ಮಿಸ್ಟರ್ ಐಪಿಎಲ್ ಎಂದೇ ಹೆಸರುವಾಸಿಯಾದ ಸುರೇಶ್ ರೈನಾ ಈಗ ಚಿತ್ರರಂಗದಲ್ಲಿ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ. ಚಲನಚಿತ್ರ ವಲಯದ ಮೂಲಗಳ ಪ್ರಕಾರ, ರೈನಾ ಶೀಘ್ರದಲ್ಲೇ ತಮಿಳು ಚಿತ್ರದಲ್ಲಿ ನಟನೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಪರ ಆಡಿದ ರೈನಾಗೆ ತಮಿಳುನಾಡಿನಲ್ಲಿ ಭಾರೀ ಅಭಿಮಾನಿಗಳ ಬೆಂಬಲವಿದ್ದು, ಚಿತ್ರರಂಗದಲ್ಲಿ ಇವರ ಪ್ರವೇಶ ಸಹಜವಾಗಿಯೇ ನಡೆಯುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಇದುವರೆಗೆ ಕಪಿಲ್ ದೇವ್, ಇರ್ಫಾನ್ ಪಠಾಣ್, ಹರ್ಭಜನ್ ಸಿಂಗ್, ಶ್ರೀಶಾಂತ್ ಹೀಗೆ ಹಲವಾರು ಮಾಜಿ ಕ್ರಿಕೆಟಿಗರು ಸಿನಿಮಾಗಳಲ್ಲಿ ನಟಿಸಿ ಚಿತ್ರರಂಗದಲ್ಲಿ ತಮ್ಮನ್ನು ತಾವು ತೋರಿಸಿದ್ದಾರೆ.
ಚಿತ್ರದ ಕುರಿತು ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲವಾದರೂ, ಕ್ರಿಕೆಟ್ ವಲಯದಿಂದ ಸಿನಿಮಾ ಲೋಕಕ್ಕೆ ಕಾಲಿಡುತ್ತಿರುವ ರೈನಾಗೆ ಅಭಿಮಾನಿಗಳು ಹಾಗೂ ಚಿತ್ರರಸಿಕರಿಂದ ಭಾರಿ ನಿರೀಕ್ಷೆ ಇದೆ. ಮುಂದಿನ ದಿನಗಳಲ್ಲಿ ಅವರ ಪಾತ್ರ ಹಾಗೂ ಸಿನಿಮಾ ವಿವರಗಳು ಬಹಿರಂಗವಾಗುವ ನಿರೀಕ್ಷೆಯಿದೆ.








