ಪ್ರಧಾನಿ ನರೇಂದ್ರ ಮೋದಿ ಜಾಗತಿಕವಾಗಿ ಯೋಚಿಸಿ, ಸ್ಥಳೀಯವಾಗಿ ವರ್ತಿಸುವ ಹಾಗೂ ದೂರದೃಷ್ಟಿವುಳ್ಳ ಬಹುಮುಖ ಪ್ರತಿಭೆ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅರುಣ್ ಮಿಶ್ರಾ ಹಾಡಿಹೊಗಳಿದ್ದಾರೆ..
ಸುಪ್ರೀಂಕೋರ್ಟ್ ನಡೆದ ಅಂತರಾಷ್ಟ್ರೀಯ ನ್ಯಾಯಾಂಗ ಸಮ್ಮೇಳನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದ ನಾಯಕ, ಮೋದಿ ಅವರ ಉಸ್ತುವಾರಿಯಲ್ಲಿ ಭಾರತವು ಅಂತರಾಷ್ಟ್ರೀಯವಾಗಿ ಜವಾಬ್ದಾರಿಯುತ ಮತ್ತು ಅತ್ಯಂತ ಸ್ನೇಹಪರ ಸದಸ್ಯ ರಾಷ್ಟ್ರವಾಗಿದೆ ಎಂದು ಹೇಳಿದ್ದಾರೆ.
ಭಾರತ ವಿಶ್ವದಲ್ಲೇ ಅತಿದೊಡ್ಡಣ ಪ್ರಜಾಪ್ರಭುತ್ವ ಹೊಂದಿರುವ ದೇಶ. ಇಂತಹ ದೇಶದಲ್ಲಿ ಪ್ರಜಾಪ್ರಭುತ್ವವವು ಇಷ್ಟು ಯಶಸ್ವಿಯಾಗಿರುವುದು ಅಚ್ಚರಿಯ ವಿಚಾರವಾಗಿದೆ. ನ್ಯಾಯಾಂಗ ವ್ಯವಸ್ಥೆಯು ಪ್ರಜಾಪ್ರಭುತ್ವದ ಬೆನ್ನೆಲುಬಾಗಿದೆ. ಅದರಂತೆ ಶಾಸಕಾಂಗವು ಹೃದಯ ಮತ್ತು ಕಾರ್ಯಕಾರಿ ಮೆದುಳು. ರಾಜ್ಯದ ಈ ಮೂರು ಅಂಗಗಳು ಸ್ವತಂತ್ರವಾಗಿ ಕೆಲಸ ಮಾಡುವುದರಿಂದ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.








