ಬೆಳಗಾವಿ : ದೆಹಲಿಯಲ್ಲಿ ದಿ. ಸುರೇಶ್ ಅಂಗಡಿ (Suresh Angadi) ಅವರ ಸ್ಮಾರಕ (statue) ನಿರ್ಮಾಣ ಮಾಡುವುದಾಗಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ತಿಳಿಸಿದ್ದಾರೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಇಂದು ಬೆಳಗಾವಿಗೆ ಭೇಟಿ ನೀಡಿದ್ದಾರೆ. ಸಾಂಬ್ರಾ ವಿಮಾನ ನಿಲ್ಡಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ದೆಹಲಿಯಲ್ಲಿ ದಿ. ಸುರೇಶ್ ಅಂಗಡಿ (Suresh Angadi) ಅವರ ಸ್ಮಾರಕ(statue) ನಿರ್ಮಾಣ ಸಂಬಂಧ ದೆಹಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
ಅಗತ್ಯ ಹಣ ಮಂಜೂರು ಮಾಡಿ ಸ್ಮಾರಕ ನಿರ್ಮಾಣಕ್ಕೆ ಆದ್ಯತೆ ನೀಡುತ್ತೇನೆ. ಸುರೇಶ್ ಅಂಗಡಿ ಅವರ ಸ್ಮಾರಕ ನಿರ್ಮಾಣ ನನ್ನ ಕರ್ತವ್ಯ ಎಂದರು.
ಇದನ್ನೂ ಓದಿ : “ಬಿಜೆಪಿ & ಜೆಡಿಎಸ್ ಒಳ ಒಪ್ಪಂದ” : ಸಿದ್ದು ಆರೋಪಕ್ಕೆ ಹೆಚ್ ಡಿಕೆ ಗುದ್ದು
ಸುರೇಶ್ ಅಂಗಡಿ ಅವರು ನನ್ನ ಆತ್ಮೀಯ ಗೆಳೆಯರಾಗಿದ್ದರು. ಸದ್ಯ ನಮ್ಮನ್ನು ಅಗಲಿದ್ದಾರೆ ಎಂದರೆ ನಂಬಲಾಗುತ್ತಿಲ್ಲ.
ನಾಲ್ಕು ಸಲ ಸಂಸದರಾಗಿದ್ದರು, ರೈಲ್ವೆ ಸಚಿವರಾಗಿಯೂ ಜವಾಬ್ದಾರಿ ವಹಿಸಿಕೊಂಡಿದ್ದರು. ಜಾಫರ್ ಶರೀಫ್ ಅವರಂತೆ ಸುರೇಶ್ ಅಂಗಡಿ ಅವರು ಕೆಲಸ ಮಾಡುತ್ತಿದ್ದರು.
ಇದನ್ನೂ ಓದಿ : ಆರ್.ಆರ್ ನಗರಕ್ಕೆ ಕುಸುಮಾಗೆ `ಕೈ’ ಟಿಕೆಟ್ ಪಕ್ಕಾ; ಶಿರಾಗೆ ಅಮ್ಮಾಜಮ್ಮಗೆ ಜೆಡಿಎಸ್ ಟಿಕೆಟ್
ರಾಜ್ಯದಲ್ಲಿ ರೈಲ್ವೆ ಯೋಜನೆಗೆ ಒತ್ತು ನೀಡಿದ್ದರು. ರಾಜ್ಯಕ್ಕೆ ಅವರು ಕೊಟ್ಟ ಕೊಡುಗೆ ಅಪಾರ ಎಂದು ಸಿಎಂ ಅಂಗಡಿಯವರನ್ನು ಸ್ಮರಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶೇಷ ವಿಮಾನದ ಮೂಲಕ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
ನಂತರ ಸುರೇಶ್ ಅಂಗಡಿ ಅವರ ನಿವಾಸಕ್ಕೆ ತೆರಳಿದರು. ಈ ವೇಳೆ ಸಿಎಂಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವ ಜಗದೀಶ್ ಶೆಟ್ಟರ್, ರಮೇಶ್ ಜಾರಕಿಹೊಳಿ ಸಾಥ್ ನೀಡಿದರು.