ಟ್ವಿಟರ್ ಮೇಲೆ ಚಾಟಿ ಬೀಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ, ಜುಲೈ 24: ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಮಾಡಿದ ನ್ಯಾಯಾಂಗ ನಿಂದನೆಯ ಟ್ವೀಟ್ ಅನ್ನು ಏಕೆ ನಿಷ್ಕ್ರಿಯಗೊಳಿಸಿಲ್ಲ ಎಂದು ಟ್ವಿಟರ್ ಅನ್ನು ತೀಕ್ಷ್ಣವಾಗಿ ಪ್ರಶ್ನಿಸಿದೆ.
ನ್ಯಾ. ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠ ವಕೀಲ ಪ್ರಶಾಂತ್ ಭೂಷಣ್ ವಿವಾದಾತ್ಮಕ ಟ್ವೀಟ್ ಮಾಡಿದ್ದರೂ ನೀವೇಕೆ ಅದನ್ನು ಸ್ವಯಂ ನಿಷ್ಕ್ರಿಯಗೊಳಿಸುವ ತೀರ್ಮಾನ ಕೈಗೊಂಡಿಲ್ಲ. ನಾವು ಆ ಕುರಿತು ವಿಚಾರಣೆ ಆರಂಭಿಸಿದ ಬಳಿಕವೂ ನೀವೇಕೆ ಕೋರ್ಟಿನ ಆದೇಶ ನಿರೀಕ್ಷಿಸುತ್ತಿದ್ದೀರಿ. ನಾವು ಈ ವಿಚಾರದಲ್ಲಿ ಯಾವ ಆದೇಶವನ್ನು ನೀಡದೆ ನಿರ್ಧಾರ ಕೈಗೊಳ್ಳುವುದನ್ನು ನಿಮ್ಮ ವಿವೇಚನೆಗೆ ಬಿಟ್ಟಿದ್ದೇವೆ ಎಂದು ಚಾಟಿ ಬೀಸಿದೆ.
ಇತ್ತೀಚೆಗೆ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಸಹಿತ ನಾಲ್ವರು ಸಿಜೆಐಗಳ ವಿರುದ್ಧ ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿದ್ದು, ಸುಪ್ರೀಂ ಕೋರ್ಟ್ ಲಾಕ್ ಡೌನ್ ಸಮಯದಲ್ಲಿ ನಿರ್ವಹಿಸಿದ ರೀತಿಯನ್ನು ವಿಮರ್ಶಿಸಿದರು. ಈ ಸಂಬಂಧ ನ್ಯಾಯಪೀಠವು ಔಪಚಾರಿಕ ನೋಟೀಸ್ ಅನ್ನು ನೀಡಿದ್ದು ಮತ್ತು ಆಗಸ್ಟ್ 5 ರೊಳಗೆ ಅವರ ಉತ್ತರವನ್ನು ಕೋರಿದೆ.
ಈ ಸಂದರ್ಭದಲ್ಲಿ, ನ್ಯಾಯಾಲಯವು ಏನು ಹೇಳುತ್ತಿದೆ ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದು, ಇದನ್ನು ಅವರು ತಮ್ಮ ಕಕ್ಷಿದಾರರಿಗೆ ತಿಳಿಸುವುದಾಗಿ ಟ್ವಿಟರ್ ಪರ ಹಾಜರಾದ ಹಿರಿಯ ವಕೀಲ ಸಜನ್ ಪೊವ್ವಾಯಾ ತಿಳಿಸಿದರು..