ನಾಲ್ಕು ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಇಂದು ಸನ್ರೈಸರಸ್ ವಿರುದ್ಧ ಸೆಣಸಾಟ ನಡೆಸಲಿದೆ.
ಚೆಪಾಕ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಸನ್ರೈಸರ್ಸ್ ವಿರುದ್ಧ ಇದುವರೆಗೂ ಚೆಪಾಕ್ ಅಂಗಳದಲ್ಲಿ ಚೆನ್ನೈ ತಂಡದ ವಿರುದ್ಧ ಗೆದ್ದಿಲ್ಲ. ಮೂರು ಪಂದ್ಯಗಳನ್ನಾಡಿದ್ದು ಗೆಲ್ಲಲು ಪ್ರಯಾಸ ಪಟ್ಟಿದೆ. ಚೆನ್ನೈ ತಂಡ ತವರಿನಲ್ಲಿ 23 ಪಂದ್ಯಗಳನ್ನಾಡಿ 19 ಪಂದ್ಯಗಳನ್ನು ಗೆದ್ದಿದೆ.
ಈ ಋತುವಿನಲ್ಲಿ ಚೆನ್ನೈ ತಂಡ ತವರಿನಲ್ಲಿ 2 ಪಂದ್ಯಗಳನ್ನಾಡಿದೆ. ಚೆಪಾಕ್ ಮೈದಾನ ಸ್ಪಿನ್ನರ್ಗಳಿಗೆ ನೆರವು ನೀಡುತ್ತದೆ. ಸ್ಪಿನ್ನರ್ಗಳು ಈ ಅಂಗಳದಲ್ಲಿ 16 ವಿಕೆಟ್ ತೆಗೆದುಕೊಂಡಿದ್ದಾರೆ. ವೇಗಿಗಳು 11 ವಿಕೆಟ್ ಪಡೆದಿದ್ದಾರೆ.
ತಂಡದ ಆಲ್ರೌಂಡರ್ ಬೆನ್ ಸ್ಟೋಕ್ಸ್ ಚೇತರಿಸಿಕೊಂಡಿರುವುದು ಚೆನ್ನೈ ತಂಡಕ್ಕೆ ಸಂತಸದ ವಿಚಾರವಾಗಿದೆ. ಮೂರು ಪಂದ್ಯಗಳನ್ನುಆಡದ ಸ್ಟೋಕ್ಸ್ ಬುಧವಾರ ಅಭ್ಯಾಸ ನಡೆಸಿದರು. ಚೆನ್ನೈ ತಂಡದ ಬ್ಯಾಟಿಂಗ್ ಕ್ರಮಾಂಕ ಬಲಿಷ್ಠವಾಗಿದ್ದು ಡೆವೊನ್ ಕಾನ್ವೆ ,ಋತುರಾಜ್ ಗಾಯಕ್ವಾಡ್ ಮತ್ತು ಶಿವಂ ದುಬೆ ಅತ್ಯುತ್ತಮ ಬ್ಯಾಟಿಂಗ್ ಮೂಲಕ ತಂಡದ ಮೊತ್ತ ಹೆಚ್ಚಿಸಿದ್ದಾರೆ. ಉಳಿದ ಬ್ಯಾಟರ್ಗಳು ತಂಡಕ್ಕೆ ನೆರವಾಗಬೇಕಿದೆ.
ಇನ್ನು ಬೌಲಿಂಗ್ ಸಾಕಷ್ಟು ಸುಧಾರಿಸಬೇಕಿದ್ದು ಫೀಲ್ಡಿಂಗ್ ಕೂಡ ಕಳಪೆಯಾಗಿದೆ. ವೇಗಿಗಳಾದ ಮಥೀಶಾ ಪಾಥೀರಾನಾ ಆರ್ಸಿಬಿ ವಿರುದ್ಧ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದರು. ತುಷಾರ್ ದೇಶಪಾಂಡೆ ಪ್ರತಿ ಪಂದ್ಯದಲ್ಲೂ ಸುಧಾರಿಸಿಕೊಳ್ಳುತಿದ್ದಾರೆ.
ಸನ್ರೈಸರ್ಸ್ ಬ್ಯಾಟರ್ಗಳೆದರು ತೀಕ್ಷ್ಣ , ರವೀಂದ್ರ ಜಡೇಜಾ ಮತ್ತು ಮೊಯಿನ್ ಅಲಿ ಬಲಿಷ್ಠವಾಗಿ ಕಾಣುತ್ತಾರೆ.
ಚೆನ್ನೈ ತಂಡ 5 ಪಂದ್ಯಗಳಲ್ಲಿ ನಾಲ್ಲಕು ಪಂದ್ಯಗಳನ್ನು ಗೆದ್ದಿದ್ದು ಸನ್ರೈಸರಸ್ ವಿರುದ್ಧ ಗೆಲ್ಲುವ ನೆಚ್ಚಿನ ತಂಡವೆನಿಸಿದೆ.
ಇತ್ತ ಸನ್ರೈಸರ್ಸ್ ಬ್ಯಾಟಿಂಗ್ನಲ್ಲಿ ಅಬ್ಬರಿಸಲು ಸಜ್ಜಾಗಿದೆ. ಪವರ್ಪ್ಲೇ ನಲ್ಲಿ ವಿಕೆಟ್ ಕಳೆದುಕೊಳ್ಳುತ್ತಿರುವುದೇ ಸನ್ರೈಸರ್ಸ್ ಸೋಲಿಗೆ ಕಾರಣವಾಗಿದೆ.
ಟೂರ್ನಿಯಲ್ಲಿ ಗಮನ ಸೆಳೆದಿರುವ ಹ್ಯಾರಿ ಬ್ರೂಕ್ ಬ್ಯಾಟಿಂಗ್ನಲ್ಲಿ ಅಬ್ಬರಿಸಬೇಕಿದೆ. ವಾಷಿಂಗ್ಟನ್ ಸುಂದರ್ ತವರು ಅಂಗಳಲ್ಲಿ ಆಲ್ರೌಂಡ್ ಪ್ರದರ್ಶನ ನೀಡಬೇಕಿದೆ.