ADVERTISEMENT
Sunday, March 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಶೂನ್ಯದಿಂದ ಆರಂಭ.. ಜೊತೆ ಜೊತೆಯಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಗುಡ್ ಬೈ ಹೇಳಿದ ಧೋನಿ -ರೈನಾ

admin by admin
August 16, 2020
in Newsbeat, Sports, ಕ್ರೀಡೆ
mahendra singh dhoni team india saakshatv
Share on FacebookShare on TwitterShare on WhatsappShare on Telegram

ಶೂನ್ಯದಿಂದ ಆರಂಭ.. ಜೊತೆ ಜೊತೆಯಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಗುಡ್ ಬೈ ಹೇಳಿದ ಧೋನಿ -ರೈನಾ

ಮಹೇಂದ್ರ ಸಿಂಗ್ ಧೋನಿ ಮತ್ತು ಸುರೇಶ್ ರೈನಾ.. ಟೀಮ್ ಇಂಡಿಯಾದ ಒಡನಾಡಿಗಳು.. ಆಪ್ತಮಿತ್ರರು.. 2004ರಲ್ಲಿ ಬಾಂಗ್ಲಾ ದೇಶ ವಿರುದ್ಧ ಧೋನಿ ಟೀಮ್ ಇಂಡಿಯಾಗೆ ಎಂಟ್ರಿಯಾದ್ರೆ, ಸುರೇಶ್ ರೈನಾ 2005 ಶ್ರೀಲಂಕಾ ವಿರುದ್ಧ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ್ದರು. ಆದ್ರೆ ಇಬ್ಬರು ಕೂಡ ತಮ್ಮ ಚೊಚ್ಚಲ ಏಕದಿನ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ರು.
ಎಲ್ಲವೂ ಆರಂಭವಾಗುವುದು ಸೊನ್ನೆಯಿಂದಲೇ. ಹಾಗೇ ಧೋನಿ ಮತ್ತು ಸುರೇಶ್ ರೈನಾ ಸೊನ್ನೆಯಿಂದಲೇ ತಮ್ಮ ಏಕದಿನ ಕ್ರಿಕೆಟ್ ರನ್ ಖಾತೆಯನ್ನು ಶುರು ಮಾಡಿದ್ದರು. ಆದ್ರೆ ನೋಡ ನೋಡುತ್ತಲೇ ಇಬ್ಬರು ಆಟಗಾರರು ಕೂಡ ವಿಶ್ವ ಕ್ರಿಕೆಟ್ ನಲ್ಲಿ ಅಮೋಘ ಸಾಧನೆಯನ್ನು ಮಾಡಿದ್ದಾರೆ. ಧೋನಿ ನಾಯಕನಾಗಿ ಯಶಸ್ಸಿನ ಮೇಲೆ ಯಶಸ್ಸು ಸಾಧಿಸಿದ್ದರು. ಅದೇ ರೀತಿ ಸುರೇಶ್ ರೈನಾ ಕೂಡ. ಆಲ್‍ರೌಂಡರ್ ಆಗಿ ಟೀಮ್ ಇಂಡಿಯಾದಲ್ಲಿ ಮಿಂಚು ಹರಿಸಿದ್ದರು. ಅದ್ಭುತ ಫೀಲ್ಡಿಂಗ್ ಮೂಲಕವೂ ಗಮನ ಸೆಳೆದಿರುವಂತಹ ಸುರೇಶ್ ರೈನಾ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲೂ ಮಿಂಚು ಹರಿಸಿದ್ದರು. ಆದ್ರೆ ಸುರೇಶ್ ರೈನಾಗೆ ಹೆಚ್ಚು ಅವಕಾಶಗಳು ಸಿಗಲಿಲ್ಲ.
ಇನ್ನು ಧೋನಿ ಮತ್ತು ಸುರೇಶ್ ರೈನಾ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರನೂ ಆಡುತ್ತಿದ್ದಾರೆ. ಇವರಿಬ್ಬರ ಸ್ನೇಹಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಟೆಸ್ಟ್ ಕ್ರಿಕೆಟ್ ಗೆ ಧೋನಿ ವಿದಾಯ ಹೇಳಿದಾಗ ಸುರೇಶ್ ರೈನಾ ಕಣ್ಣೀರು ಹಾಕಿದ್ದರು. ಇದೀಗ ಧೋನಿ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದಾಗ ತಾನು ಕೂಡ ಧೋನಿಯ ಹಾದಿಯನ್ನೇ ಹಿಡಿದಿದ್ದಾರೆ.
ಹೀಗೆ ಶೂನ್ಯದಿಂದ ಶುರುವಾದ ಕ್ರಿಕೆಟಿಗರು ತನ್ನ ಏಕದಿನ ಕ್ರಿಕೆಟ್ ಬದುಕಿನಲ್ಲಿ ಯಶ ಸಾಧಿಸಿದ್ದಾರೆ. ಇಂತಹ ಟಾಪ್ -5 ಲಿಸ್ಟ್ ನಲ್ಲಿ ಧೋನಿ ಅಗ್ರ ಸ್ಥಾನದಲ್ಲಿದ್ದಾರೆ. ಮಹೇಂದ್ರ ಸಿಂಗ್ ಧೋನಿ 350 ಏಕದಿನ ಪಂದ್ಯಗಳನ್ನು ಆಡಿದ್ದು 10,772 ರನ್ ಗಳಿಸಿದ್ದಾರೆ. ಇದ್ರಲ್ಲಿ ಹತ್ತು ಶತಕ ಹಾಗೂ 73 ಅರ್ಧಶತಕಗಳಿವೆ. ಹಾಗೇ ಪಾಕಿಸ್ತಾನದ ಶೋಯೆಬ್ ಮಲ್ಲಿಕ್ 287 ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ 7534 ರನ್ ಹಾಗೂ 9 ಶತಕಗಳನ್ನು ದಾಖಲಿಸಿದ್ದಾರೆ. ಮೂರನೇ ಸ್ಥಾನದಲ್ಲಿ ಸುರೇಶ್ ರೈನಾ ಇದ್ದಾರೆ. ಸುರೇಶ್ ರೈನಾ 225 ಏಕದಿನ ಪಂದ್ಯಗಳಲ್ಲಿ 5615 ರನ್ ಹಾಗೂ ಐದು ಶತಕ ಹಾಗೂ 36 ಅರ್ಧಶತಕಗಳನ್ನು ದಾಖಲಿಸಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಇಂಗ್ಲೆಂಡ್‍ನ ಜೇಸನ್ ರಾಯ್. ಇವರು 87 ಏಕದಿನ ಪಂದ್ಯಗಳಲ್ಲಿ 3434 ರನ್ ಹಾಗೂ 9 ಶತಕ ಗಳಿಸಿದ್ದಾರೆ. ಆಸ್ಟ್ರೇಲಿಯಾದ ಕ್ಯಾಮರೂನ್ ವೈಟ್ 91 ಏಕದಿನ ಪಂದ್ಯಗಳಲ್ಲಿ 2071 ರನ್ ಹಾಗೂ ಎರಡು ಶತಕ ದಾಖಲಿಸಿದ್ದಾರೆ.

Related posts

ಪಶ್ಚಿಮ ಬಂಗಾಳ ಚುನಾವಣಾ ರಣರಂಗದಲ್ಲಿ ದೀದಿ ಆರ್ಭಟ : ಬಿಜೆಪಿ ವಿರುದ್ಧ ಸಿಡಿದೆದ್ದ ಮಮತಾ ಬ್ಯಾನರ್ಜಿಯಿಂದ  ಟಿಎಂಸಿ ಪ್ರಣಾಳಿಕೆ ಬಿಡುಗಡೆ

ಪಶ್ಚಿಮ ಬಂಗಾಳ ಚುನಾವಣಾ ರಣರಂಗದಲ್ಲಿ ದೀದಿ ಆರ್ಭಟ : ಬಿಜೆಪಿ ವಿರುದ್ಧ ಸಿಡಿದೆದ್ದ ಮಮತಾ ಬ್ಯಾನರ್ಜಿಯಿಂದ ಟಿಎಂಸಿ ಪ್ರಣಾಳಿಕೆ ಬಿಡುಗಡೆ

March 22, 2026
ಡಿಕೆಶಿ ಪರ ನಿಂತ ಸ್ವಾಮೀಜಿಗಳಿಗೆ ಬಜೆಟ್ ನಲ್ಲಿ ಬಿಡಿಗಾಸೂ ನೀಡಿಲ್ಲ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಣವಾನಂದ ಶ್ರೀ ಆಕ್ರೋಶ

ಡಿಕೆಶಿ ಪರ ನಿಂತ ಸ್ವಾಮೀಜಿಗಳಿಗೆ ಬಜೆಟ್ ನಲ್ಲಿ ಬಿಡಿಗಾಸೂ ನೀಡಿಲ್ಲ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಣವಾನಂದ ಶ್ರೀ ಆಕ್ರೋಶ

March 22, 2026
Tags: #saakshatv.comCricketcskICCIndian cricketIPLM.S DhoniMahendra Singh DhonirainaSuresh Rainateam india
ShareTweetSendShare
Join us on:

Related Posts

ಪಶ್ಚಿಮ ಬಂಗಾಳ ಚುನಾವಣಾ ರಣರಂಗದಲ್ಲಿ ದೀದಿ ಆರ್ಭಟ : ಬಿಜೆಪಿ ವಿರುದ್ಧ ಸಿಡಿದೆದ್ದ ಮಮತಾ ಬ್ಯಾನರ್ಜಿಯಿಂದ  ಟಿಎಂಸಿ ಪ್ರಣಾಳಿಕೆ ಬಿಡುಗಡೆ

ಪಶ್ಚಿಮ ಬಂಗಾಳ ಚುನಾವಣಾ ರಣರಂಗದಲ್ಲಿ ದೀದಿ ಆರ್ಭಟ : ಬಿಜೆಪಿ ವಿರುದ್ಧ ಸಿಡಿದೆದ್ದ ಮಮತಾ ಬ್ಯಾನರ್ಜಿಯಿಂದ ಟಿಎಂಸಿ ಪ್ರಣಾಳಿಕೆ ಬಿಡುಗಡೆ

by Shwetha
March 22, 2026
0

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ರಣಕಹಳೆ ಜೋರಾಗಿ ಮೊಳಗಿದೆ. ಅಧಿಕಾರದ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ತುದಿಗಾಲಿನಲ್ಲಿ ನಿಂತಿರುವ ಬೆನ್ನಲ್ಲೇ, ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಹಾಗೂ ಮುಖ್ಯಮಂತ್ರಿ...

ಡಿಕೆಶಿ ಪರ ನಿಂತ ಸ್ವಾಮೀಜಿಗಳಿಗೆ ಬಜೆಟ್ ನಲ್ಲಿ ಬಿಡಿಗಾಸೂ ನೀಡಿಲ್ಲ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಣವಾನಂದ ಶ್ರೀ ಆಕ್ರೋಶ

ಡಿಕೆಶಿ ಪರ ನಿಂತ ಸ್ವಾಮೀಜಿಗಳಿಗೆ ಬಜೆಟ್ ನಲ್ಲಿ ಬಿಡಿಗಾಸೂ ನೀಡಿಲ್ಲ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಣವಾನಂದ ಶ್ರೀ ಆಕ್ರೋಶ

by Shwetha
March 22, 2026
0

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ರಾಜ್ಯದ ಮುಖ್ಯಮಂತ್ರಿ ಮಾಡಬೇಕು ಎಂದು ಧ್ವನಿ ಎತ್ತಿದ್ದ ಮಠಾಧೀಶರ ವಿರುದ್ಧ ಸಿಎಂ ಸಿದ್ದರಾಮಯ್ಯ ನೇರ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಇತ್ತೀಚೆಗೆ...

ಗ್ಯಾಸ್ ಪೆಟ್ರೋಲ್ ಬೆಲೆ ಏರಿಕೆ ಬೆನ್ನಲ್ಲೇ ಮದ್ಯ ಪ್ರಿಯರಿಗೆ ವಾರ್ ಎಫೆಕ್ಟ್: ಶೀಘ್ರದಲ್ಲೇ ಬಿಯರ್ ದರದಲ್ಲಿ ಭಾರಿ ಹೆಚ್ಚಳ ಗ್ಯಾರಂಟಿ!

ಗ್ಯಾಸ್ ಪೆಟ್ರೋಲ್ ಬೆಲೆ ಏರಿಕೆ ಬೆನ್ನಲ್ಲೇ ಮದ್ಯ ಪ್ರಿಯರಿಗೆ ವಾರ್ ಎಫೆಕ್ಟ್: ಶೀಘ್ರದಲ್ಲೇ ಬಿಯರ್ ದರದಲ್ಲಿ ಭಾರಿ ಹೆಚ್ಚಳ ಗ್ಯಾರಂಟಿ!

by Shwetha
March 22, 2026
0

ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧದ ಕಾರ್ಮೋಡ ಈಗ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಗ್ಯಾಸ್, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನತೆಗೆ, ವಿಶೇಷವಾಗಿ...

ಜಿಯೋ ಏರ್‌ಟೆಲ್ ದರ್ಬಾರ್‌ಗೆ ಬ್ರೇಕ್ ಟೆಲಿಕಾಂ ರಂಗದಲ್ಲಿ ಸಂಚಲನ ಸೃಷ್ಟಿಸಲು ಬಿಎಸ್‌ಎನ್‌ಎಲ್ ಮತ್ತು ವೊಡಾಫೋನ್ ಐಡಿಯಾ ಮೆಗಾ ಪಾರ್ಟ್‌ನರ್‌ಶಿಪ್

ಜಿಯೋ ಏರ್‌ಟೆಲ್ ದರ್ಬಾರ್‌ಗೆ ಬ್ರೇಕ್ ಟೆಲಿಕಾಂ ರಂಗದಲ್ಲಿ ಸಂಚಲನ ಸೃಷ್ಟಿಸಲು ಬಿಎಸ್‌ಎನ್‌ಎಲ್ ಮತ್ತು ವೊಡಾಫೋನ್ ಐಡಿಯಾ ಮೆಗಾ ಪಾರ್ಟ್‌ನರ್‌ಶಿಪ್

by Shwetha
March 22, 2026
0

ದೇಶದ ಟೆಲಿಕಾಂ ವಲಯದಲ್ಲಿ ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ಸಂಸ್ಥೆಗಳ ಏಕಸ್ವಾಮ್ಯಕ್ಕೆ ಬಲವಾದ ಪೆಟ್ಟು ನೀಡಲು ಹಾಗೂ ಕಳೆದುಕೊಂಡಿರುವ ತನ್ನ ಗ್ರಾಹಕರನ್ನು ಮರಳಿ ಸೆಳೆಯಲು ಸರ್ಕಾರಿ...

ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದ ಬಂಪರ್ ಕೊಡುಗೆ: ಬರೋಬ್ಬರಿ ಮೂರು ತಿಂಗಳ ರೇಷನ್ ಏಪ್ರಿಲ್ ತಿಂಗಳಲ್ಲೇ ಒಟ್ಟಿಗೆ ವಿತರಣೆ

ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದ ಬಂಪರ್ ಕೊಡುಗೆ: ಬರೋಬ್ಬರಿ ಮೂರು ತಿಂಗಳ ರೇಷನ್ ಏಪ್ರಿಲ್ ತಿಂಗಳಲ್ಲೇ ಒಟ್ಟಿಗೆ ವಿತರಣೆ

by Shwetha
March 22, 2026
0

ದೇಶದ ಕೋಟ್ಯಂತರ ಪಡಿತರ ಚೀಟಿ ಹೊಂದಿರುವ ಬಡ ಮತ್ತು ಮಧ್ಯಮ ವರ್ಗದ ಜನತೆಗೆ ಕೇಂದ್ರ ಸರ್ಕಾರವು ಅತಿದೊಡ್ಡ ಸಿಹಿಸುದ್ದಿಯೊಂದನ್ನು ನೀಡಿದೆ. ಮುಂಬರುವ ಏಪ್ರಿಲ್ ತಿಂಗಳಿನಲ್ಲಿಯೇ ಮುಂದಿನ ಮೂರು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram