ಆಕ್ಸಿಜನ್ , ಔಷಧ ಪೂರೈಕೆಗೆ ಟಾಸ್ಕ್ಫೋರ್ಸ್ ರಚಿಸಿದ ಸುಪ್ರೀಂಕೋರ್ಟ್..!
ದೇಶದಲ್ಲಿ ಕೋವಿಡ್ 2ನೇ ಅಲೆ ಸೃಷ್ಟಿಸಿರುವ ಭೀಕರ ಪರಿಸ್ಥಿತಿಗೆ ಜನರು ಅದ್ರಲ್ಲು ಬಡವರು ತತ್ತರಿಸಿಹೋಗಿದ್ದಾರೆ. ಒಂದೆಡೆ ಆಕ್ಸಿಜನ್ ಕೊರೆತ, ಬೆಡ್ ಕೊರತೆ ಮತ್ತೊಂದೆಡೆ , ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ , ಚಿಕಿತ್ಸೆಗೆ ಹಣವಿಲ್ಲದೇ ಪರದಾಡುವ ಸ್ಥಿತಿ ಇದೆ.. ದಿನೇ ದಿನೇ , ಸೋಂಕಿತರ ಸಂಖ್ಯೆ , ಸಾವಿನ ಸಂಖ್ಯೆ ಹೆಚ್ಚಾಗ್ತಲೇ ಇದೆ..
ಈ ನಡುವೆ ಆಕ್ಸಿಜನ್ , ಔಷಧ ಪೂರೈಕೆಗೆ ಸುಪ್ರೀಂಕೋರ್ಟ್ ಟಾಸ್ಕ್ ಫೋರ್ಸ್ ರಚಿಸಿದೆ. ವೈಜ್ಞಾನಿಕ ಮತ್ತು ಅಗತ್ಯಕ್ಕೆ ತಕ್ಕಂತೆ ರಾಜ್ಯಗಳಿಗೆ ಆಕ್ಸಿಜನ್ ಮತ್ತು ಅಗತ್ಯ ಔಷಧಗಳ ಪೂರೈಕೆಯನ್ನು ಈ ಟಾಸ್ಕ್ ಫೋರ್ಸ್ ನೋಡಿಕೊಳ್ಳಲಿದೆ. ತನ್ನದೇ ಆದ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಈ ಸಮಿತಿ ಸ್ವತಂತ್ರವಾಗಿದ್ದು, ವೈಜ್ಞಾನಿಕವಾಗಿಯೂ ಕಾರ್ಯತಂತ್ರ ರೂಪಿಸಲಿದೆ.
ಈ ತಜ್ಞರ ಸಮಿತಿಯಲ್ಲಿ ಕೇಂದ್ರ ಆರೋಗ್ಯ ಸಚಿವ ಮತ್ತು ಟಾಸ್ಕ್ ಫೋರ್ಸ್ನ ಮುಖ್ಯಸ್ಥರಿಗೂ ಸ್ಥಾನ ನೀಡಲಾಗಿದೆ. ಈ ಸಮಿತಿ ನೇರವಾಗಿ ಕೇಂದ್ರ ಸರ್ಕಾರ ಮತ್ತು ಸುಪ್ರೀಂಕೋರ್ಟ್ಗೆ ವರದಿ ಸಲ್ಲಿಸಲಿದೆ. ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠ ಈ ಬಗ್ಗೆ ಆದೇಶ ಹೊರಡಿಸಿದ್ದು, ಇನ್ನೊಂದು ವಾರದಲ್ಲಿ ಈ ಸಮಿತಿ ಕೆಲಸ ಶುರು ಮಾಡಲಿದೆ. ಇನ್ನೂ ನಮ್ಮ ಕರ್ನಾಟಕದ ನಾರಾಯಣ ಹೆಲ್ತ್ ಕೇರ್ನ ಡಾ.ದೇವಿ ಪ್ರಸಾದ್ ಶೆಟ್ಟಿ ಅವರು ಸಹ ಈ ಸಮಿತಿಯಲ್ಲಿದ್ದಾರೆ.








