ನಟ ಸುದೀಪ್ ತಾಯಿ ಇಹಲೋಕ ತ್ಯಜಿಸಿದ್ದು, ಅವರ ಮನೆಯಲ್ಲಿ ಶೋಕ ಮಡುಗಟ್ಟಿದೆ. ಸುದೀಪ್ ತಾಯಿ ಕಳೆದುಕೊಂಡು ಕಣ್ಣೀರು ಸುರಿಸುತ್ತಿದ್ದಾರೆ. ಈ ಮಧ್ಯೆ ಸುದೀಪ್ ಅವರ ಪುತ್ರಿ ಅಜ್ಜಿ ನೆನೆದು ಭಾವುಕ ಪತ್ರ ಬರೆದಿದ್ದಾರೆ.
ಸಾನ್ವಿ ಸುದೀಪ್ (Saanvi Sudeep) ಬರೆದ ಭಾವುಕ ಪತ್ರ ಈಗ ವೈರಲ್ ಆಗಿದೆ. ನಿಮ್ಮ ಮೆಸೇಜ್ ಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಿಮ್ಮ ಅಡುಗೆಯನ್ನು ಮಿಸ್ ಮಾಡಿಕೊಳ್ತಿದ್ದೇನೆ. ನಾನು ಹೊರಗೆ ಹೋದಾಗ ನೀವು ನನಗಾಗಿ ಕಾಯೋದನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ.
ನಿಮ್ಮ ಪಾದಕ್ಕೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಳ್ಳುವುದನ್ನು ಕಳೆದುಕೊಂಡಿದ್ದೇನೆ. ನೀವು ನನಗೆ ಕಚಗುಳಿ ಮಾಡುವುದನ್ನು ಕಳೆದುಕೊಂಡಿದ್ದೇನೆ. ಎಲ್ಲದಕ್ಕಿಂತ ಹೆಚ್ಚಾಗಿ ನಿಮ್ಮನ್ನು ಕಳೆದುಕೊಂಡಿದ್ದೇನೆ ಎಂದು ಪತ್ರ ಬರೆದು ಅಜ್ಜಿಯನ್ನು ನೆನೆದಿದ್ದಾರೆ.