ಏಯ್…ನೀನು ಸೆಂಚೂರಿ ಹೊಡೆಯುವುದು ಬೇಡ್ವಾ…? ಏಕಾಗ್ರತೆ…ಗವಾಸ್ಕರ್‍ಗೆ ಹೀಗೆ ಹೇಳುತ್ತಿದ್ದ ವಿರೋಧಿ ಆಟಗಾರ ಯಾರು…?
ಅರೇ… ಹಿಂಗೂ ಇರುತ್ತಾ ? ಕ್ರೀಡೆ ಅಂದ್ರೆ ಅಲ್ಲಿ ಪ್ರತಿಸ್ಪರ್ಧಿ ಇರಲೇಬೇಕು. ಅದ್ರಲ್ಲೂ ಕ್ರಿಕೆಟ್ ಅಂದ್ರೆ ಚೆಂಡು – ಬ್ಯಾಟಿನ ಸಮರ. ಬ್ಯಾಟ್ಸ್‍ಮೆನ್ ಮತ್ತು ಬೌಲರ್‍ಗಳ ನಡುವಿನ ಸ್ಪರ್ಧೆ ಅಷ್ಟೋ ರೋಚಕವಾಗಿರುತ್ತದೆ. 22 ಯಾರ್ಡ್‍ನ ಪಿಚ್ ನಲ್ಲಿ ನಡೆಯುವಂತಹ ಈ ಹೋರಾಟದಲ್ಲಿ ಕೆಲವೊಂದು ಬಾರಿ ಮಾತಿನ ಚಕಮಕಿ, ಸ್ಲೆಡ್ಜಿಂಗ್ ಸೇರಿದಂತೆ ಸಾಕಷ್ಟು ಜಟಾಪಟಿಗಳು ನಡೆಯುತ್ತ ಇರ್ತಾವೆ. ಹಾಗಂತ ಇದು ಇಂದು ನಿನ್ನೆಯದಲ್ಲ. ಕ್ರಿಕೆಟ್ ಶುರುವಾದಗಿನಿಂದ ಇಂತಹ ಘಟನೆಗಳು ನಡೆಯುತ್ತಾ ಬಂದಿವೆ.
ಆದ್ರೆ ನೀವು ಅಚ್ಚರಿ ಪಡುತ್ತೀರಾ…! ಸುನೀಲ್ ಗವಾಸ್ಕರ್ ಕ್ರಿಕೆಟ್ ಬದುಕಿನಲ್ಲಿ ನಡೆದ ಘಟನೆಯನ್ನು ಕೇಳಿದಾಗ. ಯಾಕಂದ್ರೆ, ಎದುರಾಳಿಯ ಪ್ರತಿ ಆಟಗಾರರು ಗವಾಸ್ಕರ್ ಅವರ ವಿಕೆಟ್ ಉರುಳಿಸಬೇಕು ಅಂತ ಪ್ಲಾನ್ ಮಾಡ್ತಾ ಇರುತ್ತಿದ್ದರು. ಆದ್ರೆ ವೆಸ್ಟ್ ಇಂಡೀಸ್‍ನ ಆ ಆಟಗಾರ ಒಬ್ಬ ಮಾತ್ರ ಗವಾಸ್ಕರ್‍ಗೆ ಪ್ರೇರಣೆ ಮತ್ತು ಸ್ಪೂರ್ತಿ ನೀಡುತ್ತಿದ್ದರು. ಹಾಗಿದ್ರೆ ಯಾರು ಗೊತ್ತಾ ಆ ಕ್ರಿಕೆಟಿಗ..?
ಹೌದು, ಸುನೀಲ್ ಗವಾಸ್ಕರ್ ತನ್ನ ಹಳೆದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಅದ್ರಲ್ಲೂ ತನಗೆ ವೆಸ್ಟ್ ಇಂಡೀಸ್‍ನ ಆಟಗಾರರೊಬ್ಬರು ಹೇಗೆ ಮೈದಾನದಲ್ಲಿ ಪ್ರೇರಣೆ ನೀಡುತ್ತಿದ್ದದ್ದು ಎಂಬುದನ್ನು ಗವಾಸ್ಕರ್ ಹೇಳಿಕೊಂಡಿದ್ದಾರೆ.
ಅದು 1971ರ ವೆಸ್ಟ್ ಇಂಡೀಸ್ ಸರಣಿ. ನಾನು ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ್ದ ಸರಣಿ. ಆ ಸರಣಿಯ ಪಂದ್ಯಗಳಲ್ಲಿ ನಾನು ನಿಜವಾಗಿಯೂ ಅಚ್ಚರಿಗೊಂಡಿದ್ದೆ. ಯಾಕಂದ್ರೆ ನಾನು ಕೆಟ್ಟ ಹೊಡೆತಗಳಿಗೆ ಮುಂದದಾಗ ಅಥವಾ ಪ್ರಯತ್ನ ಪಟ್ಟಾಗ ಎದುರಾಳಿ ಆಟಗಾರರೊಬ್ಬರು ನನ್ನ ಕಿವಿಯಲ್ಲಿ ಬಂದು ಸಲಹೆ-ಮಾರ್ಗದರ್ಶನ ನೀಡುತ್ತಿದ್ದರು. ಅದು ವಿಕೆಟ್ ಕೀಪರ್, ಅವರ ತಂಡದ ಆಟಗಾರರಿಗೂ ಗೊತ್ತಾಗುತ್ತಿರಲಿಲ್ಲ. ಆ ರೀತಿ ಬಂದು ನನಗೆ ಪ್ರೇರಣೆ ನೀಡುತ್ತಿದ್ದರು. ಹೌದು ಆ ಕ್ರಿಕೆಟಿಕ ಯಾರು ಅಂದ್ರೆ ವೆಸ್ಟ್ ಇಂಡೀಸ್‍ದ ದೈತ್ಯ ಪ್ರತಿಭೆ, ನಾಯಕ ಕೂಡ ಆಗಿದ್ದ ರೋಹನ್ ಕನ್ಹೈ.
ಏಯ್… ಏಕಾಗ್ರತೆಯಿಂದ ಆಡು. ನೀನು ಸೆಂಚೂರಿ ಹೊಡೆಯುವುದು ಬೇಡ್ವಾ ? ನಿನಗೆ ಏನು ಆಗುತ್ತಿದೆ ? ಈ ಮಾತುಗಳನ್ನು ಕೇಳುತ್ತಿದ್ದಾಗ ನನಗೆ ಅಚ್ಚರಿ. ಯಾಕಂದ್ರೆ ಆ ಮಾತುಗಳು ವಿರೋಧಿ ತಂಡದ ಪ್ರಮುಖ ಆಟಗಾರನಾರದ್ದು. ಆದ್ರೂ ಅವರಿಗೆ ನಾನು ಶತಕ ಹೊಡೆಯಬೇಕಾಗಿತ್ತು. ನನಗೆ ನಂಬೋಕೆ ಆಗುತ್ತಿಲ್ಲ ಅಂತ ಗವಾಸ್ಕರ್ ಹೇಳಿಕೊಂಡಿದ್ದಾರೆ.
ಸುನೀಲ್ ಗವಾಸ್ಕರ್ ಅವರು ಆ ಸರಣಿಯಲ್ಲಿ ಮೂರು ಶತಕ ಹಾಗೂ ಒಂದು ದ್ವಿಶತಕ ದಾಖಲಿಸಿದ್ದರು. ಅಲ್ಲದೆ ಆ ಪಂದ್ಯದ ಮೂಲಕ ರೋಹನ್ ಕನ್ಹೈ ಮತ್ತು ಗವಾಸ್ಕರ್ ಉತ್ತಮ ಸ್ನೇಹಿತರಾದ್ರು. ತನ್ನ ಕ್ರಿಕೆಟ್ ಬದುಕಿಗೆ ಪ್ರೇರಣೆಯಾಗಿದ್ದ ರೋಹನ್ ಅವರ ಹೆಸರನ್ನೇ ಗವಾಸ್ಕರ್ ತನ್ನ ಮಗನಿಗೂ ಇಟ್ಟಿದ್ದರು. ಹಾಗಂತ ರೋಹನ್ ಕನ್ಹೈ ಅವರು ಬರೀ ಗವಾಸ್ಕರ್‍ಗೆ ಮಾತ್ರ ಪ್ರೇರಣೆಯಾಗಿರಲಿಲ್ಲ. ಅನೇಕ ಕ್ರಿಕೆಟಿಗರಿಗೂ ಸ್ಪೂರ್ತಿಯಾಗಿದ್ದರು. ರೋಹನ್ ಕನ್ಹೈ ಭಾರತೀಯ ಮೂಲದ ವೆಸ್ಟ್ ಇಂಡೀಸ್ ಆಟಗಾರ. ರೋಹನ್ ಅವರೊಬ್ಬ ಅದ್ಭುತ ಬ್ಯಾಟ್ಸ್‍ಮೆನ್ ಹಾಗೇ ಒಳ್ಳೆಯ
ವ್ಯಕ್ತಿತ್ವವನ್ನು ಹೊಂದಿದ್ದ ಮನಷ್ಯ. ನಾನು ಭೇಟಿ ಮಾಡಿದವರಲ್ಲಿ ನಾನು ಕಂಡ ಶ್ರೇಷ್ಠ ವ್ಯಕ್ತಿ ರೋಹನ್ ಕನ್ಹೈ ಅಂತ ಗವಾಸ್ಕರ್ ಹೇಳಿದ್ದಾರೆ.








