sunny leone
ಬಾಲಿವುಡ್ ನಟಿ ಸನ್ನಿ ತಮ್ಮ ಮಗಳ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ಸದ್ಯ ವಿದೇಶದಲ್ಲಿ ನೆಲೆಸಿರುವ ಸನ್ನಿ ಅಲ್ಲೇ ಮಗಳ ಬರ್ತಡೇ ಆಚರಣೆ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನ ಶೇರ್ ಮಾಡಿಕೊಂಡಿದ್ದಾರೆ.
ಸನ್ನಿ ಲಿಯೋನ್ ತನ್ನ ಮೂವರು ದತ್ತು ಮಕ್ಕಳು ಹಾಗೂ ಪತಿಯೊಂದಿಗೆ ಸುಖ ಸಂಸಾರ ನಡೆಸುತ್ತಿದ್ದಾರೆ.
ಸನ್ನಿ ಮಗಳು ನಿಶಾ ಕೌರ್ ಇದೀಗ 5ನೇ ವಸಂತಕ್ಕೆ ಕಾಲಿಟ್ಟಿದ್ದಾಳೆ.
ವಿಶೇಷ ಅಂದ್ರೆ ಮಗಳ ಹುಟ್ಟುಹಬ್ಬಕ್ಕೆ ಸನ್ನಿ ಲಿಯೋನ್ ಭಾವನಾತ್ಮಕವಾಗಿ ಪತ್ರ ಬರೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಮಗಳಿಗೆ ಶುಭಹಾರೈಸಿದ್ದಾರೆ.
ಮಗಳು ಮಾತನಾಡಿರುವ ಆಡಿಯೋ ಒಂದನ್ನ ಶೇರ್ ಮಾಡಿ, ಮಗಳು ಕೈಯಲ್ಲಿ ಹಳದಿ ಹೂ ಹಿಡಿದಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
‘ಜೇಮ್ಸ್’ ಗೆ ನಾಯಕಿ ಫಿಕ್ಸ್: ಮತ್ತೆ ಒಂದಾದ ‘ರಾಜಕುಮಾರ’ ಜೋಡಿ
ಹುಟ್ಟುಹಬ್ಬಕ್ಕೆ ಏನು ಬೇಕು ಎಂದು ಆಡಿಯೋ ಮೂಲಕ ನಿಶಾ ಹೇಳಿದ್ದು, ‘ನನ್ನ ಜನ್ಮದಿನಕ್ಕಾಗಿ, ಪ್ರಪಂಚದಾದ್ಯಂತ ಎಲ್ಲಾ ಮಕ್ಕಳು ದುಷ್ಟರ ವಿರುದ್ಧ ಒಟ್ಟಾಗಿ ನಿಲ್ಲಬೇಕು ಎಂದು ನಾನು ಬಯಸುತ್ತೇನೆ.
ಇದು ನನ್ನ ಆಸೆ. ಎಲ್ಲರನ್ನು ಪ್ರೀತಿಸುತ್ತೇನೆ’ ಎಂದು ಹೇಳಿದ್ದಾರೆ.
ಸದ್ಯ ಈ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಾಯಿದ್ದು, ನೆಟ್ಟಿಗರ ಮನಗೆದ್ದಿದೆ.
ಇನ್ನೂ ತಮ್ಮಮಗಳ ಬಗ್ಗೆ ಸನ್ನಿ ದೀರ್ಘವಾದ ಪತ್ರ ಬರೆದಿದ್ದು, ‘ ನನ್ನ ಪ್ರೀತಿಯ ದೇವತೆ ನಿಶಾ ಕೌರ್ ವೆಬರ್ ಗೆ ಜನ್ಮದಿನದ ಶುಭಾಶಯಗಳು.
ನೀನು ನನ್ನ ಮಗಳು ಆದ ದಿನದಿಂದ ನಮ್ಮ ಬದುಕು ಬೆಳಕಾಗಿದೆ.
ನಿನಗೆ 5 ವರ್ಷ ತುಂಬಿರುವುದನ್ನ ನಂಬಲಾಗ್ತಿಲ್ಲ’ ಎಂದು ಹೇಳಿಕೊಂಡಿದ್ದಾರೆ.
ಅಲ್ಲದೇ ಮಗಳ ಜನ್ಮದಿನದಂದು ಪ್ರತಿಜ್ಞೆ ಮಾಡಿರುವ ಸನ್ನಿ, ‘ನಿನ್ನ ಸಂದೇಶವನ್ನು ಜಗತ್ತಿಗೆ ಹರಡಲು ನಾನು ಪ್ರಯತ್ನ ಮಾಡುತ್ತೇನೆ.
ನಮ್ಮೆಲ್ಲರ ಬದುಕಿನಲ್ಲಿ ಅಗತ್ಯವಿರುವ ದಯೆಯನ್ನು ಪುನಃ ಸ್ಥಾಪಿಸುತ್ತೇವೆ.
ನಿನ್ನ ಪ್ರೀತಿಯಿಂದ ನಾವು ಒಬ್ಬ ವ್ಯಕ್ತಿಯನ್ನು ಉತ್ತಮ ಮನುಷ್ಯನನ್ನಾಗಿ ಬದಲಾಯಿಸಬಹುದು ಎಂದು ನಾನು ಭಾವಿಸುತ್ತೇನೆ.
ನಾವು ನಮ್ಮ ಜೀವನದಲ್ಲಿ ಒಂದು ಹಂತವನ್ನು ತಲುಪಿದ್ದೇವೆ.
ಇಲ್ಲಿ ಬಹಳಷ್ಟು ಜನರು ಹೆಚ್ಚು ಕೆಟ್ಟವರೇ. ನಾನು ಮತ್ತು ನಿನ್ನಂಥ ಎಲ್ಲಾ ಮಕ್ಕಳು ಸೇರಿಕೊಂಡು ದುಷ್ಟ ಶಕ್ತಿಗಳನ್ನು ಹಿಮ್ಮೆಟ್ಟಿಸಬೇಕು. ಇದೇ ನನ್ನ ಬಯಕೆ.
ನೀನು ಮತ್ತು ಎಲ್ಲಾ ಮಕ್ಕಳು ವಿಶ್ವದ ಭವಿಷ್ಯ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ನಿಶಾ ಕೌರ್’ ಎಂದು ಪತ್ರದಲ್ಲಿ ಸನ್ನಿ ಬರೆದುಕೊಂಡಿದ್ದಾರೆ.
ಸನ್ನಿ ಅವರ ಈ ಪೋಸ್ಟ್ ಗೆ ನೆಟಿಜನ್ಸ್ ಫಿದಾ ಆಗಿದ್ದು, ಸನ್ನಿ ಮಗಳಿಗೆ ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
sunny leone
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








