Sunil Gavaskar | ಟೀಂ ಇಂಡಿಯಾದ ಮುಂದಿನ ನಾಯಕ ಯಾರು ?
ಟಿ 20 ವಿಶ್ವಕಪ್ 2022 ಸೆಮಿಫೈನಲ್ ನಲ್ಲಿ ಭಾರತ ತಂಡ ಘೋರ ಪರಾಭವ ಅನುಭವಿಸಿದೆ. ಇಂಗ್ಲೆಂಡ್ ವಿರುದ್ಧ 10 ವಿಕೆಟ್ ಗಳ ಅಂತರದಲ್ಲಿ ಸೋತ ಟೀಂ ಇಂಡಿಯಾ, ಟೂರ್ನಿಯಿಂದ ಹೊರಬಿದ್ದಿದೆ.
ಈ ನಡುವೆ ಟಿ 20 ಕ್ರಿಕೆಟ್ ಮಾದರಿಗಾಗಿ ಟೀಂ ಇಂಡಿಯಾದಲ್ಲಿ ಗೆಲುವು ಮಹತ್ತರ ಬದಲಾವಣೆಗಳು ಆಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಮುಖ್ಯವಾಗಿ ಟೀಂ ಇಂಡಿಯಾದ ಭವಿಷ್ಯದ ದೃಷ್ಟಿಯಿಂದ ಕೆಲವು ಹಿರಿಯರಿಗೆ ಕೋಕ್ ನೀಡಿ, ಕಿರಿಯರಿಗೆ ಮಣೆ ಹಾಕುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಅದರಲ್ಲೂ ಸದ್ಯ ಟಿ 20 ವಿಶ್ವಕಪ್ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ಕೆಲವು ಹಿರಿಯ ಆಟಗಾರರು ವಿದಾಯ ಘೋಷಣೆ ಮಾಡುವ ಸಾಧ್ಯತೆಗಳಿವೆ.
ಹಾಗೇ ಭಾರತ ಟಿ 20 ಕ್ರಿಕೆಟ್ ತಂಡಕ್ಕೆ ನೂತನ ನಾಯಕ ಆಯ್ಕೆ ಆಗುವ ಸಾಧ್ಯತೆಗಳಿವೆ.
ಈ ವಿಚಾರವಾಗಿ ಟೀಂ ಇಂಡಿಯಾದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಮಾತನಾಡಿದ್ದು, ರೋಹಿತ್ ಶರ್ಮಾ ಸ್ಥಾನದಲ್ಲಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾ ಸಾರಥ್ಯವಹಿಸಲಿದ್ದಾರೆ.

ಐಪಿಎಲ್ ಗುಜರಾತ್ ಟೈಟಾನ್ಸ್ ಸಾರಥಿಯಾಗಿ ಮೊದಲ ಪ್ರಯತ್ನದಲ್ಲಿಯೇ ತಂಡವನ್ನು ಚಾಂಪಿಯನ್ ಮಾಡಿದ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾದ ಮುಂದಿನ ನಾಯಕ ಎಂದಿದ್ದಾರೆ.
ಹಾಗೇ ತಂಡದಲ್ಲಿ 35 ವರ್ಷ ಮೇಲ್ಪಟ್ಟ ಆಟಗಾರರು ವಿದಾಯ ಘೋಷಿಸುವ ಯೋಚನೆಯಲ್ಲಿದ್ದಾರೆ ಎಂದು ಗವಾಸ್ಕರ್ ಹೇಳಿದ್ದಾರೆ.








