ಕೊರೊನಾ ಸಂಕಷ್ಟ – ಬೆಂಗಳೂರಿಗರ ನೆರವಿಗೆ ಧಾವಿಸಿದ ಕನ್ನಡಿಗ ಸುನಿಲ್ ಶೆಟ್ಟಿ
ದೇಶದಾದ್ಯಂತ ಕೊರೊನಾ 2ನೇಅಲೆ ವೇಗ ಪಡೆದಿದ್ದು, ಎಲ್ಲಿ ನೋಡಿದ್ರೂ ಸಾವು ನೋವುಗಳ ದೃಶ್ಯವೇ ಕಂಡು ಬರುತ್ತಿದೆ. ಇಂತಹ ಸಂದರ್ಭದಲ್ಲಿ ಬಾಲಿವುಡ್ ನಟ ಕನ್ನಡಿಗ ಸುನಿಲ್ ಶೆಟ್ಟಿ ಬೆಂಗಳೂರಿಗರ ನೆರವಿಗೆ ಬಂದಿದ್ದಾರೆ. ದೇಶಾದ್ಯಂತ ಅದ್ರಲ್ಲೂ ಬೆಂಗಳೂರುಗಳಲ್ಲಿ, ಮುಂಬೈಗಳಲ್ಲಿ ಕೊರೊನಾ ಪರಿಸ್ಥಿತಿ ಭೀಕರತೆ ಪಡೆದುಕೊಂಡಿದ್ದು, ಬೆಡ್ ಕೊರತೆ , ಆಕ್ಸಿಜನ್ ಕೊರತೆಯಿಮಧಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇಂತಹ ಸಮಯದಲ್ಲಿ ಅನೇಕ ಸೆಲೆಬ್ರಿಟಿಗಳು ಜನರಿಗೆ ನೆರವಾಗುತ್ತಾ ಇದ್ದಾರೆ. ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರು ಉಚಿತವಾಗಿ ಆಮ್ಲಜನಕ ಸಾಂದ್ರಕಗಳನ್ನು ನೀಡಲು ಮುಂದಾಗಿದ್ದಾರೆ. NGO ಜೊತೆ ಕೈಜೋಡಿಸಿರುವ ಸುನಿಲ್ ಶೆಟ್ಟಿ ಆಮ್ಲಜನಕ ಸಾಂದ್ರಕ ಯಂತ್ರಗಳನ್ನು ಉಚಿತವಾಗಿ ನೀಡಲು ಮುಂದಾಗಿದ್ದಾರೆ. ಈ ಯಂತ್ರಗಳನ್ನ ಗಳೂರು ಹಾಗೂ ಮುಂಬೈಗಳಲ್ಲಿ ಈ ಯಂತ್ರಗಳನ್ನು ವಿತರಿಸಲು ಮುಂದಾಗಿದ್ದಾರೆ.
ಕೆವಿಎನ್ ಫೌಂಡೇಶನ್ ಜೊತೆ ಕೈಜೋಡಿಸಿರುವ ಸುನಿಲ್ ಶೆಟ್ಟಿ, ‘ಮಿಷನ್ ಮಿಲಿಯನ್ ಏರ್’ ಹೆಸರಿನ ಅಭಿಯಾನ ಆರಂಭಿಸಿದ್ದು ಅವಶ್ಯಕತೆ ಇರುವವರ ಮನೆಗಳಿಗೆ ಆಮ್ಲಜನಕ ಸಾಂದ್ರಕ ಯಂತ್ರಗಳನ್ನು ತಲುಪಿಸುವ ಯೋಜನೆ ಹಾಕಿಕೊಂಡಿದ್ದಾರೆ. ಇದಕ್ಕೆ ‘ಫೀಡ್ ಬೆಂಗಳೂರು’, ‘ಫೀಡ್ ಮುಂಬೈ’ ಎಂಬ ಟ್ವಿಟ್ಟರ್ ಹ್ಯಾಷ್‌ಟ್ಯಾಗ್ ಹಾಗೂ ಖಾತೆಯನ್ನು ತೆರೆಯಲಾಗಿದೆ.








