ವಿರಾಟ್ ಕ್ಯಾಪ್ಟನ್ಸಿ ವಿದಾಯದ ಬಗ್ಗೆ ಗವಾಸ್ಕರ್ ಗೆ ಮೊದಲೇ ಗೊತ್ತಿತ್ತಂತೆ
ಟೆಸ್ಟ್ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ವಿದಾಯ ಘೋಷಿಸಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ವಿರಾಟ್ ಏಕಾಏಕಿ ಈ ನಿರ್ಧಾರ ತೆಗೆದುಕೊಂಡಿದ್ದು, ಅಭಿಮಾನಿಗಳಿಗೆ ಶಾಕ್ ನೀಡಿದೆ.
ಆದ್ರೆ ವಿರಾಟ್ ವಿದಾಯದ ಬಗ್ಗೆ ಟೀಂ ಇಂಡಿಯಾದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಅವರಿಗೆ ಮೊದಲೇ ಗೊತ್ತಿತ್ತಂತೆ.
ವಿರಾಟ್ ಕೊಹ್ಲಿ ವಿದಾಯದ ಬಗ್ಗೆ ಮಾತನಾಡಿರುವ ಸುನಿಲ್ ಗವಾಸ್ಕರ್, ಈ ವಿಷಯ ನನಗೆ ಯಾವುದೇ ಅಚ್ಚರಿಯನ್ನುಂಟು ಮಾಡಿಲ್ಲ.
ವಾಸ್ತವಾಗಿ ಮ್ಯಾಚ್ ಮುಗಿದ ನಂತರ ಪ್ರಜಂಟೆಷನ್ ಸೆರ್ಮನಿಯಲ್ಲಿಯೇ ಈ ಪ್ರಕಟನೆ ಬರುತ್ತದೆ ಎಂದು ನಿರೀಕ್ಷೆ ಮಾಡಿದ್ದೆ..
ಸಿರೀಸ್ ಕಳೆದುಕೊಂಡ ಆವೇಶದಲ್ಲಿ ಅಲ್ಲಿಯೇ ಪ್ರಕಟಣೆ ಬರುತ್ತದೆ ಎಂದುಕೊಂಡಿದ್ದೆ. ಆದರೆ ಕೊಂಚ ಗ್ಯಾಪ್ ಬಳಿಕ ಈ ಪ್ರಕಟಣೆ ಬಂದಿದೆ ಎಂದಿದ್ದಾರೆ.
ನನಗೆ ಇದು ಅನುಭವವೇ. ನಾಯಕನಾಗಿ ವಿದೇಶದಲ್ಲಿ ಸರಣಿ ಸೋತರೆ.. ಅದನ್ನು ಮಂಡಳಿ ಅಧಿಕಾರಿಗಳು ಅಥವಾ ಅಭಿಮಾನಿಗಳು ಲಘುವಾಗಿ ಪರಿಗಣಿಸುವುದಿಲ್ಲ ಎಂದು ನನಗೆ ತಿಳಿದಿದೆ.
ನಾಯಕನ ತಲೆದಂಡ ಖಚಿತವಾಗಿರುತ್ತದೆ. ಇದು ಹಿಂದೆಯೂ ಈ ರೀತಿ ನಡೆದಿದೆ.
ಈ ಬಾರಿ ಈ ಸರಣಿಯನ್ನು ಟೀಂ ಇಂಡಿಯಾ ಸುಲಭವಾಗಿ ಗೆಲ್ಲಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಅದು ಆಗಲಿಲ್ಲ.
ಬಿಸಿಸಿಐ ಕೊಹ್ಲಿ ಅವರನ್ನು ನಾಯಕತ್ವದಿಂದ ವಜಾಗೊಳಿಸುವ ಮುನ್ನ ವಿರಾಟ್ ಈ ಘೋಷಣೆ ಮಾಡಿದ್ದಾರೆ ಎಂದು ಗವಾಸ್ಕರ್ ತಿಳಿಸಿದ್ದಾರೆ.









