KL Rahul : ಡು ಆರ್ ಡೈ ಸ್ಥಿತಿಯಲ್ಲಿ ರಾಹುಲ್
ಟೀಂ ಇಂಡಿಯಾದ ಉಪನಾಯಕ ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ವೈಫಲ್ಯ ಏಷ್ಯಾಕಪ್ ನಲ್ಲೂ ಮುಂದುವರಿಯಲಿದೆ.
ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕೌಟ್ ಆಗಿ ಮರಳಿದ್ದ ಕೆಎಲ್ ರಾಹುಲ್, ನಂತರ ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ 34 ರನ್ ಗಳಿಸಿದ್ದರೂ ನಿರ್ಲಕ್ಷ್ಯವಾಗಿ ವಿಕೆಟ್ ಕೈ ಚೆಲ್ಲಿದರು.
ಪ್ರಸ್ತುತ ಟೀಂ ಇಂಡಿಯಾದಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಭಾರಿ ಪೈಪೋಟಿ ಏರ್ಪಟ್ಟಿದೆ.
ಮುಂಬರುವ ಟಿ 20 ವಿಶ್ವಕಪ್ ದೃಷ್ಠಿಯಲ್ಲಿ ಬೆಸ್ಟ್ ತಂಡವನ್ನು ತಯಾರಿಸಬೇಕು ಎಂದು ಬಿಸಿಸಿಐ ಪ್ಲಾನ್ ಮಾಡಿಕೊಂಡಿದೆ.
ಈ ಹಿನ್ನಲೆಯಲ್ಲಿ ಕೆ.ಎಲ್.ರಾಹುಲ್ ಆದಷ್ಟು ಬೇಗ ಫಾರ್ಮ್ ಕಂಡುಕೊಳ್ಳುವುದು ಮುಖ್ಯವಾಗಿದೆ.
ಈ ಬಗ್ಗೆ ಟೀಂ ಇಂಡಿಯಾದ ದಿಗ್ಗಜ ಸುನಿಲ್ ಗವಾಸ್ಕರ್ ಮಾತನಾಡಿದ್ದಾರೆ. ಕೆ.ಎಲ್.ರಾಹುಲ್ ಈ ರೀತಿ ಆಡಿದರೆ ಒಂದು…ಎರಡು ಪಂದ್ಯ ನೋಡಿ…ಆಮೇಲೆ ಅವರನ್ನು ತಂಡದಿಂದ ತೆಗೆಯುತ್ತಾರೆ.
ಟೀಂ ಇಂಡಿಯಾದಲ್ಲಿ ಈಗ ಕಾಂಪಿಟೇಷನ್ ಹೆಚ್ಚಾಗುತ್ತಿದೆ. ಜಿಂಬಾಬ್ವೆ, ವೆಸ್ಟ್ ಇಂಡಿಸ್ ಪ್ರವಾಸದಲ್ಲಿ ಶುಭ್ ಮನ್ ಗಿಲ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು.

ಆದ್ದರಿಂದ ಯಾರೇ ಆಗಿರಲಿ ಸತತವಾಗಿ ವಿಫಲವಾದ್ರೆ ಆತ ಫಾರ್ಮ್ ಗೆ ಬರುವವರೆಗೂ ಕಾದು ಕುಳಿತುಕೊಳ್ಳಲು ಆಗುವುದಿಲ್ಲ. ಟಿ 20 ವರ್ಲ್ಡ್ ಕಪ್, ಏಕದಿನ ವಿಶ್ವಕಪ್ ಟೂರ್ನಿಗಳಿಗೆ ದೊಡ್ಡದಾಗಿ ಯಾವುದೇ ಸಮಯವಿಲ್ಲ.
ಈ ಬಗ್ಗೆ ಕೆ.ಎಲ್.ರಾಹುಲ್ ಯೋಚಿಸಬೇಕಾಗಿದೆ. ಆತನಿಗೆ ಒಂದೆರಡು ಪಂದ್ಯಗಳ ಸಮಯವಷ್ಟೇ ಇದೆ. ಈ ಪಂದ್ಯಗಳಲ್ಲೂ ಆತ ವಿಫಲವಾದರೇ ಸೆಲೆಕ್ಟರ್ ಗಳು ಮತ್ತೊಬ್ಬರಿಗೆ ಮಣೆ ಹಾಕಬಹುದು.
ರಿಷಬ್ ಪಂತ್, ಸೂರ್ಯ ಕುಮಾರ್ ಯಾದವ್, ದೀಪಕ್ ಹೂಡಾ, ಹೀಗೆ ಟೀಂ ಇಂಡಿಯಾ ಓಪನಿಂಗ್ ಕಾಂಬಿನೇಷನ್ ನಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಿದೆ.
ಇವರ ಜೊತೆಗೆ ಇಶಾನ್ ಕಿಶಾನ್, ಶುಭ್ ಮನ್ ಗಿಲ್, ಸಂಜು ಸ್ಯಾಮ್ಸನ್ ಕೂಡ ರೇಸ್ ನಲ್ಲಿದ್ದಾರೆ.
ಹೀಗಾಗಿ ಕೆ.ಎಲ್.ರಾಹುಲ್ ಎಷ್ಟು ಬೇಗ ಫಾರ್ಮ್ ಗೆ ಬಂದರೇ ಅಷ್ಟು ಒಳ್ಳೆಯದು, ಒಂದು ವೇಳೆ ಮತ್ತೆ ಫಾರ್ಮ್ ಕಂಡುಕೊಳ್ಳದೇ ಇದ್ದರೇ ತಂಡದಿಂದ ದೂರವಾಗೋದು ಖಚಿತ ಎಂದಿದ್ದಾರೆ.
ಇನ್ನು ಸೌತ್ ಆಫ್ರಿಕಾ ಪ್ರವಾಸದ ವೇಳೆ ಗಾಯಕ್ಕೆ ತುತ್ತಾದ ರಾಹುಲ್, ಆ ನಂತರ ಕೊರೊನಾ ಸೋಂಕಿಗೆ ತುತ್ತಾಗಿದ್ದರು.
ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ನಾಯಕರಾಗಿದ್ದ ರಾಹುಲ್, 616 ರನ್ ಗಳನ್ನು ಪೇರಿಸಿದ್ದರು.
ಆದ್ರೆ ಅದೇ ಆಟವನ್ನು ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮುಂದುವರೆಸಲು ರಾಹುಲ್ ಗೆ ಸಾಧ್ಯವಾಗುತ್ತಿಲ್ಲ.








