ಸೆ.18 ರಂದು ಸ್ಯಾಂಡಲ್ ವುಡ್ ನ ಸೂಪರ್ ಸ್ಟಾರ್ ಉಪೇಂದ್ರ ಅವರ ಬರ್ತ್ ಡೇ ಪ್ರಯುಕ್ತ “ಕಬ್ಜ” ಚಿತ್ರತಂಡ ಭರ್ಜರಿ ಗಿಫ್ಟ್ ನೀಡಿತ್ತು.
ಕಬ್ಜ ಚಿತ್ರದ ಥೀಮ್ ಪೋಸ್ಟರ್ ರಿಲೀಸ್ ಮಾಡಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿತ್ತು.
ಕಬ್ಜ ಚಿತ್ರದ ಥೀಮ್ ಪೋಸ್ಟರ್ ರಿಲೀಸ್ ಆಗಿದ್ದೇ ತಡ ಉಪ್ಪಿ ಅವರ ಲುಕ್ ಗೆ ಅಭಿಮಾನಿಗಳಿಂದ ವಾವ್ ರೆಸ್ಪಾನ್ಸ್ ಬಂದಿದೆ.
ಅಬ್ಬಬ್ಬಾ ಏನ್ ಪೋಸ್ಟರ್ ಗುರು.. ಸಖತ್ತಾಗಿ ಇದೆ ಎಂದು ಅಭಿಮಾನಿಗಳಂತೂ ಕಮೆಂಟ್ ಗಳ ಸುರಿಮಳೆಗೈದಿದ್ದಾರೆ.
ಪೋಸ್ಟರ್ ನಲ್ಲಿ ಉಪ್ಪಿ ಹೆಣಗಳ ರಾಶಿಮೇಲೆ ಬೈಕ್ ಮೇಲೆ ಬರುತ್ತಿರುವ ದೃಶ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಇನ್ನೂ ಕಬ್ಜದ ಥೀಮ್ ಪೋಸ್ಟರ್ ರಿಲಿಸ್ ಆಗಿ ಸಿಕ್ಕಾಪಟ್ಟೆ ಲೈಕ್ಸ್ ಕಮೆಂಟ್ಸ್ ಹಾಗೂ ವೀವ್ಸ್ ಪಡೆದುಕೊಂಡಿದೆ.
ರಿಲೀಸ್ ಆಗಿ ಕೇವಲ 24 ಗಂಟೆಗಳಲ್ಲಿ 5 ಮಿಲಿಯನ್ ಗೂ ಹೆಚ್ಚು ವೀವ್ಸ್ ಗಿಟ್ಟಿಸಿಕೊಂಡಿದೆ ಕಬ್ಜ ಥೀಮ್ ಪೋಸ್ಟರ್.
ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಹಾಗೂ ಪ್ರತಿಷ್ಠಾತ್ಮ ಸಿನೆಮಾ ಕಬ್ಜಗೆ ಆರ್ ಚಂದ್ರು ಆಕ್ಷನ್ ಕಟ್ ಹೇಳಿದ್ದಾರೆ.
ಈ ಸಿನೆಮಾ ಕನ್ನಡ , ಹಿಂದಿ, ತಮಿಳು, ತೆಲುಗು, ಮರಾಠಿ, ಮಳಿಯಾಳಂ, ಒರಿಯಾ ಒಟ್ಟು 7 ಬಾಷೆಗಳಲ್ಲಿ ತೆರೆಕಾಣುತ್ತಿದ್ದು, ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ.
ಇನ್ನೂ ನಿನ್ನೆ ಈ ಎಲ್ಲಾ ಬಾಷೆಗಳಲ್ಲು ಥೀಮ್ ಪೋಸ್ಟರ್ ಲಾಂಚ್ ಆಗಿದ್ದು, ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ.








