ನವದೆಹಲಿ: ಕೇಂದ್ರ ಬಿಜೆಪಿ ನೇತೃತ್ವದ ಸರ್ಕಾರವು ಅದಾನಿಗೆ ಉದ್ಯಮಿ ಅದಾನಿಗೆ ಸಂಪೂರ್ಣ ಬೆಂಬಲ ನೀಡುತ್ತಿದೆ ಎಂದು ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಆರೋಪಿಸಿದ್ದಾರೆ.
ಅದಾನಿ ವಿರುದ್ಧ ಯುಎಸ್ ಕೋರ್ಟ್‌ನಿಂದ ವಾರೆಂಟ್ ಜಾರಿಯಾಗಿರುವ ವಿಷಯವಾಗಿ ಮಾತನಾಡಿದ ಅವರು ಗೌತಮ್ ಅದಾನಿಯನ್ನು (Gautham Adani) ಕೂಡಲೇ ಕೇಂದ್ರ ಸರ್ಕಾರ ಬಂಧನ ಮಾಡಬೇಕು. ಆದರೆ ಕೇಂದ್ರ ಸರ್ಕಾರ ಅವರನ್ನು ರಕ್ಷಿಸುತ್ತಿದೆ. ಈ ವಿಚಾರವನ್ನ ನಾವು ಸಂಸತ್ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ. ಅದಾನಿ ಕಾನೂನು ಬಾಹಿರ ಕೆಲಸ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಕೇಸ್‌ಲ್ಲಿ ಭಾಗಿಯಾಗಿದ್ದಾರೆ ಎಂದು ಹಲವರು ವರ್ಷಗಳಿಂದ ಹೇಳುತ್ತಿದ್ದೇವೆ. ಆದರೆ, ಪ್ರಧಾನಿ ಮೋದಿ ಈ ಕುರಿತು ಯಾವಾಗಲೂ ಮಾತನಾಡಿಲ್ಲ ಎಂದು ಆರೋಪಿಸಿದ್ದಾರೆ.
ಈಗ ವಿದೇಶದಲ್ಲಿ ಅಕ್ರಮದ ಬಗ್ಗೆ ಚರ್ಚೆ ಆಗುತ್ತಿದೆ. ನಮ್ಮ ದೇಶದ ಆಸ್ತಿಯನ್ನ ಅದಾನಿಗೆ ಕೊಡುತ್ತಿದ್ದಾರೆ. ಏರ್ಪೋರ್ಟ್, ಪೋರ್ಟ್, ಜಮೀನು ಸೇರಿ ಎಲ್ಲಾ ಅದಾನಿಗೆ ಕೊಡುತ್ತಿದ್ದಾರೆ. ಅವನು ನ್ಯಾಯವಾಗಿ ಮಾಡಿಕೊಂಡರೆ ಪರವಾಗಿಲ್ಲ. ಒಬ್ಬನಿಗೆ ಶ್ರೀಮಂತ ಮಾಡಲು ಹೀಗೆ ಅಕ್ರಮ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.