ROHIT ಕ್ಯಾಪ್ಟನ್ಸಿಗೆ 9.5 ರೇಟಿಂಗ್ ಕೊಟ್ಟ ಸನ್ನಿ
ನಾಯಕನಾಗಿ ಚೊಚ್ಚಲ ಟೆಸ್ಟ್‌ನಲ್ಲಿ ಅದ್ಭುತ ಗೆಲುವು ಸಾಧಿಸಿದ ರೋಹಿತ್ ಶರ್ಮಾ ಬಗ್ಗೆ ಲೆಜೆಂಡರಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಪ್ರಶಂಸೆಗಳ ಸುರಿಮಳೆಗೈದಿದ್ದಾರೆ.
ನಾಯಕನಾಗಿ ರೋಹಿತ್ ತನ್ನ ಮೊದಲ ಪಂದ್ಯದಲ್ಲೇ ಎಲ್ಲರ ಗಮನ ಸೆಳೆದಿದ್ದಾರೆ.
ಅವರ ಬೌಲಿಂಗ್ ಬದಲಾವಣೆಗಳು ಮತ್ತು ಫೀಲ್ಡಿಂಗ್ ಪ್ಲೇಸ್‌ಮೆಂಟ್‌ಗಳು ಅತ್ಯುತ್ತಮವಾಗಿತ್ತು.
ಅವರ ಟೆಸ್ಟ್ ಕ್ಯಾಪ್ಟನ್ಸಿಗೆ ನಾನು 10 ಕ್ಕೆ 9.5 ರೇಟಿಂಗ್ ನೀಡುತ್ತೇನೆ ಎಂದು ಸುನೀಲ್ ಗವಾಸ್ಕರ್ ಹೇಳಿದ್ದಾರೆ.
ರೋಹಿತ್ ಶರ್ಮಾ ಉತ್ತಮವಾಗಿ ಫೀಲ್ಡಿಂಗ್ ಸೆಟ್ ಮಾಡುತ್ತಾರೆ.
ಹೀಗಾಗಿ ಆಟಗಾರರು ಹೆಚ್ಚಾಗಿ ಬದಲಾಗುವ ಅವಶ್ಯಕತೆ ಇರೋದಿಲ್ಲ. ಇಲ್ಲಿ ಅವರಿಗೆ ಐಪಿಎಲ್ ಅನುಭವ ಸಹಾಯವಾಗುತ್ತಿದೆ ಎಂದಿದ್ದಾರೆ.
ಇನ್ನು ಬೌಲಿಂಗ್ ನಲ್ಲಿ ಜಡೇಜಾರನ್ನು ಸರಿಯಾದ ಸಮಯಕ್ಕೆ ಬಳಸಿಕೊಳ್ಳಲಾಗಿದೆ ಎಂದ ಗವಾಸ್ಕರ್. ರೋಹಿತ್ ಶರ್ಮಾ ಕ್ಯಾಪ್ಟನ್ಸಿಯಿಂದಲೇ ಟೆಸ್ಟ್ ಪಂದ್ಯ ಮೂರೇ ದಿನದಲ್ಲಿ ಮುಕ್ತಾಯವಾಗಿದೆ.
ರೋಹಿತ್ ಶರ್ಮಾ ಸ್ವಂತ ನಿರ್ಧಾರಗಳನ್ನು ತೆಗೆದುಕೊಂಡು ತಂಡವನ್ನು ಮುಂದೆ ನಿಂತು ನಡೆಸುತ್ತಿದ್ದಾರೆ.
ರೋಹಿತ್ ಶರ್ಮಾಗೆ ಹಿರಿಯ ಆಟಗಾರರು ಸಹಕರಿಸುತ್ತಿದ್ದಾರೆ, ಇದು ಟೀಂ ಇಂಡಿಯಾಗೆ ಶುಭದ ಸಂಕೇತ ಎಂದಿದ್ದಾರೆ ಗವಾಸ್ಕರ್.
sunil-gavaskar-rated-rohit-sharma-captaincy









