ದೆಹಲಿಯಲ್ಲಿ ದಿ.ಸುರೇಶ್ ಅಂಗಡಿ ಮೂರ್ತಿ ಪ್ರತಿಷ್ಠಾಪನೆ Suresh angadi
ನವದೆಹಲಿ: ಕೊರೊನಾದಿಂದ ಮೃತಪಟ್ಟ ಕೇಂದ್ರ ಸಚಿವ ದಿ.ಸುರೇಶ್ ಅಂಗಡಿ ಮೂರ್ತಿಯನ್ನು ದೆಹಲಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ.
ನವದೆಹಲಿಯ ದ್ವಾರಕಾ ನಗರದ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿರುವ ಅವರ ಸಮಾಧಿ ಸ್ಥಳದಲ್ಲಿ, ಸುರೇಶ್ ಅಂಗಡಿ ಅವರ ಪ್ರತಿಮೆ ಅನಾವರಣ ಮಾಡಲಾಯಿತು. ಅಂಗಡಿ ಕುಟುಂಬಸ್ಥರು ಸಮಾಧಿಗೆ ಪೂಜೆ ಸಲ್ಲಿಸಿದರು.
ಪ್ರತಿಮೆ ಅನಾವರಣ ಕಾರ್ಯಕ್ರಮ ಹಾಗೂ ಪೂಜಾ ಕಾರ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್, ಸಂಸದರಾದ ಶ್ರೀ ಡಿ. ವಿ. ಸದಾನಂದ ಗೌಡ, ಶ್ರೀ ಪ್ರತಾಪ್ ಸಿಂಹ, ಶ್ರೀ ಉಮೇಶ್ ಜಾಧವ್ ಸೇರಿದಂತೆ ಎಲ್ಲಾ ಸಂಸದರಿಗೆ, ಪಕ್ಷದ ಮುಖಂಡರಿಗೆ ಭಾಗಿಯಾಗಿದ್ದರು.









