ತನ್ನ ಹೆಸರಲ್ಲಿ ಸಾಲ… ನಟಿ ಸನ್ನಿ ಲಿಯೋನ್ ಫೈರ್ Sunny Leone PAN card used for loan fraud saaksha tv
ತನ್ನ ಪಾನ್ ಕಾರ್ಡ್ ಅನ್ನು ಯಾರೋ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಬಾಲಿವುಡ್ ನಟಿ ಸನ್ನಿ ಲಿಯೋನ್ ಆರೋಪಿಸಿದ್ದಾರೆ.
ಅಪರಿಚಿತ ವ್ಯಕ್ತಿಯೊಬ್ಬ ನನ್ನ ಪಾನ್ ಕಾರ್ಡ್‌ನಲ್ಲಿ ಸಾಲ ಪಡೆದಿದ್ದಾನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದಾಳೆ.
ಈ ಬಗ್ಗೆ ಸನ್ನಿ ಲಿಯೋನ್ ಟ್ವೀಟ್ ಮಾಡಿದ್ದಾರೆ.. ‘ಯಾರೋ ಮೂರ್ಖ ನನ್ನ ಪ್ಯಾನ್ ಕಾರ್ಡ್ ಸಹಾಯದಿಂದ 2 ಸಾವಿರ ರೂಪಾಯಿ ಸಾಲ ಪಡೆದು ನನ್ನ ಸೀಬೀಲ್ ಸ್ಕೋರ್ ಡ್ಯಾಮೇಜ್ ಮಾಡಿದ್ದಾನೆ.
ಈ ವಿಷಯದಲ್ಲಿ IVL ಸೆಕ್ಯುರಿಟೀಸ್ ನನಗೆ ಸಹಾಯ ಮಾಡಲಿಲ್ಲ. ಇಂಡಿಯಾಬುಲ್ಸ್ ಇದನ್ನು ಹೇಗೆ ಅನುಮತಿಸುತ್ತದೆ ”ಎಂದು ಸನ್ನಿ ಲಿಯೋನ್ ಟ್ವೀಟ್ ಮಾಡಿದ್ದಾರೆ.
https://twitter.com/SunnyLeone/status/1494249363639455744?ref_src=twsrc%5Etfw%7Ctwcamp%5Etweetembed%7Ctwterm%5E1494249363639455744%7Ctwgr%5E%7Ctwcon%5Es1_c10&ref_url=https%3A%2F%2Fwww.sakshi.com%2Ftelugu-news%2Fmovies%2Floan-fraud-sunny-leone-says-her-pan-card-used-loan-rs-2000-1435526
ಸ್ವಲ್ಪ ಸಮಯದ ನಂತರ, ಸನ್ನಿ ಲಿಯೋನ್ ಟ್ವೀಟ್ ಅನ್ನು ಡಿಲೀಟ್ ಮಾಡಿ ಮತ್ತೊಂದು ಟ್ವೀಟ್ ನಲ್ಲಿ IVL ಗೆ ಧನ್ಯವಾದ ಹೇಳಿದ್ದಾರೆ.
‘ಐವಿಎಲ್ ಸೆಕ್ಯುರಿಟೀಸ್, ಐಬಿ ಹೋಮ್ ಲೋನ್ಸ್, ಸೀಬೀಲ್‌ಗೆ ಧನ್ಯವಾದಗಳು. ನನ್ನ ಸಮಸ್ಯೆಯನ್ನು ವೇಗವಾಗಿ ಪರಿಹರಿಸಿದ್ದೀರ.
ಇನ್ಮುಂದೆ ಇದು ಮತ್ತೆ ಮರುಕಳಿಸುವುದಿಲ್ಲ ಎಂದು ಭಾವಿಸುತ್ತೇನೆ. ಇದೇ ರೀತಿಯ ಸಮಸ್ಯೆ ಇತರರಿಗೆ ಎದುರಾಗದಂತೆ ತಡೆಯಲು ಕ್ರಮಗಳನ್ನು ತೆಗೆದು ಕೊಳ್ಳುತ್ತೀರಾ ಎಂದು ನಾನು ಭಾವಿಸುತ್ತೇನೆ.
“ಯಾರೂ ಕೆಟ್ಟ ಸೀಬೀಲ್ ಸ್ಕೋರ್ ಬಯಸುವುದಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.







