ಪಂಜಾಬ್ ನೂತನ ಸಿಎಂ ಆಗಿ ಸುಖ್ ಜಿಂದರ್ ಸಿಂಗ್ ಆಯ್ಕೆ ಖಚಿತ
ಚಂಡೀಗಢ : ಪಂಜಾಬ್ ನ ನೂತನ ಮುಖ್ಯಮಂತ್ರಿಯಾಗಿ ಸುಖ್ ಜಿಂದರ್ ಸಿಂಗ್ ರಂಧಾವಾ ಆಯ್ಕೆಯಾಗಿದ್ದಾರೆ ಎಂದು ವರದಿಯಾಗಿದೆ.
ಸುಖ್ ಜಿಂದರ್ ಸಿಂಗ್ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅದರಲ್ಲೂ ಅವರು ನವಜೋತ್ ಸಿಂಗ್ ಸಿಧು ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು.
ಪಂಜಾಬ್ ಕಾಂಗ್ರೆಸ್ ನಲ್ಲಿ ಸಾಕಷ್ಟು ದಿನಗಳಿಂದ ಮುಸುಕಿನ ಗುದ್ದಾಟ ನಡೆಯುತ್ತಿತ್ತು.
ಮುಖ್ಯವಾಗಿ ನವಜೋತ್ ಸಿಂಗ್ ಸಿಧು ಮತ್ತು ಕ್ಯಾಪ್ಟನ್ ಅಮರಿಂದರ್ ಸಿಂಗ್ ಮಧ್ಯೆ ಹಾವು ಮುಂಗಸಿಯಂತಹ ವೈರತ್ವ ಇತ್ತು.
ಇದನ್ನು ಶಮನಗೊಳಿಸಲು ಕಾಂಗ್ರೆಸ್ ಹೈಕಮಾಂಡ್ ಸಾಕಷ್ಟು ಬಾರಿ ಪ್ರಯತ್ನಿಸಿ ಕೈ ಚೆಲ್ಲಿತ್ತು.
ಇನ್ನು ಮಹತ್ತರ ಬೆಳವಣಿಗೆಯಲ್ಲಿ ಸಿಎಂ ಸ್ಥಾನಕ್ಕೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ್ದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಅವರಿಗೆ ಯಾರಿಷ್ಟವೋ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಿಕೊಳ್ಳಲಿ ಎಂದು ಹೈಕಮಾಂಡ್ ವಿರುದ್ಧ ಬುಸುಗುಟ್ಟಿದ್ದರು.
ಅಮರಿಂದರ್ ಸಿಂಗ್ ರಾಜೀನಾಮೆ ನೀಡುತ್ತಿದ್ದಂತೆ ಸಿಎಂ ರೇಸ್ ನಲ್ಲಿ ನವಜೋತ್ ಸಿಂಗ್ ಸಿಧು ಹೆಸರು ಕೇಳಿಬಂದಿತ್ತು. ಆದ್ರೆ ಹೈಕಮಾಂಡ್ ಸುಖ್ ಜಿಂದರ್ ಸಿಂಗ್ ಗೆ ಮಣೆ ಹಾಕಿದೆ ಎಂದು ವರದಿಯಾಗಿದೆ.









