ಸಾಲ ಪಾವತಿ ಅವಧಿ ವಿಸ್ತರಣೆ ಸಾಧ್ಯವಿಲ್ಲ ಎಂಬ RBI ನಿಲುವಿಗೆ ಸುಪ್ರೀಂಕೋರ್ಟ್ ಸಮ್ಮತಿ..!
ನವದೆಹಲಿ: ಕಳೆದ ವರ್ಷ ಸಾಲಗಾರರು ಪಾವತಿ ಮಾಡಬೇಕಿದ್ದ ಸಂಪೂರ್ಣ ಚಕ್ರಬಡ್ಡಿಯನ್ನು ಮನ್ನಾ ಮಾಡುವಂತೆ ಕೋರಿ ಹಲವಾರು ಸಾಲಗಾರರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.
ಕೋವಿಡ್ ಹಿನ್ನೆಲೆಯಲ್ಲಿ 2020ರ ಮಾರ್ಚ್ 1 ರಿಂದ ಆಗಸ್ಟ್ 31 ರವರೆಗೆ ಸಾಲಗಾರರು ಪಾವತಿ ಮಾಡಬೇಕಿದ್ದ ಚಕ್ರಬಡ್ಡಿಯನ್ನು ಮನ್ನಾ ಮಾಡುವಂತೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇದರ ಜೊತೆಗೆ ಸಂಪೂರ್ಣ ಚಕ್ರಬಡ್ಡಿಯನ್ನು ಮನ್ನಾ ಮಾಡುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನೂ ನ್ಯಾಯಾಲಯವು ತಿರಸ್ಕರಿಸಿದೆ.
ಒಂದು ವೇಳೆ ಈ ಅವಧಿಯಲ್ಲಿ ಯಾವುದೇ ಸಾಲಗಾರನಿಂದ ಚಕ್ರಬಡ್ಡಿಯನ್ನು ಬ್ಯಾಂಕ್ ಗಳು ಪಡೆದುಕೊಂಡಿದ್ದರೆ, ಅವರಿಗೆ ಅದನ್ನು ಹಿಂದಿರುಗಿಸುವ ಬದಲು, ಅವರ ಮುಂದಿನ ಬಡ್ಡಿಯ ಕಂತಿನಲ್ಲಿ ಅದನ್ನು ಸರಿದೂಗಿಸುವಂತೆ ಕೋರ್ಟ್ ಹೇಳಿದೆ. ಆದರೆ ಯಾವುದೇ ಕಾರಣಕ್ಕೂ ಈ ಅವಧಿಯನ್ನು ವಿಸ್ತರಣೆ ಮಾಡಲು ಸಾಧ್ಯವಿಲ್ಲ ಎಂಬ ಆರ್ ಬಿಐ ಮಾತಿಗೆ ಕೋರ್ಟ್ ಸಮ್ಮತಿ ನೀಡಿದೆ.
ಇನ್ನೂ ಸಾಲ ವಿನಾಯಿತಿ ವಿಸ್ತರಣೆ, ಬಡ್ಡಿ ಮನ್ನಾ ಮಾಡಲು ಸಾಧ್ಯವಿಲ್ಲ ಎಂದಿರುವ ಸುಪ್ರೀಂ ಕೋರ್ಟ್, ಯಾವುದೇ ಹಣಕಾಸು ಪ್ಯಾಕೇಜ್ ರೀತಿಯಲ್ಲಿ ಪರಿಹಾರ ನೀಡುವಂತೆ ಸರ್ಕಾರಕ್ಕಾಗಲಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗಾಗಲಿ ನಿರ್ದೇಶನ ನೀಡುವುದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಆರ್.ಬಿ.ಐ ಸಾಲ ವಿನಾಯಿತಿ ಅವಧಿ 6 ತಿಂಗಳು ವಿಸ್ತರಿಸಬೇಕು ಎಂದು ಕೋರಿ ವಿವಿಧ ವಾಣಿಜ್ಯ ಒಕ್ಕೂಟಗಳು ಹಾಗೂ ಕಾರ್ಪೊರೇಟ್ ಕಂಪನಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಅರ್ಜಿ ತಿರಸ್ಕರಿಸಿದ್ದು ಸಾಲ ವಿನಾಯಿತಿ ವಿಸ್ತರಣೆ, ಸಂಪೂರ್ಣ ಬಡ್ಡಿ ಮನ್ನಾ ಸಾಧ್ಯವಿಲ್ಲ ಎಂದು ತಿಳಿಸಿದೆ.
45 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಲೇಬೇಕು : ಜಾವೇಡ್ಕರ್
ಕುಡಿದು ಮೃತಪಟ್ಟರೆ ವಿಮೆ ಹಣ ಕುಟುಂಬಕ್ಕೆ ಸಿಗುವುದಿಲ್ಲ : ಸುಪ್ರೀಂ ಕೋರ್ಟ್..!
ಕೋವಿಡ್ ಲಸಿಕೆ ಪಡೆದ ಓವೈಸಿ : ಸಾರ್ವಜನಿಕರಿಗೆ ಲಸಿಕೆ ಪಡೆಯುವಂತೆ ಮನವಿ..!