madikeri ಗ್ರಾಮ ಪಂಚಾಯಿತಿ ಸದಸ್ಯರಿಂದ ಅನಾಥ ಶವದ ಅಂತ್ಯಸಂಸ್ಕಾರ
ಮಡಿಕೇರಿ : ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯರು ಅನಾಥ ಶವಕ್ಕೆ ಅಂತ್ಯ ಸಂಸ್ಕಾರ ನಡೆಸಿ ಮಾನವೀಯತೆ ಮೆರೆದಿದ್ದಾರೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಗ್ರಾಮದ ಮಾರುಕಟ್ಟೆಯಲ್ಲಿ ಅನಾಥವಾಗಿ ಜೀವನ ನಡೆಸುತ್ತಿದ್ದ ಗೌರಮ್ಮ ಎಂಬವರು ಅನಾರೋಗ್ಯಕ್ಕೆ ತುತ್ತಾಗಿ ಗುರುವಾರ ಮಡಿಕೇರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಇವರ ಶವಸಂಸ್ಕಾರ ಮಾಡಲು ಯಾರೂ ಮುಂದೆ ಬರದ ಹಿನ್ನೆಲೆ ಕಾರ್ಯಪ್ರವೃತ್ತರಾದ ಸುಂಟಿಕೊಪ್ಪ ಗ್ರಾಮ ಪಂಚಾಯತಿ ಪೌರಕಾರ್ಮಿಕ ರಾಮಚಂದ್ರ ಮತ್ತು ಇತರ ಸಿಬ್ಬಂದಿ ಮೃತದೇಹವನ್ನು ಸುಂಟಿಕೊಪ್ಪ ಹಿಂದೂ ರುದ್ರ ಭೂಮಿಯಲ್ಲಿ ಶವಸಂಸ್ಕಾರ ನೆರವೇರಿಸಿದ್ದಾರೆ.
ವಿಶೇಷ ಏನಂದ್ರೇ ಹಿಂದೂ ಪದ್ಧತಿಯಂತೆ ಸತ್ತ ಮೂರನೇ ದಿನಕ್ಕೆ ಬೂದಿ ಮುಚ್ಚುವ ಕಾರ್ಯ ನಡೆಯಬೇಕು.
ಗೌರಮ್ಮ ಅವರು ಅನಾಥರಾಗಿದ್ದರಿಂದ ಕುಟುಂಬಸ್ಥರ ಬದಲಾಗಿ ಮುಸ್ಲಿಂ ಸಮುದಾಯದ ಗ್ರಾಮ ಪಂಚಾಯತಿ ಸದಸ್ಯ ಎ. ಶಬೀರ್ ಅವರು ಬೂದಿಯನ್ನು ರಾಶಿ ಮಾಡಿ ಹಿಂದೂ ಪದ್ದತಿಯಂತೆ ಕಾರ್ಯವನ್ನು ನೆರವೇರಿಸಿದ್ದಾರೆ. ಇವರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.










