Raina | ಧೋನಿ ನಂಬಿಕೆ ಮಣ್ಣುಪಾಲು ಮಾಡಿದ ರೈನಾ..! suresh-raina-lost-loyalty-dhoni saaksha tv
ಮಿಸ್ಟರ್ ಐಪಿಎಲ್ ಎಂದೇ ಖ್ಯಾತರಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಅವರನ್ನು ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ಯಾವುದೇ ಫ್ರಾಂಚೈಸಿ ಖರೀದಿಸದೇ ಇರುವುದು ಸದ್ಯ ಚರ್ಚೆಗೆ ಗ್ರಾಸವಾಗಿದೆ.
ಸಿಎಸ್ಕೆ ಮಾಲೀಕ ಶ್ರೀನಿವಾಸನ್ .. ರೈನಾ ಅವರನ್ನು ಪಕ್ಕಕ್ಕೆ ಹಾಕಲು ಕಾರಣಗಳನ್ನು ವಿವರಿಸಿದ್ದಾರೆ. ಅಲ್ಲದೇ ಸಾಕಷ್ಟು ಮಾಜಿ ಕ್ರಿಕೆಟರ್ ಗಳು ರೈನಾ ಮಾರಾಟವಾಗದೇ ಉಳಿಯಲು ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ.
ಇದೀಗ ನ್ಯೂಜಿಲೆಂಡ್ನ ಮಾಜಿ ಕ್ರಿಕೆಟಿಗ ಸೈಮನ್ ಡೋಲ್ ಅವರು ರೈನಾ ಅನ್ ಸೋಲ್ಡ್ ಆಗಲು ಕಾರಣ ವೇನು ಎಂಬುದನ್ನ ಬಹಿರಂಗಪಡಿಸಿದ್ದಾರೆ.
ಕಳೆದ ಎರಡು ಐಪಿಎಲ್ ಸೀಸನ್ಗಳಲ್ಲಿ ವೈಯಕ್ತಿಕ ಕಾರಣಗಳಿಂದ ಮತ್ತು ಮೊಣಕಾಲು ಶಸ್ತ್ರಚಿಕಿತ್ಸೆಯಿಂದಾಗಿ ಕೆಲವು ಪಂದ್ಯಗಳಿಂದ ಹೊರಗುಳಿದಿದ್ದ ರೈನಾ, ಫಾರ್ಮ್ ಕೊರತೆಯಿಂದಾಗಿ ಧೋನಿ ಜೊತೆಗೆ ಸಿಎಸ್ಕೆ ಮ್ಯಾನೇಜ್ಮೆಂಟ್ ನ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.
ಅದಕ್ಕಾಗಿಯೇ ಅವರನ್ನ ಮತ್ತೆ ಸಿಎಸ್ ಕೆ ತಂಡಕ್ಕೆ ಸೇರಿಸಿಕೊಂಡಿಲ್ಲ. ಈ ವಿಷಯವನ್ನ ಸಿಎಸ್ ಕೆ ತಂಡದ ಮಾಲೀಕರು ಸ್ವತಃ ಬಹಿರಂಗಪಡಿಸಿದ್ದಾರೆ..
ಪಾರ್ಮ್ ನಲ್ಲಿ ಇದಲ್ಲ ಕಾರಣಕ್ಕಾಗಿ ಯಾವುದೇ ಒಂದು ತಂಡ ಒಬ್ಬ ಆಟಗಾರರನ್ನು ಕಡೆಗಣಿಸಿದ್ರೆ ಸಾಮಾನ್ಯವಾಗಿಯೇ ಯಾವುದೆ ತಂಡ ಅವರನ್ನ ಖರೀದಿಸುವುದಿಲ್ಲ.
ಇದೇ ಕಾರಣಕ್ಕಾಗಿಯೇ ಮೆಗಾ ಹರಾಜಿನಲ್ಲಿ ಸುರೇಶ್ ರೈನಾ ಅವರನ್ನು ಸಿಎಸ್ ಕೆ ಅಥವಾ ಯಾವುದೇ ತಂಡ ಖರೀದಿ ಮಾಡಲ್ಲ ಎಂದು ಸೈಮನ್ ಡೋಲ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಸುರೇಶ್ ರೈನಾ 2016, 17 ಹೊರತುಪಡಿಸಿ, ಐಪಿಎಲ್ ಶುರುವಾದಾಗಿನಿಂದಲೂ ಸಿಎಸ್ ಕೆ ತಂಡವನ್ನು ಪ್ರತಿನಿಧಿಸುತ್ತಿದ್ದರು. 205 ಮ್ಯಾಚ್ ಗಳಲ್ಲಿ ರೈನಾ 30 ಸರಾಸರಿಯಲ್ಲಿ 5528 ರನ್ ಗಳಿಸಿದ್ದಾರೆ.









