“ತಲೈವಾ” ಗೆ ಬರ್ತ್ ಡೇ ಸಂಭ್ರಮ : ಕಂಡಕ್ಟರ್ ನಿಂದ ಸೂಪರ್ ಸ್ಟಾರ್ ವರೆಗಿನ ಜರ್ನಿ..!
ಇಂದು ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಕೇವಲ ಭಾರತವಷ್ಟೇ ಅಲ್ಲದೇ ಬೇರೆ ಬೇರೆ ದೇಶಗಳಲ್ಲಿಯೂ ಅಪಾರ ಅಭಿಮಾನಿಗಳನ್ನ ಸಂಪಾದಿಸಿರುವ ‘ಕಬಾಲಿ’ಗೆ ಅಭಿಮಾನಿಗಳು, ಸಿನಿತಾರೆಯರು, ರಾಜಕೀಯ ನಾಯಕರು ಶುಭ ಕೋರುತ್ತಿದ್ದಾರೆ. ಅದರಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಟ್ವೀಟ್ ಮಾಡುವ ಮೂಲಕ 70 ನೇ ವಸಂತಕ್ಕೆ ಕಾಲಿಟ್ಟ ‘ಎಂದಿರನ್’ ಗೆ ವಿಶ್ ಮಾಡಿದ್ದಾರೆ.
”ಪ್ರೀತಿಯ ರಜನಿಕಾಂತ್ ಅವರೇ, ಹುಟ್ಟುಹಬ್ಬದ ಶುಭಾಶಯಗಳು. ನಿಮಗೆ ದೀರ್ಘ ಆರೋಗ್ಯ ಸಿಗಲಿ” ಎಂದು ಟ್ವೀಟ್ ಮಾಡಿದ್ದಾರೆ ನರೇಂದ್ರ ಮೋದಿ. ಅಂದ್ಹಾಗೆ ಬೆಂಗಳೂರಿನಲ್ಲಿ ಕಂಡಕ್ಟರ್ ಆಗಿದ್ದ ತಲೈವಾ ಸಿನಿಮಾ ಪ್ರವೇಶದಿಂದ ಸೂಪರ್ ಸ್ಟಾರ್ ವರೆಗಿನ ಜರ್ನಿಯೇ ರೋಚಕ. 1950ರ ಡಿಸೆಂಬರ್ 12 ರಂದು ಮಹಾರಾಷ್ಟ್ರದಲ್ಲಿ ಜನಿಸಿದ ರಜನಿಕಾಂತ್ ಅವರು ಬಳಿಕ ಬೆಂಗಳೂರಿಗೆ ವಲಸೆ ಬಂದರು. ಅಂದ್ಹಾಗೆ ರಜನಿ ಮೂಲ ಹೆಸರು ‘ಶಿವಾಜಿ ರಾವ್ ಗಾಯಕ್ ವಾಡ್’.
“ವೈಕುಂಠಕ್ಕೆ ದಾರಿ ಹುಡುಕುತ್ತಿರುವ” ‘ವರ್ಧನ’ನಿಗೆ ಸಾಥ್ ಕೊಟ್ಟ ಧ್ರುವ..!
ಅಂದ್ಹಾಗೆ ಬೆಂಗಳೂರಿನಲ್ಲಿ ಜೀವನ ನಡೆಸುತ್ತಿದ್ದ ರಜನಿ ಮೊದಮೊದಲಿಗೆ ಬಿ ಎಂ ಟಿ ಸಿ ಕಂಡಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಆಗ ಇವರ ಪ್ರತಿಭೆ ಗುರುತಿಸಿದ ತಮಿಳಿನ ಖ್ಯಾತ ನಿರ್ದೇಶಕರಾದ ಬಾಲಚಂದರ್ ಅವರು. ಆ ನಂತರದಲ್ಲಿ ಅವರು ಸಿನಿಮಾಗಳಲ್ಲಿ ಮೊದ ಮೊದಲಿಗೆ ಖಳನಾಯಕನಾಗಿ ಮಿಂಚಿದರು. ಕನ್ನಡದಲ್ಲಿಯೂ ಕೆಲ ಸಿನಿಮಾಗಳಲ್ಲಿ ನಟಿಸಿದ ರಜನಿಗೆ ಅಷ್ಟು ಹೆಸರು ತಂದುಕೊಡಲಿಲ್ಲ. ಆದರೆ ಅವರ ಕೈ ಹಿಡಿದಿದ್ದು ತಮಿಳು ಸಿನಿಮಾ ಇಂಡಸ್ಟ್ರಿ. ಇದೀಗ ತಮಿಳುನಾಡಿನ ಮೇರು ನಟನಾಗಿ ಮೆರೆಯುತ್ತಿರುವ “ಅರುಣಾಚಲಂ” ದೇಶದ ಸೂಪರ್ ಸ್ಟಾರ್ ಕೂಡ ಹೌದು.
ಖಳನಾಯಕನ ಪಾತ್ರಗಳಲ್ಲಿ ನಟಿಸುತ್ತಿದ್ದ ರಜನಿ ಭುವನ ಒರು ಕಲ್ವಿಕ್ಕುರಿ ಚಿತ್ರದ ಮೂಲಕ ಹೀರೋ ಆಗಿ ಬಡ್ತಿ ಪಡೆದರು. ಇದಾದ ನಂತರ ಸಾಲು ಸಾಲು ಸಿನಿಮಾಗಳ ಆಫರ್ ರಜನಿ ಕೈ ಸೇರಿದವು. ಅವರ ವೃತ್ತಿ ಜೀವನಕ್ಕೆ ದೊಡ್ಡ ತಿರುವು ತಂದು ಕೊಟ್ಟ ಚಿತ್ರ ಅಂದ್ರೆ ಅದು ಹಿಂದಿಯ ಡಾನ್ ಸಿನಿಮಾದ ರೇಮೇಕ ಬಿಲ್ಲಾ ಚಿತ್ರ. ಈ ಸಿನಿಮಾ ಸಖತ್ ಹಿಟ್ ಆಗಿತ್ತು. ಕನ್ನಡಲ್ಲಿ ಸಹೋದರರ ಸವಾಲ್ ಸಿನಿಮಾದಲ್ಲಿ ರಜನಿ ಮಿಂಚಿದ್ದರು. ಇನ್ನೂ ತಮಿಳು, ತೆಲುಗು, ಹಿಂದಿ , ಕನ್ನಡ, ಮಳಯಾಳಂ, ಇಂಗ್ಲಿಷ್ ಸೇರಿದಂತೆ ಹಲವಾರು ಭಾಷೆಗಳಲಲ್ಲಿ ‘ಶಿವಾಜಿ’ ನಟನೆ ಮಾಡಿದ್ದಾರೆ. ಇನ್ನೂ ರೋಬೋ, ಶಿವಾಜಿ, ಮಿ. ಭಾರತ್, ಭಗವಾನ್ ದಾದಾ, ವೇಳೈ ಕಾರನ್, ದಳಪತಿ, ಅಣ್ಣಾಮಲೈ, ಭಾಷಾ, ಮುತ್ತು, ಪಡಯಪ್ಪ, ಬಾಬ, ಚಂದ್ರಮುಖಿ ದೊಡ್ಡ ಮಟ್ಟದ ಹಿಟ್ ತಂದು ಕೊಟ್ಟ ಸಿನಿಮಾಗಳು.
ಬಿಹಾರ | ಕಳೆದ 24 ಗಂಟೇಲಿ ಮೂವರು ರೈತರ ಕೊಲೆ
ಪ್ರಸ್ತುತ ರಜನಿಕಾಂತ್ ಅವರು ರಾಜಕೀಯ ಹಾಗೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ರಜನಿಕಾಂತ್ ರಾಜಕೀಯ ಪ್ರವೇಶ ಖಚಿತಪಡಿಸಿದ್ದಾರೆ. ಡಿಸೆಂಬರ್ 31 ರಂದು ಅಧಿಕೃತವಾಗಿ ತಮ್ಮ ರಾಜಕೀಯ ಪಕ್ಷ ಘೋಷಣೆ ಮಾಡುವುದಾಗಿ ಘೋಷಣೆ ಮಾಡಿಸಿದ್ದಾರೆ. ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ರಜನಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ. ಇತ್ತ ಬಹುನಿರೀಕ್ಷೆಯ ದಕ್ಷಿತ ಭಾರತದ ಸಿನಿಮಾವಾದ ಅಣ್ಣಾತೆಯಲ್ಲಿ ರಜನಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ದೊಡ್ಡ ದೊಡ್ಡ ನಟರ ತಾರಾಬಗಳವೇ ಇದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel