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿಗೆ ಅನುಮತಿ ನೀಡಿದ್ದು, ಹುಚ್ಚ ವೆಂಕಟ್ ಅವರು ಎಲ್ಲೇ ಕಂಡು ಬಂದರೂ 6360334455 ಗೆ ಕರೆ ಮಾಡಿ ತಿಳಿಸಿ.. ಮಾನವೀಯತೆ ಗೆಲ್ಲುವ ಹಾಗೆ ಮಾಡಿ.. ಎಂದು ಕಿಚ್ಚನ ಅಭಿಮಾನಿಗಳು ಮನವಿ ಮಾಡಿದ್ದಾರೆ.








