ದಾಂಪತ್ಯ ಜೀವನದ ಕುರಿತಂತೆ ಸುಪ್ರೀಂ ಕೋರ್ಟ್ ಗಂಭೀರ ಅಭಿಪ್ರಾಯ ವ್ಯಕ್ತಪಡಿಸಿದೆ. ವಿವಾಹ ಬಂಧದಲ್ಲಿ ಪತಿ ಅಥವಾ ಪತ್ನಿ ತಮ್ಮ ಸ್ವತಂತ್ರ ಜೀವನವನ್ನು ನಡೆಸಲು ಬಯಸುವುದು ಸರಿಯಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಇಬ್ಬರು ವ್ಯಕ್ತಿಗಳು ತಮ್ಮ ಇಚ್ಛೆಯಿಂದಲೇ ಮದುವೆಯಾಗುತ್ತಾರೆ. ಹಾಗಿದ್ದರೆ, ಸ್ವತಂತ್ರವಾಗಿ ಬದುಕುವುದು ಹೇಗೆ ಸಾಧ್ಯ? ಮಕ್ಕಳ ಹಿತಾಸಕ್ತಿ ಮುಖ್ಯ. ಪತಿ-ಪತ್ನಿಯರು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ನ್ಯಾಯಮೂರ್ತಿಗಳು B.V. ನಾಗರತ್ನ ಮತ್ತು R. ಮಹಾದೇವನ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ..
ಈ ಅಭಿಪ್ರಾಯವು ದಾಂಪತ್ಯ ಸಂಬಂಧ, ಮಕ್ಕಳ ಭವಿಷ್ಯ ಹಾಗೂ ಕುಟುಂಬದ ಒಗ್ಗಟ್ಟಿನ ಕುರಿತಾದ ಚರ್ಚೆಗೆ ಹೊಸ ತಿರುವು ನೀಡಿದೆ.








