ಚಳಿಗಾಲದಲ್ಲಿ ಅಗತ್ಯವಾಗಿ ಸೇವಿಸಬೇಕಾದ ಸೂಪರ್ಫುಡ್ಗಳು
ಮಂಗಳೂರು, ಡಿಸೆಂಬರ್09: ಚಳಿಗಾಲದಲ್ಲಿ ಸ್ವೆಟರ್ಗಳು, ಶಾಲುಗಳು, ಜಾಕೆಟ್ಗಳಂತಹ ಬೆಚ್ಚಗಿನ ಬಟ್ಟೆಗಳ ಅವಶ್ಯಕತೆಯ ಜೊತೆಗೆ ಆಹಾರದ ಕಡೆಗೆ ಗಮನ ಹರಿಸುವುದು ಕೂಡ ಅಗತ್ಯ. ಚಳಿಗಾಲದಲ್ಲಿ ಬೆಚ್ಚಗಿರಲು ಮತ್ತು ಶೀತ, ಕೆಮ್ಮು, ಜ್ವರ ಹಾಗೂ ಶುಷ್ಕ ಚರ್ಮವನ್ನು ತೊಡೆದುಹಾಕಲು ಆಹಾರದ ಬಗ್ಗೆ ವಿಶೇಷ ಗಮನ ನೀಡಬೇಕು. ಚಳಿಗಾಲದಲ್ಲಿ ಅಂತಹ ಕೆಲವು ಸೂಪರ್ಫುಡ್ಗಳನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ಚಳಿಗಾಲದಲ್ಲಿನ ತೊಂದರೆಗಳ ವಿರುದ್ಧ ಹೋರಾಡಲು ಶಕ್ತಿಯನ್ನು ನೀಡುತ್ತದೆ.

ಬೀಟ್ರೂಟ್ : ಬೀಟ್ರೂಟ್ ಅದರ ಬಣ್ಣದಿಂದಾಗಿ ಜನಪ್ರಿಯವಾಗಿದೆ. ಆದರೆ ಇದನ್ನು ಸೂಪರ್ ಫುಡ್ ಎಂದೂ ಕರೆಯುತ್ತಾರೆ. ಇದು ಅನೇಕ ಔಷಧೀಯ ಮತ್ತು ಆರೋಗ್ಯಕರ ಗುಣಗಳನ್ನು ಹೊಂದಿದೆ. ಚಳಿಗಾಲದಲ್ಲಿ ಇದನ್ನು ಸೇವಿಸುವುದರಿಂದ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.
ಬೀಟ್ರೂಟ್, ಫೈಟೊಕೆಮಿಕಲ್ಸ್ ಮತ್ತು ಆಂಟಿಆಕ್ಸಿಡೆಂಟ್ಗಳನ್ನು ಹೊಂದಿದೆ. ಇದು ಸ್ವತಂತ್ರ ರಾಡಿಕಲ್ ವಿರುದ್ಧ ಹೋರಾಡುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ರಕ್ಷಿಸುತ್ತದೆ. ಬೀಟ್ರೂಟ್ ಅನ್ನು ಹಸಿಯಾಗಿ ಅಥವಾ ಸೂಪ್ ಮತ್ತು ಸಲಾಡ್ ಆಗಿಯೂ ಸಹ ತಿನ್ನಬಹುದು.
ಅರಿಶಿನ : ಅರಿಶಿನವನ್ನು ಹಾಲಿನೊಂದಿಗೆ ತೆಗೆದುಕೊಂಡಾಗ ಅರಿಶಿನದ ಗುಣಲಕ್ಷಣಗಳು ದ್ವಿಗುಣಗೊಳ್ಳುತ್ತವೆ. ಚಳಿಗಾಲದ ತಿಂಗಳುಗಳಲ್ಲಿ ಅರಿಶಿನ ಸೇವನೆಯು ಬಹಳ ಮುಖ್ಯ. ಅರಿಶಿನವನ್ನು ನಿಯಮಿತವಾಗಿ ತೆಗೆದುಕೊಂಡರೆ ಅದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದು ಶೀತ ಹವಾಮಾನದ ಸಮಯದಲ್ಲಿ ಕೀಲು ನೋವನ್ನು ನಿವಾರಿಸುತ್ತದೆ.
ಕಿತ್ತಳೆ : ಕಿತ್ತಳೆ ಬಹಳಷ್ಟು ಪಾಲಿಫಿನಾಲ್ಗಳನ್ನು ಹೊಂದಿದೆ. ಇದು ನಮ್ಮನ್ನು ವೈರಲ್ ಸೋಂಕುಗಳಿಂದ ರಕ್ಷಿಸುತ್ತದೆ. ಚಳಿಗಾಲದಲ್ಲಿ ಕಿತ್ತಳೆ ಹಣ್ಣು ಅತ್ಯುತ್ತಮ ಸಿಟ್ರಸ್ ಹಣ್ಣುಗಳಲ್ಲಿ ಒಂದಾಗಿದೆ. ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಕಿತ್ತಳೆ ಹಣ್ಣನ್ನು ತಿನ್ನಿರಿ ಅಥವಾ ಪ್ರತಿದಿನ ಒಂದು ಅಥವಾ ಎರಡು ಲೋಟ ಕಿತ್ತಳೆ ರಸವನ್ನು ಕುಡಿಯಿರಿ. ಇದು ಚರ್ಮವನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ
ಈರುಳ್ಳಿ ರಸದ 6 ಸೂಪರ್ ಪವರ್ಫುಲ್ ಪ್ರಯೋಜನಗಳು
ಕ್ಯಾರೆಟ್ : ಚಳಿಗಾಲದ ತಿಂಗಳುಗಳಲ್ಲಿ ಚರ್ಮವನ್ನು ಆರೋಗ್ಯವಾಗಿಡಲು ಕ್ಯಾರೆಟ್ ಸಹಾಯ ಮಾಡುತ್ತದೆ. ಇದು ಹೆಚ್ಚಿನ ಪ್ರಮಾಣದ ಕ್ಯಾರೋಟಿನ್ ಅನ್ನು ಹೊಂದಿರುತ್ತದೆ. ಇದು ದೇಹಕ್ಕೆ ವಿಟಮಿನ್ ಎ ಯನ್ನು ಒದಗಿಸುತ್ತದೆ. ವಿಟಮಿನ್ ಎ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ದೇಹವು ಸದೃಢವಾಗಿಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ಸೋಂಕಿನಿಂದ ರಕ್ಷಿಸುತ್ತದೆ ಮತ್ತು ಶ್ವಾಸಕೋಶವನ್ನು ಆರೋಗ್ಯಕರವಾಗಿಡುತ್ತದೆ.

ಮೊಟ್ಟೆ : ಚಳಿಗಾಲದ ತಿಂಗಳುಗಳಲ್ಲಿ ಮೊಟ್ಟೆಯ ಸೇವನೆಯು ಮುಖ್ಯವಾಗಿದೆ. ಮೊಟ್ಟೆಯಲ್ಲಿರುವ ಪ್ರೋಟೀನ್ ನಿರಂತರ ಶಕ್ತಿಯನ್ನು ನೀಡುತ್ತದೆ. ಚಳಿಗಾಲದ ದಿನಗಳನ್ನು ಮೊಟ್ಟೆ ಸೇವನೆಯಿಂದ ಪ್ರಾರಂಭಿಸುವುದು ಉತ್ತಮ ಮಾರ್ಗವಾಗಿದೆ.
ಶುಂಠಿ : ಶುಂಠಿ ದೇಹದಲ್ಲಿ ರಕ್ತ ಪರಿಚಲನೆ ಹೆಚ್ಚಿಸುತ್ತದೆ ಮತ್ತು ಇದು ಆರೋಗ್ಯಕ್ಕೆ ಅವಶ್ಯಕವಾಗಿದೆ. ಶೀತ ಅಥವಾ ಜ್ವರದ ಪ್ರಾರಂಭದಲ್ಲಿ ಶುಂಠಿ ಪರಿಣಾಮಕಾರಿ ಪ್ರತಿಜೀವಕವಾಗಿ ಕಾರ್ಯನಿರ್ವಹಿಸುತ್ತದೆ.
ದಾಳಿಂಬೆ : ಚಳಿಗಾಲದಲ್ಲಿ ದಾಳಿಂಬೆ ಸೇವನೆಯು ಆರೋಗ್ಯಕರವಾಗಿ ಮತ್ತು ಸದೃಢವಾಗಿರಲು ಸಹಾಯ ಮಾಡುತ್ತದೆ. ಇದು ಉರಿಯೂತವನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದ್ದು, ಕೀಲುಗಳಿಗೆ ಹಾನಿ ಮಾಡುವ ಕಿಣ್ವಗಳನ್ನು ತಡೆಯುತ್ತದೆ. ಶೀತ ವಾತಾವರಣದಲ್ಲಿ ಇದರ ಬಳಕೆ ಸಂಧಿವಾತ ಪೀಡಿತರಿಗೆ ಬಹಳ ಪ್ರಯೋಜನಕಾರಿಯಾಗಿದೆ.
ಸೂಚನೆ : ಇಲ್ಲಿರುವ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ನೀಡಲಾಗಿದೆ. ಇದು ವೈದ್ಯರ ಸಲಹೆಗೆ ಪರ್ಯಾಯವಲ್ಲ. ಆದ್ದರಿಂದ ವೈದ್ಯಕೀಯ ಸಲಹೆಯನ್ನು ನಿರ್ಲಕ್ಷಿಸಬೇಡಿ.
ಆರೋಗ್ಯ ಸಂಬಂಧಿತ ಹೆಚ್ಚಿನ ಮಾಹಿತಿಗಾಗಿ ಗೂಗಲ್ ನಲ್ಲಿ saakshatv healthtips ಎಂದು ಸರ್ಚ್ ಮಾಡಿ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ತಲೆನೋವನ್ನು ತ್ವರಿತವಾಗಿ ನಿವಾರಿಸಲು 6 ಸೂಪರ್ ಪವರ್ಫುಲ್ ಹರ್ಬಲ್ ಟೀಗಳು https://t.co/ULasnUIsrc
— Saaksha TV (@SaakshaTv) December 8, 2020
10 ಮತ್ತು 12 ತರಗತಿ ವಿದ್ಯಾರ್ಥಿಗಳ ಬೋರ್ಡ್ ಪರೀಕ್ಷೆ ಮೇ 2021ರಲ್ಲಿ ನಡೆಸಲು ಪೋಷಕರ ಸಂಘಟನೆ ಆಗ್ರಹhttps://t.co/1CSV1aOgIX
— Saaksha TV (@SaakshaTv) December 8, 2020








