ಬಾಲಿವುಡ್ ನಟ ಸುಶಾಂತ್ ಸಾವಿನ ಪ್ರಕರಣದಲ್ಲಿ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿರುವುದು ಒಂದೆಡೆಯಾದರೆ ದಿನೇ ದಿನೇ ಹೊಸ ಹೊಸ ಹೆಸರುಗಳು ಅನುಮಾತಿರ ಪಟ್ಟಿ ಸೇರುತ್ತಿದೆ. ಇತ್ತೀಚೆಗೆ ಮಾಹಾರಾಷ್ಟ್ರದ ಮಾಜಿ ಸಿಎಂ ನಾರಾಯಣ ಠಾಣೆ ಅವರು ಈ ಪ್ರಕರಣದಲ್ಲಿ ಇಬ್ಬರು ನಟರನ್ನು ವಿಚಾರಣೆಗೆ ಒಳಪಡಿಸಲೇಬೇಕು ಎಂದು ಹೇಳಿದ್ದರು. ಆ ಇಬ್ಬರ ಪೈಕಿ ನಟ ಸೂರಜ್ ಪಾಂಚೋಲಿ ಒಬ್ಬರಾದರೆ ಮತ್ತೊಬ್ಬರು ಡಿನೋ ಮೊರಿಯಾ.
ಆದರೆ ಪ್ರಕರಣಕ್ಕೆ ಸುಖಾಸುಮ್ಮನೆ ತಮ್ಮ ಹೆಸರನ್ನು ಎಳೆತರುತ್ತಿರುವ ಹಿನ್ನೆಲೆ ಸೂರಜ್ ಪಾಂಚೋಲಿ ಅವರು ಗರಂ ಆಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ಈ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಖಡಾಖಂಡಿತವಾಗಿ ಪ್ರತಿಪಾದಿಸಿದ್ದಾರೆ. ಸುಸಾಂತ್ ಸಾವಿನ ಹಿಂದಿನ ದಿನ ಅಂದರೆ ಜೂನ್ 13 ರ ರಾತ್ರಿ ಸೂರಜ್ ಪಾಂಚೋಲಿ ಅವರ ನಿವಾಸದಲ್ಲಿ ಪಾರ್ಟಿ ನಡೆದಿತ್ತು ಎಂದು ನಾರಾಯಣ ಠಾಣೆ ಅವರು ಆರೋಪ ಮಾಡಿದ್ದರು. ಆದರೆ ಈ ಆರೋಪವನ್ನು ಅಲ್ಲೆಗಳೆದಿರುವ ಸೂರಜ್ ಅಂದು ನಮ್ಮ ಮನೆಯಲ್ಲಿ ಯಾವುದೇ ಪಾರ್ಟಿ ನಡೆದಿಲ್ಲ. ಸುಶಾಂತ್ ಆಗಲಿ, ಅವರ ಮ್ಯಾನೇಜರ್ ದಿಶಾ ಸಾಲಿಯಾನ್ ಆಗಲಿ ಅವರಿಬ್ಬರ ಜೊತೆಗೆ ನಾನು ಯಾವುದೇ ರೀತಿಯಾದ ಸಂಪರ್ಕ ಹೊಂದಿಲ್ಲ. ಅವರಿಬ್ಬರ ಸಾವಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಈ ವಿಚಾರ ಮುಂಬೈ ಪೊಲೀಸರಿಗೆ ಚೆನ್ನಾಗಿ ಗೊತ್ತಿದೆ. ಆದರು ಅವರು ಯಾಕೆ ಸುಮ್ಮನಿದ್ದಾರೋ ತಿಳಿದಿಲ್ಲ ಎಂದು ಹೇಳಿಕೊಂಡಿದ್ದಾರೆ.
ಇನ್ನೂ ಮುಂದುವರೆದು ಮಾತನಾಡಿರುವ ಸೂರಜ್ ಅವರು ಈ ವಿಚಾರವಾಗಿ ನಾನು ಸಕಾರಾತ್ಮಕ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದೇನೆ. ಯಾಕೆಂದರೆ ಈ ಪ್ರಕರಣದಲ್ಲಿ ನನ್ನ ಹೆಸರು ಎಳೆತಂದಾಗಿನಿಂದಲೂ ನಮ್ಮ ಪರಿವಾರದರಲ್ಲಿ ಆತಂಕ ಮನೆ ಮಾಡಿದೆ. ನಾನು ಏನಾದರೂ ಅನಾಹುತ ಮಾಡಿಕೊಂಡುಬಿಡುತ್ತೇನೆ ಎಂಬ ಆತಂಕ ಅವರಲ್ಲಿದೆ. ನಮ್ಮ ತಾಯಿಯು ಈ ಬಗ್ಗೆ ನನ್ನ ಜೊತೆಗೆ ಚರ್ಚೆಯೂ ನಡೆಸಿದ್ದಾರೆ. ನನ್ನಿಂದಾಗಿ ನಮ್ಮ ಪರಿವಾರದವರಿಗೆ ಒತ್ತಡ ಹೆಚ್ಚಾಗುತ್ತಿದೆ. ಹೀಗಾಗಿ ನಾನು ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲು ಹೋಗುತ್ತಿಲ್ಲ ಎಂದಿದ್ದಾರೆ.
ಇನ್ನೂ ಈ ಜನರು ವಿನಾಕಾರಣ ನನ್ನನ್ನು ಎಲ್ಲದಕ್ಕೂ ಎಳೆದು ತರುತ್ತಿದ್ದಾರೆ. ಅವರು ನನ್ನ ಬದುಕನ್ನು ನಾಶಪಡಿಸುತ್ತಿದ್ದಾರೆ. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಈ ಜನರು ಖಂಡಿತಾ ನಾನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತಾರೆ ಎಂದಿದ್ದಾರೆ ಸೂರಜ್. ನಾರಾಯಣ ಠಾಣೆ ಅವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸೂರಜ್ ನಾನು ಅವರ ಮಾತಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಈ ಬಗ್ಗೆ ಅವರ ಪರಿವಾರದವರಾಗಲಿ, ಅವರ ತಂದೆಯಾಗಲಿ, ಸಹೋದರಿಯಾಗಲಿ ಏನಾದರೂ ಹೇಳಿದ್ದಾರಾ ಎಂದು ಪ್ರಶ್ನಿಸಿದಾರೆ.
ಇದೇ ವೇಳೆ ಮಾತನಾಡಿರುವ ಸೂರಜ್ ನಾನು ಚಿತ್ರರಂಗದಲ್ಲಿ ಬೆಳೆಯುವದಕ್ಕೆ ಸಾಕಷ್ಟು ಕಷ್ಟಪಟ್ಟಿದ್ದೇನೆ. ಇಷ್ಟುಬೇಗ ನನ್ನ ಕನಸಿಗೆ ಎಳ್ಳುನೀರು ಬಿಡುವುದಕ್ಕೆ ಇಷ್ಟವಿಲ್ಲ. ಇದು ನನ್ನ ಕನಸು. ನನ್ನ ಪ್ಯಾಷನ್. ಜನರು ನನಗೆ ಇಲ್ಲಿ ಬೆಳೆಯುವುದು ತುಂಬ ಸುಲಭ ಎಂದುಕೊಂಡಿದ್ದಾರೆ. ಆದರೆ ನಾನು ಈ ಉದ್ಯಮದಲ್ಲಿ ಮುಂದೆ ಬರಲು ಸಾಕಷ್ಟು ಶ್ರಮವಹಿಸಿದ್ದೇನೆ. ಆದರೆ ಇದಕ್ಕೂ ಮೊದಲು ನಾನು ಸಹಾಯಕ ನಿರ್ವಾಹಕನಾಗಿ ಕೆಲಸ ಮಾಡಿ , ನಟನೆಯ ಕೋರ್ಸ್ ಮಾಡಿಕೊಂಡಿದ್ದೇನೆ. ನನ್ನ ಕನಸಿಗಾಗಿ ಶ್ರಮಿಸಿದ್ದೇನೆ. ಈ ಉದ್ಯಮದಲ್ಲಿ ಇನ್ನೂ ಬೆಳೆಯಬೇಕು. ಇಷ್ಟು ಬೇಗ ಈ ಉದ್ಯಮದಿಂದ ದೂರಾಗಲು ನಾನು ತಯಾರಿಲ್ಲ ಎಂದಿದ್ದಾರೆ.
ನಗದು ವ್ಯವಹಾರ ಮಾಡುವವರಿಗೆ ಬಿಗ್ ಶಾಕ್ ಇನ್ಮುಂದೆ ಈ ಮಿತಿ ಮೀರಿದರೆ ಬೀಳಲಿದೆ ಶೇಕಡಾ 100 ರಷ್ಟು ದಂಡ
ಏಪ್ರಿಲ್ 1 ರಿಂದ ದೇಶಾದ್ಯಂತ ಆದಾಯ ತೆರಿಗೆ ಇಲಾಖೆಯ ನಿಯಮಗಳಲ್ಲಿ ಭಾರಿ ಬದಲಾವಣೆ ತರಲಾಗಿದೆ. 64 ವರ್ಷಗಳ ಹಳೆಯ ಕಾನೂನಿಗೆ ಮೇಜರ್ ಸರ್ಜರಿ ಮಾಡಲಾಗಿದ್ದು ಕಪ್ಪು ಹಣದ...








