ಬೆಂಗಳೂರು : ನಟ, ರಾಜಕಾರಣಿ, ಮಂಡ್ಯದ ಗಂಡು ದಿವಂಗತ ಅಂಬರೀಶ್ ಅವರ 66ನೇ ಜನ್ಮ ದಿನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶುಭಾಶಯಗಳು ತಿಳಿಸಿದ್ದಾರೆ. ಹುಟ್ಟುಹಬ್ಬಕ್ಕೆ ಶುಭಕೋರಿ ಟ್ವೀಟ್ ಮಾಡಿರುವ ಬಿ.ಎಸ್. ಯಡಿಯೂರಪ್ಪ, ಜನಪ್ರಿಯ ನಟ, ಹಿರಿಯ ರಾಜಕಾರಣಿ, ದಿವಂಗತ ಅಂಬರೀಶ್ ಅವರ ಜನ್ಮ ದಿನವಿಂದು. ಅವರು ನಾಡು-ನುಡಿಗೆ ಸಲ್ಲಿಸಿದ ಸೇವೆಯನ್ನು ನೆನಪಿಸಿಕೊಳ್ಳೋಣ ಎಂದು ನಟ, ರಾಜಕಾರಣಿ ಅಂಬರೀಶ್ ಅವರನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೆ ಅಂಬರೀಶ್ ಕನ್ನಡ ಚಿತ್ರರಂಗದಲ್ಲಿ ಮರೆಲಾರದಂತೆ ಹೆಸರು ಮಾಡಿದ್ದಾರೆ. ಅಭಿಮಾನಿಗಳ ನೆಚ್ಚಿನ ರೆಬೆಲ್ ಸ್ಟಾರ್ ಆಗಿದ್ದರು. ಜೊತೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಬಿ.ಎಸ್. ಯಡಿಯೂರಪ್ಪ ಸ್ಮರಿಸಿದ್ದಾರೆ.
ಇನ್ನೊಂದೆಡೆ ಸಂಸದೆ ಹಾಗೂ ಅಂಬರೀಶ್ ಅವರ ಧರ್ಮ ಪತ್ನಿ ಸುಮಲತಾ ಅಂಬರೀಶ್ ಪತಿಗೆ ಜನ್ಮ ದಿನಕ್ಕೆ ಶುಭಕೋರಿದ್ದಾರೆ. ಅಲ್ಲದೆ ಪತಿಯನ್ನು ನೆನೆದು ಪ್ರೀತಿಯ ಹೃದಯವಂತನ ಸ್ಮರಣೆ ಎಂಬ ಕವಿತೆಯೊಂದು ಬರೆದಿದ್ದಾರೆ.
ಪತಿಯ ಜನ್ಮ ದಿನಕ್ಕೆ ಕವಿತೆ ಬರೆದ ಸಂಸದೆ ಸುಮಲತಾ ಅಂಬರೀಶ್

ಪಾತ್ರಕಷ್ಟೇ ಬಣ್ಣ ಹಚ್ಚಿದ ಹಮ್ಮೀರ
ನುಡಿದಂತಯೇ ಬದುಕಿದ ಸರದಾರ
ನಿಜ ಜೀವನದಲ್ಲಿ ಅದ್ಭುತ ಅಜಾತಶತ್ರು
ಮಾತು ಒರಟು ಮನಸು ಹೂವು
ನೀವಿಟ್ಟ ಒಂದೊಂದು ಹೆಜ್ಜೆಯೂ ಶಾಸನ ನಮಗೆ
ನೀವು ಹಾಕಿಕೊಟ್ಟ ಮಾರ್ಗದಲ್ಲೇ ನನ್ನ ಜನಸೇವೆಯ ಪಯಣ
ಎಲ್ಲರ ಹೃದಯದಲ್ಲಿ ನೆಲೆಸಿರುವ ನಿಮಗೆ ಸಾವೆಂಬುದು ಸುಳ್ಳು
ಈ ಜನ್ಮ ದಿನದ ಶುಭ ಸಂದರ್ಭದಲ್ಲಿ ನಿಮಗಿದೋ ಅಭಿಮಾನದ ಗೌರವ
ನಿಮ್ಮ ನೆನಪೇ ನಿತ್ಯ ಜ್ಯೋತಿ
ನಿಮ್ಮ ಸ್ಮರಣೆಯೇ ಅಮರ ಪ್ರೀತಿ
ಕವಿತೆಯ ಸಾಲುಗಳು ಮನಮುಟ್ಟತ್ತವೇ. ಜೊತೆಗೆ ಅಭಿಮಾನಿಗಳ ಪಾಲಿನ ರೆಬೆಲ್ ಆಗಿದ್ದ ನಟ, ರಾಜಕಾರಣಿ ಅಂಬರೀಶ್ ಜನ್ಮ ದಿನಕ್ಕೆ ಸಾಕಷ್ಟು ಅಭಿಮಾನಿಗಳು ಶುಭಕೋರಿದ್ದಾರೆ.








