ಸನ್ನಿ ಲಿಯೋನ್ ಬಳಿಕ ಇದೀಗ ಮತ್ತೊಬ್ಬ ನೀಲಿ ಚಿತ್ರಗಳ ತಾರೆ ಭಾರತೀಯ ಸಿನಿಮಾಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಈ ಹಿಂದೆ ನೀಲಿ ಚಿತ್ರಗಳಲ್ಲಿ ನಟಿಸಿ ಹಣ, ಖ್ಯಾತಿ ಗಳಿಸಿದ್ದ ಸನ್ನಿ ಲಿಯೋನ್ ಅವುಗಳ ಸಹವಾಸ ಬಿಟ್ಟು ಬಾಲಿವುಡ್ ನಲ್ಲಿ ನೆಲೆ ನಿಲ್ಲಲು ಬಂದರು. ಅದರಲ್ಲಿ ಬಹುತೇಕ ಯಶಸ್ವಿಯೂ ಆದರು. ಆದರೆ ಈಗ ಅವರಿಗೆ ಕಾಂಪಿಟೇಶನ್ ಕೊಡಲು ಮಿಯಾ ಮಾಲ್ಕೊವಾ ಎಂಬ ನೀಲಿ ಚಿತ್ರಗಳ ಮತ್ತೊಬ್ಬ ನಟಿ ಭಾರತಕ್ಕೆ ಕಾಲಿಟ್ಟಿದ್ದಾರೆ. ಅಲ್ಲದೆ ಅವರು ಇಲ್ಲಿಯೇ ಉಳಿದು ನಟಿಯಾಗುವ ಆಸೆಯನ್ನೂ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಮಿಯಾ ಮಾಲ್ಕೊವಾ, ಫ್ರೆಂಚ್ ಕೆನೆಡಿಯನ್-ಜರ್ಮನ್ ಹಿನ್ನೆಲೆಯುಳ್ಳ ಅಮೆರಿಕನ್ ಪೋರ್ನ್ ಇಂಡಸ್ಟ್ರಿಯ ಪೋರ್ನ್ ನಟಿ. ಈಕೆ ಈಗ ರಾಮ್ ಗೋಪಾಲ್ ವರ್ಮಾ ನಿರ್ಮಿಸಿರುವ ಕ್ಲೈಮ್ಯಾಕ್ಸ್ ಎಂಬ ಸಿನಿಮಾದಲ್ಲಿ ನಟಿಸಿದ್ದು, ಮುಂದೆ ಇನ್ನಷ್ಟು ಅವಕಾಶ ಸಿಗುವ ನಿರೀಕ್ಷೆಯಲ್ಲಿದ್ದಾರೆ.
ರಾಮ್ ಗೋಪಾಲ್ ವರ್ಮಾ ಈ ಹಿಂದೆ 2018 ರಲ್ಲಿ ‘ಗಾಡ್ ಸೆಕ್ಸ್ ಆಂಡ್ ಟ್ರುತ್’ ಎಂಬ ಪೋರ್ನ್ ಡಾಕ್ಯುಮೆಂಟರಿ ತೆರೆಗೆ ತಂದಿದ್ದರು. ಆದರೆ ಇದು ಹೇಳಿಕೊಳ್ಳುವಂತಹ ಹೆಸರು ಗಳಿಸಲಿಲ್ಲ.
ಇನ್ನು ‘ಕ್ಲೈಮ್ಯಾಕ್ಸ್’ ಸಿನಿಮಾ ಜೂನ್ 6 ರಂದು ರಾಮ್‌ಗೋಪಾಲ್ ವರ್ಮಾ ಆಪ್ ಮತ್ತು ಆರ್‌ಜಿವಿ ವರ್ಲ್ಡ್ ಎಂಬ ವೆಬ್‌ಸೈಟ್‌ನಲ್ಲಿ ಬಿಡುಗಡೆ ಆಗಲಿದೆ. 100 ರೂಪಾಯಿ ಪಾವತಿಸಿ ಸಿನಿಮಾ ನೋಡಬಹುದಾಗಿದೆ. ಈಗಾಗಲೇ ಕ್ಲೈಮ್ಯಾಕ್ಸ್ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಸಖತ್ ಹಾಟ್ ಆಗಿ ಮಾಲ್ಕೊವಾ ಕಾಣಿಸಿಕೊಂಡಿದ್ದಾರೆ.







