ಯೋಗ ಗುರು ಬಾಬಾ ರಾಮ್ದೇವ್ ಗೆ ಸಮನ್ಸ್ Baba Ramdev
ನವದೆಹಲಿ : ಯೋಗ ಗುರು ಬಾಬಾ ರಾಮ್ ದೇವ್ ಗೆ ದೆಹಲಿ ಹೈಕೋರ್ಟ್ ಸಮನ್ಸ್ ಜಾರಿ ಮಾಡಿದೆ.
ಕೋವಿಡ್ ವಿರುದ್ಧದ ಲಸಿಕೆ ಎಂದು ಕೊರೊನಿಲ್ ಕಿಟ್ ಬಗ್ಗೆ ಬಾಬಾ ರಾಮ್ ದೇವ್ ಸುಳ್ಳು ಮಾಹಿತಿ ಹರಡುತ್ತಿದ್ದಾರೆ.
ಇದನ್ನು ತಡೆಯುವ ನಿಟ್ಟಿನಲ್ಲಿ ಬಾಬಾ ರಾಮ್ ದೇವ್ ವಿರುದ್ಧ ದೆಹಲಿ ವೈದ್ಯಕೀಯ ಸಂಸ್ಥೆಯು ದೆಹಲಿ ಹೈಕೋರ್ಟ್ ನಲ್ಲಿ ಮೊಕದ್ದಮೆ ಹೂಡಿತ್ತು.
ಇದೀಗ ಈ ಸಂಬಂಧ ಬಾಬಾ ರಾಮ್ ದೇವ್ ಅವರಿಗೆ ದೆಹಲಿ ಹೈಕೋರ್ಟ್ ಸಮನ್ಸ್ ಜಾರಿ ಮಾಡಿದೆ.
ಕೊರೊನಿಲ್ ಕಿಟ್ ಔಷಧವು ಕೊರೊನಾವನ್ನು ಗುಣಪಡಿಸಲ್ಲ. ರಾಮ್ ದೇವ್ ಅವರ ಹೇಳಿಕೆಗಳು ಜನರನ್ನು ತಪ್ಪುದಾರಿಗೆ ಎಳೆಯುತ್ತಿವೆ ಎಂದು ಆರೋಪಿಸಿ ವೈದ್ಯರ ತಂಡ ಹೈಕೋರ್ಟ್ ನಲ್ಲಿ ಮೊಕದ್ದಮೆ ಹೂಡಿತ್ತು. ಜುಲೈ 13 ರಂದು ಮುಂದಿನ ವಿಚಾರಣೆ ನಡೆಯಲಿದೆ.