ಗವಿಗಂಗಾಧರೇಶ್ವರ ದೇವಾಲಯ : ಸೂರ್ಯರಶ್ಮಿ ವಿಸ್ಮಯ
ಶಿವಲಿಂಗವನ್ನು ಸ್ಪರ್ಷಿಸಿದ ಸೂರ್ಯರಶ್ಮಿ..!
ಕಳೆದ ವರ್ಷ ಸೂರ್ಯನನ್ನ ಸ್ಪರ್ಷಿಸಿರಲಿಲ್ಲ ಸೂರ್ಯರಶ್ನಿ
ಇತಿಹಾಸ ಪ್ರಸಿದ್ಧ ಗವಿಗಂಗಾಧರೇಶ್ವರ
ಇತಿಹಾಸ ಪ್ರಸಿದ್ಧ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ಸೂರ್ಯ ರಶ್ಮಿ ಶಿವಲಿಂಗವನ್ನು ಸ್ಪರ್ಶಿಸಿದ್ದು , ಆ ಕ್ಷಣ ಈ ವಿಸ್ಮಯ ಕಂಡು ಪುಳಕಿತರಾದ ಭಕ್ತಾಧಿಗಳು ಓಂ ನಮಃ ಶಿವಾಯ ಎಂದು ಹರನನ್ನ ಜಪಿಸಿದ್ದಾರೆ..
ಸಂಕ್ರಾಂತಿ ಹಬ್ಬ ಎಂದರೆ ಸೂರ್ಯದೇವ ಪಥ ಬದಲಿಸುವ ಸಂಕ್ರಮಣ ಕಾಲ. ದಕ್ಷಿಣಾಯಣದಿಂದ ಉತ್ತರಾಯಣ ಪ್ರವೇಶಿಸುವ ಮುನ್ನ ಭಾಸ್ಕರ ಪರಶಿವನಿಗೆ ನಮಿಸಿ ಮುಂದೆ ಸಾಗುತ್ತಾನೆ. ಇಂತಹವೊಂದು ಕೌತಕು ಬೆಂಗಳೂರು ನಗರ ಗವಿಗಂಗಾಧೇಶ್ವರ ದೇಗುಲದಲ್ಲಿ ನಡೆಯುತ್ತದೆ.
ಆದರೆ ಕಳೆದ ವರ್ಷ ಸೂರ್ಯನ ಕಿರಣಗಳು ಶಿವಲಿಂಗವನ್ನು ಸ್ಪರ್ಶಿಸಿರಲಿಲ್ಲ. ಮೋಡ ಅಡ್ಡ ಬಂದ ಹಿನ್ನೆಲೆಯಲ್ಲಿ ಕಳೆದ ವರ್ಷ ಸೂರ್ಯರಶ್ಮಿ ಸ್ಪರ್ಶಿಸಿದ್ದು ಕಾಣಲಿಲ್ಲ.
ಹೀಗಾಗಿ ಅದು ಯಾವುದೋ ದೊಡ್ಡ ಕಂಟಕದ ಸೂಚನೆ ಎಂದೇ ಹೇಳಲಾಗಿತ್ತು.. ಈ ಬಾರಿಯೂ ಸೂರ್ಯ ರಶ್ಮಿ ಸ್ಪರ್ಷದ ಬಗ್ಗೆ ಸಾಕಷ್ಟು ಕುತೂಹಲಅನುಮಾನವೂ ಮೂಡಿತ್ತು.. ಆದ್ರೆ 5.30 ರೊಳಗೆ ಸೂರ್ಯರಶ್ನಿಯು ಶಿವಲಿಂಗವನ್ನ ಸ್ಪರ್ಷಿಸಿದೆ.. ನಂತರ ಸೂರ್ಯಾಭಿಷೇಕ ಜರುಗಿದೆ..