ಮಹದಾಯಿ ಕಾಮಗಾರಿ ಆರಂಭಕ್ಕೆ ಅಡ್ಡಿಪಡಿಸಿ, ಗೋವಾ ಸರ್ಕಾರ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಈ ಮೂಲಕ ಮಹದಾಯಿ ಕಾಮಗಾರಿಗೆ ಇದ್ದ ಅಡ್ಡಿ ಕ್ಲಿಯರ್ ಆಗಿದೆ. ಕರ್ನಾಟಕಕ್ಕೆ ಮತ್ತೆ ಕಾನೂನು ಹೋರಾಟದಲ್ಲಿ ಜಯ ಸಿಕ್ಕಂತಾಗಿದೆ. ಈ ಸಂಬಂಧ ಎಜಿ ಪ್ರಭುಲಿಂಗ ಮಾಹಿತಿ ನೀಡಿದ್ದು, ಮಹದಾಯಿ ನದಿ ನೀರು ಹಂಚಿಕೆ ಕಾಮಗಾರಿ ಬಗ್ಗೆ ಸುಪ್ರೀಂ ಕೋರ್ಟ್ ನ ದ್ವಿ ಸದಸ್ಯ ಪೀಠ ಕರ್ನಾಟಕದ ಕಾನೂನು ಹೋರಾಟಕ್ಕೆ ಜಯ ನೀಡಿದೆ. ಟ್ರಿಬ್ಯೂನಲ್ ಆದೇಶದ ಅನ್ವಯದಂತೆ ಕಾಮಗಾರಿ ಆರಂಭವಾಗಲಿದೆ. ಈ ಮೂಲಕ ಕಾಮಗಾರಿಗೆ ಇದ್ದ ಅಡ್ಡಿ ಕ್ಲಿಯರ್ ಆಗಿದ್ದು, ಸದ್ಯದಲ್ಲಿಯೇ ಮಹದಾಯಿ ಯೋಜನೆ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದ್ರು. ಸದ್ಯ ಮಹದಾಯಿ ಕಾಮಗಾರಿ ಯೋಜನೆಗಿದ್ದ ಎಲ್ಲಾ ಅಡೆತಡೆಗಳು ಕೊನೆಗೊಂಡಿದೆ. ಇನ್ನು ಮುಂದೆ ಉತ್ತರ ಕರ್ನಾಟಕದ ಅನ್ನದಾತರು ನೆಮ್ಮದಿಯ ಜೀವನ ನಡೆಯಬಹುದಾಗಿದೆ.
8 ವರ್ಷಗಳ ಮೌನ ಮುರಿದ ನ್ಯಾಷನಲ್ ಕ್ರಶ್: ಕುಟುಂಬದ ತಂಟೆಗೆ ಬಂದರೆ ಸುಮ್ಮನಿರಲ್ಲ ಎಂದು ಟ್ರೋಲಿಗರಿಗೆ 24 ಗಂಟೆಗಳ ಖಡಕ್ ವಾರ್ನಿಂಗ್ ನೀಡಿದ ರಶ್ಮಿಕಾ ಮಂದಣ್ಣ
ಸದಾ ನಗುಮುಖದಿಂದಲೇ ಎಲ್ಲರ ಮನಸ್ಸು ಗೆದ್ದಿರುವ ರಶ್ಮಿಕಾ ಮಂದಣ್ಣ ಇದೀಗ ತೀವ್ರವಾಗಿ ಗರಂ ಆಗಿದ್ದಾರೆ. ಸಿನಿಮಾ ರಂಗಕ್ಕೆ ಕಾಲಿಟ್ಟಾಗಿನಿಂದಲೂ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್, ನೆಗೆಟಿವ್ ಕಮೆಂಟ್...








