Surya Kumar : ಏಕದಿನ ಪಂದ್ಯ ಆಟದ ಬಗ್ಗೆ ಸೂರ್ಯ ಕುಮಾರ್ ಗೆ ಸಲಹೆ ನೀಡಿದ ರವಿಶಾಸ್ತ್ರಿ
ಏಕದಿನ ಪಂದ್ಯಗಳು ಟಿ20ಗಿಂತ ಎರಡು ಪಟ್ಟು ದೊಡ್ಡದು ಎಂಬುದನ್ನು ಗಮನದಲ್ಲಿಟ್ಟು ಕೊಳ್ಳಬೇಕು ಎಂದು ರವಿಶಾಸ್ತ್ರಿ (ravishastri)ಸೂರ್ಯ ಕುಮಾರ್ ಗೆ ಎಚ್ಚರಿಕೆ ನೀಡಿದ್ದಾರೆ.
ಅಮೆಜಾನ್ ಪ್ರೈಮ್ ನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಮಾಜಿ ಕೋಚ್ ರವಿಶಾಸ್ತ್ರಿ,
ಏಕದಿನ ಪಂದ್ಯಗಳಲ್ಲಿ ಹೆಚ್ಚು ಎಸೆತಗಳನ್ನು ಎದುರಿಸಲು ಅವಕಾಶ ಇರುತ್ತೆ. ಏಕದಿನ ಪಂದ್ಯಗಳಲ್ಲಿ ಮೊದಲ 30-40ರನ್ ಗಳಿಸಲು ಸಮಯ ತೆಗೆದುಕೊಂಡು ಕೊನೆ ಹಂತದಲ್ಲಿ ಬಿರುಸಿನ ಆಟವಾಡಬೇಕು ಎಂದು ಸೂರ್ಯ ಕುಮಾರ್ ಗೆ ಸಲಹೆ ನೀಡಿದ್ದಾರೆ.
ಸೂರ್ಯ ಕುಮಾರ್ ಬಗ್ಗೆ ಮಾತನಾಡಿದ ರವಿಶಾಸ್ತ್ರಿ, ಸೂರ್ಯ ಅದ್ಬುತ ಫಾರ್ಮ್ ನಲ್ಲಿದ್ದರೂ ಈ ವಿಷಯ ಗಮನದಲ್ಲಿಟ್ಟುಕೊಂಡರೆ ಪ್ರದರ್ಶನದಲ್ಲಿ ಸುಧಾರಣೆ ಕಾಣುತ್ತಾರೆ. ಆಟ ಎನ್ನುವುದು ಯಾರನ್ನೂ ಕಾಯುವುದಿಲ್ಲ. ಸಿಗುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಪರಿಸ್ಥಿತಿಯನ್ನು ಗೌರವಿಸಿದ್ರೆ ಅದು ನಮ್ಮನ್ನು ಗೌರವಿಸುತ್ತದೆ. ಸೂರ್ಯ ಸ್ಮಾರ್ಟ್ ಕ್ರಿಕೆಟರ್ ಆಗಿದ್ದು, ಈ ವಿಷಯಗಳನ್ನು ಬೇಗನೆ ಕಲಿಯುವ ನಿರೀಕ್ಷೆ ಇದೆ ಎಂದು ಹೇಳಿದರು.
suryakumar-ravi-shastri-who-advised-surya-kumar-about-the-odi-game