ಬೆಂಗಳೂರು: ನಿನ್ನೆ ಸದನದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಗ್ಗೆ ಸಚಿವ ಕೆ.ಸುಧಾಕರ್ ಮಾತನಾಡಿದ ರೀತಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಮೇಶ್ ಕುಮಾರ್ ಅವರ ಘನತೆಗೆ ಸುಧಾಕರ್ ಧಕ್ಕೆ ತಂದಿದ್ದಾರೆ. ಸ್ಪೀಕರ್ ಪೀಠಕ್ಕೆ ಅಗೌರವ ಆಗಿದೆ. ಆಗ ನಾನು ಹೊರಗಡೆ ಇದ್ದೆ, ಒಳಗೆ ಬರುವಷ್ಟರಲ್ಲಿ ಈ ಘಟನೆ ನಡೆದಿದೆ. ಸುಧಾಕರ್ ಬಹಳ ಉದ್ಧಟತನದಿಂದ ಮಾತಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ರು.
ಚಂದನವನದ ಅಜರಾಮರ ಪ್ರೇಮಕಾವ್ಯಕ್ಕೆ ಮತ್ತೆ ಜೀವ: ರವಿ-ಹಂಸ ಜೋಡಿಯ ಐತಿಹಾಸಿಕ ಕ್ರೇಜಿ ಬ್ರಹ್ಮ ಮಹಾಸಂಗಮಕ್ಕೆ ಮುಹೂರ್ತ ಫಿಕ್ಸ್!
ಬೆಂಗಳೂರು: ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಹೆಸರುಗಳೆಂದರೆ ಅದು ಈಶ್ವರಿಯ ರವಿಚಂದ್ರನ್ ಮತ್ತು ನಾದಬ್ರಹ್ಮ ಹಂಸಲೇಖ. ಪ್ರೇಮಲೋಕದ ಮೂಲಕ ಕನ್ನಡಿಗರ ಎದೆಯಲ್ಲಿ ಪ್ರೇಮದ ಪರಾಕಾಷ್ಠೆಯನ್ನು ಬಿತ್ತಿದ...








