ನೈಟ್ ಕರ್ಪ್ಯೂ ಟೀಕೆಗೆ ಸುಧಾಕರ್ ಖಡಕ್ ಉತ್ತರ
ಬೆಂಗಳೂರು : ರಾಜ್ಯ ಸರ್ಕಾರದ ನೈಟ್ ಕರ್ಪ್ಯೂ ನಿರ್ಧಾರದ ಬಗ್ಗೆ ಭಾರಿ ಟೀಕೆಗಳು ವ್ಯಕ್ತವಾಗುತ್ತಿದ್ದು, ಈ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಖಡಕ್ ಉತ್ತರ ನೀಡಿದ್ದಾರೆ.
ಬೆಂಗಳೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್, ವಿರೋಧ ಪಕ್ಷಗಳು ಯಾವತ್ತು ವಿರೋಧ ಮಾಡಿಲ್ಲ ಹೇಳಿ. ಆರಂಭದಿಂದಲು ಸಹಕಾರ ಕೊಡ್ತೀವಿ ಅಂತ ವಿರೋಧ ಮಾಡುತ್ತಲೇ ಬಂದಿದ್ದಾರೆ. ಅವರು ಬೆಂಬಲ ಕೊಡ್ತಾರೆ ಅನ್ನೋ ನಂಬಿಕೆನೂ ಎಲ್ಲ ಎಂದು ಗರಂ ಆದರು.
ಇದೇ ವೇಳೆ ನೈಟ್ ಕರ್ಪ್ಯೂ ಬಗ್ಗೆ ಟೀಕೆಗಳ ಬಗ್ಗೆ ಮಾತನಾಡಿ, ರಾತ್ರಿ ಮಾತ್ರ ಕೊರೊನಾ ಬರುತ್ತೆ ಅಂತ ಸರ್ಕಾರಕ್ಕೆ ಅಷ್ಟೇನು ಜ್ಞಾನ ಇಲ್ಲದಿಲ್ಲ. ಆದ್ರೆ ಯುಕೆಯಲ್ಲಿ ಯಶಸ್ವಿಯಾಗಿದೆ. ಪಾರ್ಟಿ ಮೋಜು-ಮಸ್ತಿ ನಿಯಂತ್ರಣವಾಗಬೇಕು.
ಜೊತೆಗೆ ಆರ್ಥಿಕ ಸ್ಥಿತಿಗತಿಯ ಬಗ್ಗೆಯೂ ನೋಡಬೇಕು. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರಾತ್ರಿ 11 ಗಂಟೆಗೆ ಕಫ್ರ್ಯೂ ತಂದಿರೋದು.
ವ್ಯಾಪಾರಿಗಳು ಒಂದು ದಿನದ ಅವಕಾಶ ಕೇಳಿದ ಕಾರಣ ನಿನ್ನೆಯ ಕರ್ಪ್ಯೂ ಇಂದು ರಾತ್ರಿಗೆ ಬದಲಿಸಲಾಗಿದೆ. ಬಹಳ ಯೋಚನೆ ಮಾಡಿ ವಿವೇಚನೆಯಿಂದ ಈ ನೈಟ್ ಕರ್ಪ್ಯೂ ಜಾರಿ ಮಾಡಿದ್ದೇವೆ ಎಂದು ಹೇಳಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









