1 ರಿಂದ 5 ನೇ ತರಗತಿಗಳು ಸದ್ಯಕ್ಕೆ ಆರಂಭಿಸಲ್ಲ : ಸುರೇಶ್ ಕುಮಾರ್
ಕೋಲಾರ : ರಾಜ್ಯದಲ್ಲಿ 1ರಿಂದ 5 ನೇ ತರಗತಿಗಳು ಸದ್ಯ ಆರಂಭವಾಗುವುದಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾ ಮಧ್ಯೆ 1 ರಿಂದ ಐದನೇ ತರಗತಿಗಳು ಆರಂಭಿಸುವ ಬಗ್ಗೆ ಕೋಲಾರದಲ್ಲಿ ಮಾತನಾಡಿದ ಸುರೇಶ್ ಕುಮಾರ್, ರಾಜ್ಯದಲ್ಲಿ 1ರಿಂದ 5 ನೇ ತರಗತಿಗಳು ಸದ್ಯ ಆರಂಭವಿಲ್ಲ.
ಸರ್ಕಾರದ ನಿರ್ಧಾರ 6 ರಿಂದ ಮಾತ್ರ ಆರಂಭ ಮಾಡಬೇಕು. ಅದನ್ನು ಎಲ್ಲಾ ಶಾಲೆಗಳು ಪಾಲಿಸಬೇಕು ಎಂದು ಸ್ಪಷ್ಟಪಡಿಸಿದರು.
ಇನ್ನು ಮಕ್ಕಳ ಹಿತಕ್ಕಾಗಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಯಾರು ಸಹ ಸರ್ಕಾರದ ಆದೇಶ ಉಲ್ಲಂಘನೆ ಮಾಡಬಾರದು.
ಒಂದು ವೇಳೆ ಸರ್ಕಾರದ ಆದೇಶ ಉಲ್ಲಂಘಿಸಿ ಶಾಲೆ ಆರಂಭಿಸಿದರೆ ಕ್ರಮ ತೆಗೆದುಕೊಳ್ಳಲಾಗುವುದು.
ಒಂದು ವೇಳೆ ಸರ್ಕಾರದ ನಿಯಮಗಳನ್ನ ಉಲ್ಲಂಘಿಸಿದರೇ ಶಾಲಾ ಆಡಳಿತ ಮಂಡಳಿ ವಿರುದ್ಧ ಕೈಗೊಳ್ಳುವಂತೆ ಡಿಡಿಪಿಐಗಳಿಗೆ ಸೂಚನೆ ನೀಡಿದ್ದೇವೆ.
ಶುಲ್ಕ ಪಾವತಿ ಬಗ್ಗೆ ಖಾಸಗಿ ಶಾಲೆಗಳು ಹೈ ಕೋರ್ಟಿನಲ್ಲಿ ಚಾಲೆಂಜ್ ಮಾಡಿವೆ. ಹೈ ಕೋರ್ಟ್ ತೀರ್ಪು ಬಂದ ನಂತರ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.










