ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಬಂಧನ…!
ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಸುರೇಶ್ ರೈನಾ ಅವರು ಕೋವಿಡ್ 19 ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದ ಆರೋಪದಡಿಯಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಮುಂಬೈನ ಡ್ರಾಗೊನ್ ಫ್ಲೈ ಕ್ಲಬ್ ಮೇಲೆ ದಾಳಿ ನಡೆಸಿದ್ದ ಮುಂಬೈ ಪೊಲೀಸರು ಸುರೇಶ್ ರೈನಾ ಸೇರಿದಂತೆ ಒಟ್ಟು 34 ಮಂದಿ ಸೆಲೆಬ್ರೆಟಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.
ಡ್ರಾಗೊನ್ ಫ್ಲೈ ಕ್ಲಬ್ ಕೋವಿಡ್ ಮಾರ್ಗಸೂಚಿಗಳನ್ನು ಪರಿಪಾಲಿಸಿಲ್ಲ. ಹೀಗಾಗಿ ಕ್ಲಬ್ ನಲ್ಲಿದ್ದ ಸೆಲೆಬ್ರಿಟಿಗಳು ಲೇಟ್ ನೈಟ್ ಪಾರ್ಟಿ ನಡೆಸುತ್ತಿದ್ದರು.
ಸುರೇಶ್ ರೈನಾ ಅವರು ಕಳೆದ ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದರು. ಆ ನಂತರ ಐಪಿಎಲ್ ನಲ್ಲಿ ವಿವಾದ ಮಾಡಿಕೊಂಡು ತಂಡದಿಂದ ಹೊರ ಬಂದಿದ್ದರು.
ಈ ನಡುವೆ, ಜನವರಿ 10ರಿಂದ ನಡೆಯಲಿರುವ ಸಯ್ಯದ್ ಮುಷ್ತಾಕ್ ಆಲಿ ಕ್ರಿಕೆಟ್ ಟೂರ್ನಿಯಲ್ಲಿ ಉತ್ತರ ಪ್ರದೇಶದ ತಂಡದ ಪರ ಆಡಲು ಸಜ್ಜಾಗಿದ್ದರು.
ಈ ನಡುವೆ, ಕೋವಿಡ್ ಮಾರ್ಗ ಸೂಚಿಯನ್ನು ಉಲ್ಲಂಘಿಸಿದ್ದಾರೆ.








