IPL 2022 | ಸುರೇಶ್ ರೈನಾ ಅಭಿಮಾನಿಗಳಿಗೆ ಸಿಹಿ ಸುದ್ದಿ..
ಮಿಸ್ಟರ್ ಐಪಿಎಲ್ ಸುರೇಶ್ ರೈನಾ ಅಭಿಮಾನಿಗಳಿಗೆ ಸಿಹಿ ಸುದ್ದಿ.. ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ ಮತ್ತೆ ಇಂಡಿಯನ್ ಪ್ರಿಮಿಯರ್ ಲೀಗ್ ಗೆ ವಾಪಸ್ ಆಗಲಿದ್ದಾರೆ.
ಆದ್ರೆ ಈ ಬಾರಿ ಸುರೇಶ್ ರೈನಾ ಅಭಿಮಾನಿಗಳಿಗೆ ರೈನಾರ ಧನಾಧನ್ ಬೌಂಡರಿ – ಸಿಕ್ಸರ್ ಗಳ ಹಬ್ಬ ಸಿಗೋದಿಲ್ಲ. ಬದಲಾಗಿ ಮಾತಿನ ಪಟಾಕಿಗಳು ಸಿಡಿಯಲಿವೆ.
ಹೌದು..! ಮಿಸ್ಟರ್ ಐಪಿಎಲ್ ಖ್ಯಾತಿ ಸುರೇಶ್ ರೈನಾ ಈ ಬಾರಿ ಐಪಿಎಲ್ ನಲ್ಲಿ ವೀಕ್ಷಣೆ ವಿವರಣೆಗಾರರಾಗಿ ಅವತಾರ ಎತ್ತಲಿದ್ದಾರೆ.
ಕಳೆದ 12 ವರ್ಷಗಳಿಂದ ಸಿಎಸ್ ಕೆ ತಂಡದಲ್ಲಿ ಬ್ಯಾಟ್ ಬೀಸಿದ್ದ ಸುರೇಶ್ ರೈನಾ, ಚೆನ್ನೈ ತಂಡದ ಅವಿಭಾಜ್ಯ ಅಂಗವಾಗಿದ್ದರು.
ಆದ್ರೆ ಈ ಬಾರಿ ಮೆಗಾ ಹರಾಜಿನಲ್ಲಿ ರೈನಾ ಅನ್ ಸೋಲ್ಡ್ ಆದರು. ಇದು ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿತು.
ಮುಖ್ಯವಾಗಿ ಸಿಎಸ್ ಕೆ ಅಭಿಮಾನಿಗಳೇ ತಂಡದ ವಿರುದ್ಧ ಸೋಶಿಯಲ್ ಮೀಡಿಯಾ ಮೂಲಕ ಆಕ್ರೋಶ ಹೊರಹಾಕಿದರು.
ಈ ಮಧ್ಯೆ ಗುಜರಾತ್ ಟೈಟಾನ್ಸ್ ತಂಡಕ್ಕೆ ಸುರೇಶ್ ರೈನಾ ಸೇರ್ತಾರೆ ಅನ್ನೋ ಸುದ್ದಿ ಹರಿದಾಡಿತ್ತು. ಆದ್ರೆ ಗುಜರಾತ್ ಟೈಟಾನ್ಸ್ ರೈನಾಯತ್ತ ಮುಖ ಮಾಡಲಿಲ್ಲ.
ಆದ್ರೆ ಈಗ ಸುರೇಶ್ ರೈನಾ ಐಪಿಎಲ್ ನಲ್ಲಿ ವೀಕ್ಷಣೆ ವಿವರಣೆಗಾರನಾಗಿ ಕಾಣಿಸಿಕೊಳ್ಳಲಿದ್ದಾರೆ. ರೈನಾ ಈಗಗಾಲೇ ಸ್ಟಾರ್ ಸ್ಪೋರ್ಟ್ಸ್ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ.









