Suresh Raina | ಧೋನಿಯನ್ನ ನಂಬಿ ಕೆಟ್ಟ ರೈನಾ.. suresh-raina-M S Dhoni IPL CSK
ಸುರೇಶ್ ರೈನಾ.. ಒಂದು ಕಾಲದಲ್ಲಿ ಟೀಂ ಇಂಡಿಯಾದ ಮ್ಯಾಚ್ ವಿನ್ನರ್. ವಿಸ್ಫೋಟಕ ಬ್ಯಾಟಿಂಗ್ ಜೊತೆಗೆ ಸಂಕಷ್ಟದ ಸ್ಥಿತಿಯಲ್ಲಿ ವಿಕೆಟ್ ಪಡೆಯುತ್ತಾ ಫೀಲ್ಡಿಂಗ್ ನಲ್ಲಿ ಸಿಂಹದಂತೆ ಘರ್ಜಿಸಿದ್ದ ಆಟಗಾರ. ದೊಡ್ಡ ದೊಡ್ಡ ಇನ್ನಿಂಗ್ಸ್ ಕೊಟ್ಟೋದಕ್ಕೂ ಸೈ… ದೊಡ್ಡ ದೊಡ್ಡ ಹೊಡೆತಗಳ ಮೂಲಕ ಮ್ಯಾಚ್ ಗೆಲ್ಲಿಸಿಕೊಡೋಕೂ ಜೈ ಎಂಬಂತೆ ರೈನಾ ಬ್ಯಾಟ್ ಬೀಸುತ್ತಿದ್ದರು. ಟಿ 20 ಕ್ರಿಕೆಟ್ ನಲ್ಲಿ ಯುವರಾಜ್ ಸಿಂಗ್ ಬಳಿಕ ಭಾರತದ ಪರ ಆ ರೇಂಜಿಗೆ ಸದ್ದು ಮಾಡಿದ್ದು ರೈನಾ ಮಾತ್ರ. ಜೊತೆಗೆ ಏಕದಿನ ಕ್ರಿಕೆಟ್ ನಲ್ಲಿ ಧೋನಿ ಬಳಿಕ ಮ್ಯಾಚ್ ಎಂದು ಗುರುತಿಸಿಕೊಂಡಿದ್ದರು.
ಇದೇ ಕಾರಣಕ್ಕಾಗಿ ಅವರು ಧೋನಿಯ ಉತ್ತರಾಧಿಕಾರಿ ಅಂತಾನೇ ಕರೆಸಿಕೊಳ್ಳುತ್ತಿದ್ದರು. ಧೋನಿ ಬಳಿಕ ರೈನಾ ಟೀಂ ಇಂಡಿಯಾದ ನಾಯಕರಾಗುತ್ತಾರೆ ಅಂತಾ ಹೇಳಲಾಗುತ್ತಿತ್ತು. ಜೊತೆಗೆ ಹಿರಿಯ ಆಟಗಾರರ ಅನುಪ್ಥಿತಿಯಲ್ಲಿ ರೈನಾ ಟೀಂ ಇಂಡಿಯಾವನ್ನ ಮುನ್ನಡೆಸಿದ್ದಾರೆ ಕೂಡ.
ಇತ್ತ ಟೀಂ ಇಂಡಿಯಾ ಅತ್ತ ಚೆನ್ನೈ ಸೂಪರ್ ಕಿಂಗ್ಸ್ ನಲ್ಲಿ ಧೋನಿ ನೆರಳಿನಂತೆ ಇದ್ದ ರೈನಾ, ಕಾಲ ಕಳೆದಯುತ್ತಿದ್ದಂತೆ ಟೀಂ ಇಂಡಿಯಾದಲ್ಲಿ ಸ್ಥಾನ ಮಾಯವಾಗಿತ್ತು. ಇದೀಗ ಚೆನ್ನೈ ತಂಡದಲ್ಲೂ ಮಾಯವಾಗಿದ್ದಾರೆ. ಇದಕ್ಕೆ ಅವರ ಫಾರ್ಮ್ ಕಾರಣ ಎನ್ನಬಹುದು, ಆದ್ರೆ ರೈನಾ ಸದಾ ಧೋನಿಯ ನೆರಳಿನಂತೆ ಇದ್ದದ್ದೇ ಇದಕ್ಕೆ ಕಾರಣ ಅನ್ನೋದು ಕ್ರಿಕೆಟ್ ಪಂಡಿತರ ವಾದ..
ಹೌದು..! ಸುರೇಶ್ ರೈನಾ ಅದ್ಭುತ ಪ್ರತಿಭೆಯೊಂದಿದ್ದ ಆಟಗಾರ. ಒಂದೇ ಕೈಯಲ್ಲಿ ಪಂದ್ಯ ಗೆಲ್ಲಿಸಿಕೊಡೋದು ರೈನಾಗೆ ಸಲೀಸಲಾದ ಸಂಗತಿಯಾಗಿತ್ತು. ಜೊತೆಗೆ ನಾಯಕತ್ವದ ಗುಣಗಳೂ ಅವರಲ್ಲಿದ್ದವು. ಆದ್ರೆ ಯಾವಾಗ ರೈನಾ, ಧೋನಿಯನ್ನ ನಂಬಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಅಂಟಿಕೊಂಡರೋ ಅಲ್ಲಿಂದಲೇ ಅವರ ವೃತ್ತಿ ಜೀವನವೂ ಧೋನಿ ನಿರ್ಧಾರದ ಮೇಲೆ ನಿರ್ಧಾರವಾಯ್ತ.
ಒಂದು ಬೃಹತ್ ಆಕಾರ ಮರದ ಕೆಳಗೆ ಹೇಗೆ ಮತ್ತೊಂದು ಮರ ಬೆಳೆಯಲು ಸಾಧ್ಯವಿಲ್ಲವೋ ಹಾಗೇ ಧೋನಿಯ ಚಾರ್ಮ್ ಮುಂದೆ ರೈನಾ ಶೈನ್ ಆಗಲೇ ಇಲ್ಲ. ವಾಸ್ತವವಾಗಿ ನೋಡಿದ್ರೆ, ರೈನಾ ಚೆನ್ನೈ ತಂಡಕ್ಕೆ ಸಾಕಷ್ಟು ಯಶಸ್ಸನ್ನ ತಂದುಕೊಟ್ಟಿದ್ದಾರೆ. ಚೆನ್ನೈ ತಂಡದ ಯಶಸ್ಸಿನಲ್ಲಿ ರೈನಾ ಪಾತ್ರ ಮಹತ್ವದ್ದಾಗಿದೆ. ಆದ್ರೆ ಈಗ ತಂಡದಿಂದ ದೂರ ಇದ್ದಾರೆ.
ಒಂದೇ ವೇಳೆ ಸುರೇಶ್ ರೈನಾ ಚೆನ್ನೈ ತಂಡವನ್ನು ಬಿಟ್ಟು ಬೇರೆ ತಂಡದಲ್ಲಿ ಇದ್ದಿದ್ದರೇ ಅವರು ನಾಯಕರಾಗಿ ಹಾಗೇ ಒಬ್ಬ ಆಟಗಾರನಾಗಿ ಇನ್ನಷ್ಟು ಯಶಸ್ಸು ಕಾಣುತ್ತಿದ್ದರು. ಆಗ ಸಾಮಾನ್ಯವಾಗಿಯೇ ಯಾರ ದಯೆ ಇಲ್ಲದೇ ಸ್ವಂತ ಸಾಮರ್ಥ್ಯದ ಮೇಲೆ ಟೀಂ ಇಂಡಿಯಾಗೆ ಎಂಟ್ರಿ ಕೊಡುತ್ತಿದ್ದರು. ಆದ್ರೆ ಧೋನಿ ಹಿಂದೆ ನಿಂತ ಕಾರಣದಿಂದಾಗಿ ಅವರು ಕಣ್ಮರೆ ಆದ್ರು ಅನ್ನೋದು ಕೆಲವರ ವಾದವಾಗಿದೆ.









