Suicideಬೆಂಗಳೂರುನ ನಲೆಮಂಗಲದ ಹುಸ್ಕೂರು ಗ್ರಾಮದ ರೈಲ್ವೆ ಹಳಿ ಬಳಿ ಅನುಮಾಸ್ಪದವಾಗಿ ಪ್ರೇಮಿಗಳ ಮೃತದೇಹ ಪತ್ತೆಯಾಗಿವೆ
ಮೃತ ಪ್ರೇಮಿಗಳಲ್ಲಿ ಯುವಕನ ಮಾಹಿತಿ ದೊರೆತಿದ್ದು 21 ವರ್ಷದ ಯುವನನ್ನು ನಾಗೇಂದ್ರ ಎಂದು ಗುರುತಿಸಲಾಗಿದೆ. ಅವನ ಜೋತಿಯಿದ್ದ ಯುವತಿಯ ಮೃತ ದೇಹದ ಮಾಹಿತಿ ದೊರೆತಿಲ್ಲ
ಈ ಘಟನೆಯು ಚಿಕ್ಕಬಾಣಾವರ ಮತ್ತು ಗೊಲ್ಲಹಳ್ಳಿ ರೈಲು ನಿಲ್ದಾಣಗಳ ಮಧ್ಯದ ಹುಸ್ಕೂರು ರೈಲ್ವೆ ನಿಲ್ದಾಣದ ಸಮೀಪ ಮೃತ ದೇಹ ಪತ್ತೆಯಾಗಿವೆ.
ಯುವಕ- ಯುವತಿ ಇಬ್ಬರು ಪರಸ್ಪರ ಪ್ರೀತಿಸಿ ಮನೆ ಬಿಟ್ಟು ಬಂದು ಮದುವೆಯಾಗಿದ್ದರು ಎಂದು ತಿಳಿದು ಬಂದಿದೆ.
ರೈಲು ಹಳಿ ಬಳಿ ಅನುಮಾನಾಸ್ಪದವಾಗಿ ಇವರ ಮೃತದೇಹ ಪತ್ತೆಯಾಗಿದ್ದು, ರೈಲಿಗೆ ಸಿಲುಕಿ ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕೆ ವ್ಯಕ್ತವಾಗಿದೆ.
ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.