ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಸೈಕಲ್ ಏರಿದ ಸನ್ನಿ
ಮುಂಬೈ : ದೇಶದಲ್ಲಿ ಇಂಧನ ಬೆಲೆ ರಾಕೇಟ್ ವೇಗದಲ್ಲಿ ಮುನ್ನುಗ್ಗುತ್ತಿದೆ. ಕೊರೊನಾ ಸಂಕಷ್ಟದ ಮಧ್ಯೆ ಪೆಟ್ರೋಲ್,ಡಿಸೇಲ್ ಬೆಲೆ ಏರಿಕೆಯಾಗುತ್ತಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ. ಈ ಮಧ್ಯೆ ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಪರೋಕ್ಷವಾಗಿ ನಟಿ ಸನ್ನಿ ಲಿಯೋನ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‍ವೊಂದನ್ನು ಮಾಡಿದ್ದಾರೆ.
ಹೌದು..! ಸದ್ಯ ದೇಶದಲ್ಲಿ ಪೆಟ್ರೋಲ್ ಬೆಲೆ ನೂರರ ಗಡಿ ದಾಟಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಮುಗಿಬೀಳುತ್ತಿವೆ. ಜನರ ಸಾಮಾನ್ಯರು ಕೂಡ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಆದ್ರೆ ಬೆಲೆ ಏರಿಕೆ ಬಗ್ಗೆ ಒಂದಿಷ್ಟು ಸೆಲೆಬ್ರೆಟಿಗಳು ಧ್ವನಿ ಎತ್ತಿದ್ದೂ ಬಿಟ್ಟರೇ ಬೇರೆ ಯಾವ ತಾರೆಯರು ಗಟ್ಟಿಯಾಗಿ ಮಾತನಾಡಿಲ್ಲ. ನಮಗ್ಯಾಕೆ ಎಂಬಂತೆ ಬಾಯಿಗೆ ಬೀಗ ಹಾಕಿಕೊಂಡು ಗಪ್ ಚುಪ್ ಆಗಿದ್ದಾರೆ.
ಆದ್ರೆ ಬಾಲಿವುಡ್ ನಟಿ ಸನ್ನಿಲಿಯೋನ್ ಪೆಟ್ರೋಲ್ ಬೆಲೆ ದುಬಾರಿಯಾಗಿರುವುದನ್ನು ವಿರೋಧಿಸಿದ್ದಾರೆ. ಈ ಕುರಿರು ಸನ್ನಿ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಫೋಟೋದಲ್ಲಿ ಸೈಕಲ್ ಜೊತೆ ನಿಂತು ಪೋಸ್ ನೀಡಿದ್ದಾರೆ. ಅಲ್ಲದೇ, ಕೊನೆಗೂ 100ರ ಗಡಿ ದಾಟಿಯೇ ಬಿಟ್ಟಿತು. ನಿಮ್ಮ ಆರೋಗ್ಯವನ್ನು ನೀವು ಕಾಪಾಡಿಕೊಳ್ಳಿ ಎಂದು ಕ್ಯಾಪ್ಷನ್ ನಲ್ಲಿ ಹಾಕಿದ್ದಾರೆ.