ಸುರೇಶ್ ಕುಮಾರ್ ಹಠಮಾರಿತನ ಬಿಟ್ಟು, ಪರೀಕ್ಷೆ ರದ್ದು ಮಾಡಿ
ಬೆಂಗಳೂರು : ಹಠಮಾರಿತನ ಬಿಟ್ಟುಬಿಡಿ ಸುರೇಶ್ ಕುಮಾರ್. ಇದು ಅತ್ಯಂತ ಗಂಭೀರ ಪರಿಸ್ಥಿತಿ. ಪರೀಕ್ಷೆ ಮಾಡಬೇಡಿ, ಪರೀಕ್ಷೆ ರದ್ದು ಮಾಡಿ ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.
ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು ಸುದ್ದಿಗೋಷ್ಠಿ ನಡೆಸಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸೋದಿ ತಿಳಿಸಿ ದಿನಾಂಕ ಘೋಷಣೆ ಮಾಡಿದರು. ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ವಾಟಾಳ್ ನಾಗರಾಜ್, ಶಿಕ್ಷಣ ಸಚಿವರು ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸೋದಾಗಿ ತಿಳಿಸಿದ್ದಾರೆ.
ಇದನ್ನು ನಾನು ವಿರೋಧ ಮಾಡುತ್ತೇನೆ. ಕೊರೊನಾ ಇನ್ನೂ ಸಂಪೂರ್ಣವಾಗಿ ಹೋಗಿಲ್ಲ, ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸೋದು ಸರಿಯಲ್ಲ. ಪಿಯುಸಿ ಯಾಕೆ ರದ್ದು ಮಾಡಿದರು. ಮಕ್ಕಳ ಜೀವ ಮುಖ್ಯ ಅಂತ ತಾನೇ. ಪಿಯು ಪಾಸ್ ಮಾಡಿ, ಎಸ್ ಎಸ್ ಎಲ್ ಸಿ ಪಾಸ್ ಮಾಡಿದ್ರೆ ತಪ್ಪೇನು ಎಂದು ಪ್ರಶ್ನಿಸಿ ಮಾಡಿದ್ದಾರೆ.
ಇನ್ನು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯದಿದ್ರೆ ಏನು ಆಗೋದಿಲ್ಲ, ಎಲ್ಲರನ್ನು ಪಾಸ್ ಮಾಡ್ತಿವಿ ಎಂದು ಹೇಳಿದ್ದಾರೆ. ಆಗಾದ್ರೆ ಪರೀಕ್ಷೆ ಮಾಡೋದು ಯಾಕೆ..? ಮಕ್ಕಳ ಪ್ರಾಣದ ಜೊತೆ ಆಟ ಆಡಬೇಡಿ. ಹಠಮಾರಿತನ ಬಿಟ್ಟುಬಿಡಿ ಸುರೇಶ್ ಕುಮಾರ್. ಇದು ಅತ್ಯಂತ ಗಂಭೀರ ಪರಿಸ್ಥಿತಿ. ಪರೀಕ್ಷೆ ಮಾಡಬೇಡಿ, ಪರೀಕ್ಷೆ ರದ್ದು ಮಾಡಿ ಎಂದು ಆಗ್ರಹಿಸಿದ್ದಾರೆ.









