ಮುಂಬಯಿ : ತುಳುವ ಸೂಪರ್‌ಸ್ಟಾರ್ ಸೌರಭ್ ಭಂಡಾರಿ ಇದೀಗ ತುಳುವಿನಿಂದ ತಮಿಳು ಚಿತ್ರರಂಗದತ್ತ ಹೆಜ್ಜೆ ಹಾಕಿದ್ದಾರೆ. ತಮಿಳು ಚಿತ್ರಲೋಕದ ಹೆಸರಾಂತ ನಿರ್ಮಾಪಕ ಕಲೈಪುಲಿ ಎಸ್.ಥನು ಅವರೇ ಖುದ್ದಾಗಿ ಸೌರಭ್ ಭಂಡಾರಿ ಅವರ ನಟನೆಯನ್ನು ಕಂಡು ತಮಿಳು ಭಾಷಾ ಚಿತ್ರದಲ್ಲಿ ನಟಿಸುವಂತೆ ಪ್ರೇರಪಿಸಿ ಪಟ್ಟಾಸ್ ಚಿತ್ರದಲ್ಲಿ ಅವಕಾಶ ನೀಡಿದ್ದಾರೆ. ಧನುಷ್ ಜೊತೆ ಸೌರಭ್ ಅಭಿನಯಿಸಿದ್ದಾರೆ.
ಬಾಲ್ಯದಿಂದಲೇ ಕರಾಟೆ ಮಾರ್ಶಲ್ ಆರ್ಟ್ ನಲ್ಲಿ ಪಳಗಿದ ಸೌರಭ್, ಸ್ವರ್ಣ ಪದಕದೊಂದಿಗೆ ಬ್ಲಾ ಕ್ ಬೆಲ್ಟ್ ಚಾಂಪಿಯನ್ ತನ್ನದಾಗಿಸಿದ ಅಪ್ರತಿಮ ಪ್ರತಿಭೆ.
ಪಟ್ಟಾಸ್ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಪಡೆದ ನನಗೆ ಸ್ಥೈರ್ಯದೊಂದಿಗೆ ಕಾದಾಡುವ (ಕರಾಟೆ) ಕ್ರಮಾಗತಿಗೆ ಮತ್ತಷ್ಟು ವಿಫುಲ ಅವಕಾಶ ಪಡೆದಂತಾಗಿದೆ. ಕರಾಟೆಯಲ್ಲಿನ ಸುಮಾರು 20 ವರ್ಷಗಳ ಪರಿಶ್ರಮ, ಅಭ್ಯಾಸವೇ ಈ ಚಿತ್ರದಲ್ಲಿ ನಟಿಸಲು ಸುಲಭ ಸಾಧ್ಯವಾಗಿದೆ. ನನ್ನ ಜೀವನದಲ್ಲೇ ಇದೊಂದು ಸೋಜಿಗದ ವಿಸ್ಮಯಕಾರಿ ಪರಮ ಅನುಭವ ಎಂದು ಸೌರಭ್ ತಿಳಿಸಿದ್ದಾರೆ.








