ವಿಶ್ವದ ಹಲವೆಡೆ ಕಾಣಿಸಿದ ಸೂಪರ್ ಬ್ಲಡ್ ಮೂನ್, ಸುದೀರ್ಘ ಚಂದ್ರಗ್ರಹಣ…
ಇಂದು ಬುದ್ಧ ಪೂರ್ಣಿಮೆಯಂದು ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಿದೆ. ಜ್ಯೋತಿಷಿಗಳ ಪ್ರಕಾರ, 80 ವರ್ಷಗಳ ನಂತರ ಇಂತಹ ಅಪರೂಪದ ಗ್ರಹಣ ಸಂಭವಿಸಿದೆ. ಈ ಸಂಪೂರ್ಣ ಚಂದ್ರಗ್ರಹಣವು ವಿಶ್ವದ ಹಲವೆಡೆ ಕಂಡುಬಂದಿದೆ. ಭಾರತದಲ್ಲಿ ಇದರ ಗೋಚರವಿರಲಿಲ್ಲ. ಚಂದ್ರಗ್ರಹಣದ ಸಮಯ ಭಾರತದಲ್ಲಿ ಹಗಲು ಹೊತ್ತಾಗಿದ್ದರಿಂದ ಇಲ್ಲಿ ಗೋಚರಿಸಲಿಲ್ಲ. ಭಾರತೀಯ ಕಾಲಮಾನದ ಪ್ರಕಾರ ಇಂದು ಬೆಳಗ್ಗೆ 7.58ಕ್ಕೆ ಗ್ರಹಣ ಆರಂಭವಾಗಿ 11.25ಕ್ಕೆ ಮುಕ್ತಾಯವಾಯಿತು. ಮುಂದಿನ ಚಂದ್ರಗ್ರಹಣವು 8 ನವೆಂಬರ್ 2022 ರಂದು ಜರುಗಲಿದೆ.
ಸೋಮವಾರದ ಚಂದ್ರಗ್ರಹಣವನ್ನ ಸೂಪರ್ ಬ್ಲಡ್ ಮೂನ್ ಎಂದೂ ಕರೆಯುತ್ತಾರೆ. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಇದ್ದಾಗ ಮತ್ತು ಎಲ್ಲಾ ಮೂರು ಸಾಲಾಗಿ ಬಂದಾಗ, ಚಂದ್ರನ ಬಣ್ಣವು ರಕ್ತಸಿಕ್ತ ಕೆಂಪು ಬಣ್ಣದಲ್ಲಿ ಕಂಡುಬರುತ್ತದೆ. ಅಲ್ಲದೆ ಚಂದ್ರನು ಭೂಮಿಗೆ ಅತ್ಯಂತ ಸಮೀಪದಲ್ಲಿರುತ್ತಾನೆ.
ಇಂದಿನ ಚಂದ್ರಗ್ರಹಣವು ನೈಋತ್ಯ ಯುರೋಪ್, ನೈಋತ್ಯ ಏಷ್ಯಾ, ಆಫ್ರಿಕಾ, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಪೆಸಿಫಿಕ್ ಮಹಾಸಾಗರ, ಹಿಂದೂ ಮಹಾಸಾಗರ, ಅಟ್ಲಾಂಟಿಕ್ ಮತ್ತು
ಈ ಬಾರಿ ಜರ್ಮನಿ, ಬ್ರೆಜಿಲ್, ಕೆನಡಾ, ಟರ್ಕಿ, ಅಮೆರಿಕ ಮತ್ತು ಚಿಲಿ ದೇಶಗಳಲ್ಲಿ ಬ್ಲಡ್ ಮೂನ್ ಕಾಣಿಸಿಕೊಂಡಿದೆ. ಈ ಹಿಂದೆ ಏಪ್ರಿಲ್ 30 ರಂದು ವೈಶಾಖ ಅಮವಾಸ್ಯೆಯಂದು ಸೂರ್ಯಗ್ರಹಣವಿತ್ತು, ಈ ಗ್ರಹಣವು ಭಾರತದಲ್ಲಿಯೂ ಗೋಚರಿಸಲಿಲ್ಲ.