ಧೋನಿ ನಿವೃತ್ತಿಯ ನಂತರ ಸುರೇಶ್ ರೈನಾ ಕೂಡ ಕ್ರಿಕೆಟ್ ಬದುಕಿಗೆ ನಿವೃತ್ತಿ..!
ಆಪ್ತಮಿತ್ರ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ ಘಳಿಗೆಯಲ್ಲೇ ಸುರೇಶ್ ರೈನಾ ಕೂಡ ತನ್ನ ವರ್ಣ ರಂಜಿತ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ. ಹಾಗೇ ನೋಡಿದ್ರೆ ಸುರೇಶ್ ರೈನಾ ಕೂಡ ಕಮ್ ಬ್ಯಾಕ್ ಮಾಡುವ ಮನಸ್ಸು ಮಾಡಿದ್ರೂ ಭಾರತ ತಂಡದಲ್ಲಿ ಸ್ಥಾನ ಪಡೆಯುವುದು ಅಷ್ಟೊಂದು ಸುಲಭವಿರಲಿಲ್ಲ.
ಕಳೆದ ಎರಡು ಮೂರು ವರ್ಷಗಳಿಂದ ಟೀಮ್ ಇಂಡಿಯಾದಿಂದ ದೂರವೇ ಉಳಿದಿದ್ದ ಸುರೇಶ್ ರೈನಾ ಧೋನಿ ನಿವೃತ್ತಿಯಾಗುತ್ತಿದ್ದಂತೆ ತಾನು ಕೂಡ ನಿವೃತ್ತಿಯನ್ನು ಘೋಷಿಸಿದ್ದಾರೆ. ಉತ್ತರ ಪ್ರದೇಶದ ಹುಡುಗ ಸುರೇಶ್ ರೈನಾ ಕೂಡ ಅದ್ಭುತವಾದ ಸಾಧನೆ ಮಾಡಿದ್ದಾರೆ. ಎಡಗೈ ಬ್ಯಾಟ್ಸ್ ಮೆನ್ ಆಗಿರುವ ಸುರೇಶ್ ಹಲವು ಪಂದ್ಯಗಳಲ್ಲಿ ಗೆಲುವಿನ ರೂವಾರಿಯಾಗಿದ್ದಾರೆ.

ಧೋನಿಯ ಆಪ್ತ ಬಳಗದಲ್ಲಿ ಕಾಣಿಸಿಕೊಂಡಿರುವ ರೈನಾ ಕೂಡ ಸಿಎಸ್‍ಕೆ ತಂಡದ ಪರ ಆಡುತ್ತಿದ್ದಾರೆ. ಸುರೇಶ್ ರೈನಾ ಮತ್ತು ಧೋನಿಯ ಸ್ನೇಹಕ್ಕೆ ಬೆಲೆ ಕಟ್ಟಲು ಕೂಡ ಸಾಧ್ಯವಿಲ್ಲ. ಅಷ್ಟೊಂದು ಅನೋನ್ಯವಾಗಿದ್ದಾರೆ. ಧೋನಿಯ ವಿದಾಯ ನಿರ್ಧಾರವನ್ನು ಅರಗಿಸಿಕೊಳ್ಳಲು ಸಾಧ್ಯವಾಗದೇ ರೈನಾ ಕೂಡ
ನಿವೃತ್ತಿ ಘೋಷಣೆ ಮಾಡಿದ್ದಾರೆ.
ಇದು ಏನೂ ಅಲ್ಲ. ನಿಮ್ಮ ಜೊತೆ ಆಟವಾಡುವುದು ತುಂಬಾನೇ ಇಷ್ಟ. ನಾನು ನಿಮ್ಮ ಹಾದಿಯನ್ನೇ ಹಿಡಿಯುತ್ತಿದ್ದೇನೆ. ಇದರ ಬಗ್ಗೆ ಹೆಮ್ಮೆ ಇದೆ. ಥ್ಯಾಂಕ್ಯೂ ಇಂಡಿಯಾ… ಜೈ ಹಿಂದ್ ಅಂತ ಸುರೇಶ್ ರೈನಾ ತನ್ನ ಇನ್ ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.








