ಮಂಡ್ಯ ಅಭಿಮಾನಿಗಳ ಪ್ರೀತಿಗೆ ಧನ್ಯವಾದ ಹೇಳಿದ ಸನ್ನಿ ಲಿಯೋನ್
ಬಾಲಿವುಡ್ ಹಾಟ್ ನಟಿ ಸನ್ನಿ ಲಿಯೋನ್ `ಚಾಂಪಿಯನ್’ ಸಿನಿಮಾ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ. ಈ ವೇಳೆ ತನ್ನ ಬರ್ತಡೇ ಸೆಲೆಬ್ರೇಷನ್ ಆಚರಿಸಿದ್ದ ಮಂಡ್ಯ ಫ್ಯಾನ್ಸ್ ಕುರಿತು ಸನ್ನಿ ಲಿಯೋನ್ ಮಾತನಾಡಿ ಖುಷಿ ವ್ಯಕ್ತಪಡಿಸಿದ್ದಾರೆ.
ಬಾಲಿವುಡ್ ಸಿನಿಮಾ ಮತ್ತು ಹಲವು ಭಾಷೆಗಳ ಹಾಟ್ ಐಟಂ ಸಾಂಗ್ ಗಳ ಮೂಲಕ ಸಂಚಲನ ಮೂಡಿಸಿರುವ ಸನ್ನಿ ಲಿಯೋನ್ ಇದೀಗ ಮತ್ತೊಮ್ಮೆ ಕನ್ನಡಕ್ಕೆ ಆಗಮಿಸಿದ್ದಾರೆ. `ಚಾಂಪಿಯನ್’ ಎನ್ನುವ ಕನ್ನಡ ಚಿತ್ರದಲ್ಲಿ ಸ್ಪೆಷಲ್ ಸಾಂಗ್‌ವೊದಕ್ಕೆ ಹೆಜ್ಜೆ ಹಾಕಿದ್ದಾರೆ. ಈ ಚಿತ್ರದ ಕಾರ್ಯಕ್ರಮಕ್ಕೆ ನಟಿ ಸನ್ನಿ ಹಾಜರ್ ಆಗಿದ್ದಾರೆ. ಈ ವೇಳೆ ಸಿನಿಮಾ ತಂಡದ ಜತೆ ಮತ್ತೊಮ್ಮೆ ಬರ್ತಡೇ ಆಚರಿಸಿದ್ದಾರೆ.
ಮಂಡ್ಯದಲ್ಲಿ ಸನ್ನಿ ಅಭಿಮಾನಿಗಳು ಬರ್ಡೇ ಆಚರಿಸಿ ರಕ್ತದಾನವನ್ನ ಕಾರ್ಯಕ್ರಮ ಮಾಡಿದ್ದರು. ಇದನ್ನ ನೋಡಿ ಸನ್ನಿ ಲಿಯೋನ್ ಅಭಿಮಾನಿಗಳ ಪ್ರೀತಿಗೆ ಧನ್ಯವಾದ ಹೇಳಿದ್ದಾರೆ ಅಷ್ಟೆ ಅಲ್ಲದೆ ನಾನೂ ಕೂಡ ರಕ್ತದಾನ ಮಾಡುತ್ತೇನೆ ಎಂದು ಹೇಳಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಒಳ್ಳೆ ಪಾತ್ರ ಸಿಕ್ಕರೆ ಆಕ್ಟ್ ಮಾಡುತ್ತೇನೆ ಎಂದು ಹೇಳಿದ್ದಾರೆ.