ವಿಧಾನಸಭೆಯಲ್ಲಿ ಸಂವಿಧಾನ ಕುರಿತು ಮಾತನಾಡುವಾಗ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಾವು ಅರ್ಧಂಬರ್ಧ ವಕೀಲರ ಕೆಲಸ ಮಾಡಿರುವುದಾಗಿ ಹೇಳಿದ್ದಾರೆ. ನಾನು ಪೂರ್ಣ ಪ್ರಮಾಣದ ವಕೀಲರಾಗಲು ಸಾಧ್ಯವಾಗಲಿಲ್ಲ. ವಕೀಲರ ಕೆಲಸ ಮುಂದುವರೆಸಿದರೆ ಜೀವನ ಅಲ್ಲೇ ಇರುತ್ತಿತ್ತು. ಇನ್ನು ಸಂಡೆ, ಮಂಡೆ ಲಾಯರ್ ಆಗಿದ್ದೆ. ಅರ್ಧ ರಾಜಕೀಯ, ಅರ್ಧ ಲಾಯರ್ ಆಗಿದ್ದೆ. ಆದ್ರೆ ಸಚಿವ ಜಗದೀಶ್ ಶೆಟ್ಟರ್ ಅವರು ಪೂರ್ಣ ವಕೀಲರಾಗಿದ್ದರೆ ನನಗಿಂತ ಬೆಟರ್ ಎಂದು ಹೇಳಿದರು.
ಈ ವೇಳೆ ಎದ್ದು ನಿಂತ ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ಸಂಡೆ, ಮಂಡೆ ಲಾಯರ್ ಎಂಬುದನ್ನು ಕಡತದಿಂದ ತೆಗೆದುಹಾಕಬೇಕು. ಲಾಯರ್ ನೋಬೆಲ್ ವೃತ್ತಿ ಎಂದರು. ಆಗ ಸಿದ್ದರಾಮಯ್ಯ ಸಂಡೆ ಮಂಡೆ ಎಂಬುದು ಅಸಂವಿಧಾನಿಕವಲ್ಲ. ನನಗೆ ನಾನೇ ಹೇಳಿಕೊಂಡಿರುವುದು . ಬೋಪಯ್ಯ ಬೇಡ ಎಂದು ಹೇಳುತ್ತಿದ್ದಾರೆ. ಅವರ ಖುಷಿಗಾಗಿ ತೆಗೆದು ಹಾಕಿ ಎಂದರು.








